Advertisement

ಇದು ಕನ್ನಡದ ಕಾದಲ್‌!

07:55 AM Aug 11, 2017 | Harsha Rao |

ಇಲ್ಲ ಈ ಹೆಸರು ಕೊಡೋಕ್ಕಾಗಲ್ಲ, ಕನ್ನಡದ ಹೆಸರನ್ನು ತನ್ನಿ ಎಂದರಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು. ಆದರೆ, ಮುರಳಿ ಅದೆಲ್ಲಿ ಪತ್ತೆ ಮಾಡಿದರೋ ಗೊತ್ತಿಲ್ಲ, ಇದು ತಮಿಳಿನ ಪದವಲ್ಲ, ಹಳೆಗನ್ನಡದ ಪದ ಎಂದು ವಾದ ಮಾಡಿದರು. ಕೊನೆಗೆ ಮಂಡಳಿಯವರು ಒಂದಿಷ್ಟು ಪರಿಶೀಲನೆ ಮಾಡಿ, ಇಟ್ಕೊà ಹೋಗಿ ಎಂದು ಟೈಟಲ್‌ ಕೊಟ್ಟು ಕಳಿಸಿದರಂತೆ. ಹಾಗೆ ಮಂಡಳಿಯಿಂದ ಪಾಸ್‌ ಆದ, “ಕಾದಲ್‌’ ಇದೀಗ ಬಿಡುಗಡೆಗೆ ಸಿದ್ಧವಿದೆ. ಈ ಚಿತ್ರವನ್ನು ಆಗಸ್ಟ್‌ 18ಕ್ಕೆ ಬಿಡುಗಡೆ ಮಾಡಲಾಗು ತ್ತದಂತೆ. ಚಿತ್ರದ ಬಿಡುಗಡೆಯ ಬಗ್ಗೆ ಹೇಳುವುದಕ್ಕೆಂದೇ ಮುರಳಿ ಮತ್ತು ತಂಡದವರು ಇತ್ತೀಚೆಗೆ ಗ್ರೀನ್‌ ಹೌಸ್‌ಗೆ ಬಂದಿದ್ದರು.

Advertisement

ಮುರಳಿ ಈ ಹಿಂದೆ “ಮಮ್ತಾಜ್‌’ ಎಂಬ ಚಿತ್ರ ಮಾಡಿದ್ದರು. ಇದೀಗ ಇನ್ನೂ ಒಂದು ಪ್ರೇಮಕಥೆಯೊಂದಿಗೆ ಅವರು ವಾಪಸ್ಸಾಗಿದ್ದಾರೆ. ಸರಿ ಏನು ಕಥೆ ಎಂದು ಕೇಳಲಾಯಿತು. ನೋಡದೆ ಪ್ರೀತಿ ಮಾಡದ ಪ್ರೇಮಿಗಳು, ಕೊನೆಗೆ ಹೇಗೆ ಒಂದಾಗುತ್ತಾರೆ ಎನ್ನುವುದೇ ಚಿತ್ರದ ಕಥೆ ಎಂದರು ಮುರಳಿ. ಈ ತರಹದ ಕಥೆಗಳು ಬಹಳ ಬಂದಿವೆಯಲ್ಲ ಎಂದು ಅವರಿಗೆ ನೆನಪಿಸಲಾಯಿತು. ಕಥೆ ಹಳೆಯದಾದರೂ ಈಗಿನ ಟ್ರೆಂಡ್‌ಗೆ ತಕ್ಕ ಹಾಗೆ ಕಥೆ ಮಾಡಿದ್ದಾಗಿ ಅವರು ಹೇಳಿಕೊಂಡರು. “ಇಲ್ಲಿ ನಾಯಕ ಮತ್ತು ನಾಯಕಿಯ ನಡುವೆ ಹೇಗೆ ಲವ್‌ ಆಗುತ್ತದೆ ಮತ್ತು ಅವರಿಬ್ಬರು ಹೇಗೆ ಒಂದಾಗುತ್ತಾರೆ ಎನ್ನುವುದು ಚಿತ್ರದ ಕಥೆ. ಬೆಂಗಳೂರು, ಮೈಸೂರು, ತುಮಕೂರು, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಎರಡು ಫೈಟುಗಳು, ನಾಲ್ಕು ಹಾಡುಗಳಿವೆ. ಕೇಬಲ್‌ ಪ್ರವೀಣ್‌ ಎನ್ನುವವರು ಸಂಗೀತ ಸಂಯೋಜಿಸಿದ್ದಾರೆ’ ಎಂದು ಮಾಹಿತಿ ಕೊಟ್ಟರು ಮುರಳಿ.

ಚಿತ್ರಕ್ಕೆ ಆಕಾಶ್‌ ನಾಯಕ. “ಪ್ರೀತಿಯಲ್ಲಿ ಅದೆಷ್ಟೇ ಕಷ್ಟಗಳು ಬಂದರೂ, ಹೇಗೆ ಅದನ್ನೆಲ್ಲಾ ಮೀರಿ ಬದುಕಬೇಕು ಎಂಬುದು ಕಥೆ. ಚಿತ್ರದಲ್ಲಿ ನಾನು ಚಿತ್ರವೊಂದರ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿರುತ್ತೀನಿ. ನಾಯಕಿ ಹಳ್ಳಿàಲಿರ್ತಾಳೆ’ ಎಂದರು. ಚಿತ್ರದಲ್ಲಿ ಧರಣಿ ಎಂಬ ಮೈಸೂರಿನ ಹುಡುಗಿ ನಾಯಕಿಯಾಗಿ ನಟಿಸಿದ್ದಾರೆ.

ಇನ್ನು ಚಿತ್ರವನ್ನು ಸುರೇಶ್‌ ನಿರ್ಮಿಸುತ್ತಿದ್ದಾರೆ. ಅವರಿಗೆ ನಿರ್ಮಾಪಕರಾಗಬೇಕೆಂಬ ಯೋಚನೆ ಇರಲಿಲ್ಲವಂತೆ. ಮಗನ ಕಾರಣಕ್ಕೆ ನಿರ್ಮಾಪಕರಾಗಿದ್ದಾಗಿ ಸುರೇಶ್‌ ಹೇಳಿಕೊಂಡರು. ಅಂದಹಾಗೆ, ನಾಯಕ ಆಕಾಶ್‌ ಅವರ ಮಗ. ಆತ ಹೀರೋ ಆಗಬೇಕು ಎಂದು ಆಸೆಪಟ್ಟಿದ್ದರಿಂದ, ಈ ಚಿತ್ರ ಮಾಡಿದ್ದಾಗಿ ಅವರು ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next