Advertisement

ನಾದಮಯ ಈ ಲೋಕವೆಲ್ಲಾ…

04:21 PM Feb 03, 2018 | |

ಡಾ. ರಾಜ್‌ ಕುಮಾರ್‌ ಅವರು ಹಾಡಿರುವ ಗೀತೆಗಳು ಇಂದಿಗೂ, ಎಂದೆಂದಿಗೂ ಹಿಟ್‌ ಹಾಡುಗಳು. ಸೋಲೊ, ಡುಯಟ್‌, ಭಕ್ತಿಗೀತೆ, ಶಾಸ್ತ್ರೀಯ ಹೀಗೆ ಬಹುತೇಕ ಪ್ರಕಾರಗಳಲ್ಲಿ ಅವರ ಹಾಡುಗಳು ಮೂಡಿ ಬಂದಿವೆ. ಇಂದಿಗೂ ರೇಡಿಯೊದಲ್ಲಿ, ಟಿವಿಯಲ್ಲಿ ಅವರ ಹಾಡು ಕೇಳಿ ಬಂದರೆ ಮೈಮರೆಯುವ ದೊಡ್ಡ ವರ್ಗವೇ ಇದೆ.

Advertisement

ನಮ್ಮ ನಮ್ಮ ಮನೆಗಳಲ್ಲಿ ಅಣ್ಣಾವ್ರ ಸಿನಿಮಾದ ಹಾಡುಗಳನ್ನು ಕೇಳುವುದು ಒಂದು ರೀತಿಯ ಖುಷಿಯಾದರೆ, ದೊಡ್ಡ ವೇದಿಕೆಯಲ್ಲಿ, ಸಂಗೀತಗಾರರು ಮತ್ತು ಗಾಯಕರ ಸಮ್ಮುಖದಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ರಾಜ್‌ ಅಬಿಮಾನಿಗಳ ನಡುವೆ ಕುಳಿತು ಅವರ ಆಲಿಸುವುದರ ಸಂತಸ ಬೇರೆಯೇ.

ಅಂಥ ಒಂದು ರಸಸಂಜೆ ಕಾರ್ಯಕ್ರಮ “ನಾದಮಯ’ ನಗರದಲ್ಲಿ ಆಯೋಜನೆಗೊಂಡಿದೆ. ಕಲ್ಲೂರ್‌ ಎಂಟಟೇìನ್‌ಮೆಂಟ್‌ ಸಂಸ್ಥೆ ಇದನ್ನು ಆಯೋಜಿಸಿದೆ. ಗಾಯಕರಾದ ವಿಕಾಸ್‌ ವಸಿಷ್ಠ, ಆರ್‌.ಕೆ. ಸ್ಪರ್ಶ, ಶಶಿಕಲಾ ಸುನಿಲ್‌, ವಿಶ್ವಾಸ್‌ ವಸಿಷ್ಠ ಅವರು ರಾಜ್‌ ಕುಮಾರ್‌ ಅವರ ಗೀತೆಗಳಿಗೆ ದನಿಯಾಗಲಿದ್ದಾರೆ.

ಕೀಬೋರ್ಡ್‌ನಲ್ಲಿ ದೀಪಕ್‌, ತಬಲಾದಲ್ಲಿ ಅಮಿತ್‌ ರಾಜ್‌, ರಿದಂಪ್ಯಾಡ್‌ನ‌ಲ್ಲಿ ಅಭಿಷೇಕ್‌, ಗಿಟಾರ್‌ನಲ್ಲಿ ವಿನಯ ಶರ್ಮ ಮತ್ತು ಪ್ರಾರ್ಥನಾ ಸಹಕಾರ ನೀಡಲಿದ್ದಾರೆ. ಡಾ. ರಾಜ್‌ ಅಬಿಮಾನಿಗಳು ತಪ್ಪದೇ ಹಾಜರಾತಿ ನೀಡಬೇಕಾದ ಕಾರ್ಯಕ್ರಮವಿದು.

ಎಲ್ಲಿ?: ರಮಣ ಮಹರ್ಷಿ ಆಡಿಟೋರಿಯಂ, ಸಂಜಯ ನಗರ
ಯಾವಾಗ?: ಫೆ. 9, ಶುಕ್ರವಾರ ಸಂಜೆ 5
ಪ್ರವೇಶ: ಉಚಿತ

Advertisement
Advertisement

Udayavani is now on Telegram. Click here to join our channel and stay updated with the latest news.

Next