ಹೊಸದಿಲ್ಲಿ: ಶೀರ್ಷಿಕೆ ನೋಡಿ ಕ್ರಿಕೆಟ್ ಅಭಿಮಾನಿಗಳು ಅಚ್ಚರಿಪಡಬಹುದು. ಕಳೆದ 90ರ ದಶಕದಲ್ಲಿ ಟಿ20 ಮಾದರಿಯ ಕ್ರಿಕೆಟಿನ ಕಲ್ಪನೆಯೇ ಇರಲಿಲ್ಲ, ಇನ್ನು ಅಂದಿನ ತಂಡವನ್ನು ಕಟ್ಟಿದ್ದಾದರೂ ಹೇಗೆ ಎಂದು!
ಆದರೆ ಇದೊಂದು ಕಾಲ್ಪನಿಕ ತಂಡ. 1990ರ ದಶಕದ ಬಿಗ್ ಹಿಟ್ಟರ್, ಆಲ್‌ರೌಂಡರ್ ಮತ್ತು ಘಾತಕ ಬೌಲರ್‌ಗಳನ್ನು ಆಯ್ದು ಈ ತಂಡವನ್ನು ರಚಿಸಲಾಗಿದೆ. ಇವರ್ಯಾರೂ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದವರಲ್ಲ.
ಅಂದಿನವರಿಗೆ ಚುಟುಕು ಕ್ರಿಕೆಟ್ ಆಡುವ ಅವಕಾಶ ಲಭಿಸಿದ್ದರೆ ಯಾರೆಲ್ಲ ಮೆರೆದಾಡುತ್ತಿದ್ದರು, ಯಾರೆಲ್ಲ ಸೂಪರ್ ಸ್ಟಾರ್‌ಗಳಾಗುತ್ತಿದ್ದರು ಎಂಬುದನ್ನು ಕಲ್ಪಿಸಿ 11 ಮಂದಿಯ ತಂಡವನ್ನು ರಚಿಸಲಾಗಿದೆ. ಇದರಲ್ಲಿ ಭಾರತದ ಇಬ್ಬರು ಸ್ಥಾನ ಪಡೆದಿದ್ದಾರೆ. ಇವರೆಂದರೆ, ಭಾರತೀಯ ಕ್ರಿಕೆಟಿನ ಪ್ರಪ್ರಥಮ ರಾಕ್‌ಸ್ಟಾರ್ ಎನಿಸಿದ ಅಜಯ್ ಜಡೇಜ ಮತ್ತು ಭಾರತಕ್ಕೆ “ಅರ್ಲಿ ಬ್ರೇಕ್’ ಒದಗಿಸಿಕೊಡುತ್ತಿದ್ದ ಜಾವಗಲ್ ಶ್ರೀನಾಥ್.
ಶ್ರೀಲಂಕಾದ ಬ್ಯಾಟಿಂಗ್ ದಿಗ್ಗಜ ಅರವಿಂದ ಡಿ ಸಿಲ್ವ ಈ ತಂಡದ ನಾಯಕರಾಗಿದ್ದಾರೆ. ತಂಡ ಹೀಗಿದೆ…
90ರ ದಶಕದ ಟಿ20 ಇಲೆವೆನ್: ಸಯೀದ್ ಅನ್ವರ್, ಮಾರ್ಕ್ ಗ್ರೇಟ್‌ಬ್ಯಾಚ್, ಇಜಾಜ್ ಅಹ್ಮದ್, ಅರವಿಂದ ಡಿ ಸಿಲ್ವ (ನಾಯಕ), ಅಜಯ್ ಜಡೇಜ, ಆ್ಯಂಡಿ ಫ್ಲವರ್ (ವಿ.ಕೀ.), ಮೈಕಲ್ ಬೆವನ್, ಬ್ರಿಯಾನ್ ಮೆಕ್‌ಮಿಲನ್, ಪ್ಯಾಟ್ ಸಿಮ್‌ಕಾಕ್ಸ್, ಆ್ಯಂಬ್ರೋಸ್, ಜಾವಗಲ್ ಶ್ರೀನಾಥ್.