Advertisement
ಸಚಿವಾಲಯ ಹೊರಡಿಸಿರುವ ಪ್ರಕಟನೆಯಂತೆ, ಕಳೆದ ವರ್ಷದ ಜನವರಿಯಲ್ಲಿ 446 ಬಾರಿ ಕದನ ವಿರಾಮ ಉಲ್ಲಂಘನೆಯಾಗಿತ್ತು. ಆದರೆ, ಈ ವರ್ಷದ ಆರಂಭದಿಂದ ಅಕ್ಟೋಬರ್‌ವರೆಗಿನ ಅಂತರದಲ್ಲೇ ಪಾಕಿಸ್ಥಾನ 724 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಭಾರತ-ಪಾಕಿಸ್ಥಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಹಾಗೂ ಗಡಿ ನಿಯಂತ್ರಿತ ರೇಖೆ ಬಳಿ ಈ ಉಲ್ಲಂಘನೆಗಳಾಗಿದ್ದು ಇದು ಕಳೆದ ಏಳು ವರ್ಷಗಳಲ್ಲೇ ಅತ್ಯಧಿಕ ಎಂದು ಸಚಿವಾಲಯ ಹೇಳಿದೆ.
ಯಾವುದೇ ಯುದ್ಧವಿಲ್ಲದಿದ್ದರೂ ವಾರ್ಷಿಕವಾಗಿ ಸರಾಸರಿ 1,600 ಭಾರತೀಯ ಯೋಧರು ಸಾವನ್ನಪ್ಪುತ್ತಿದ್ದಾರೆಂಬ ಆತಂಕ ಕಾರಿ ವಿಚಾರ ಹೊರಬಿದ್ದಿದೆ. ರಸ್ತೆ ಅಪಘಾತ, ಆತ್ಮಹತ್ಯೆ, ಗಡಿ ಪ್ರದೇಶಗಳಲ್ಲಿನ ಗುಂಡಿನ ಚಕಮಕಿ ಹಾಗೂ ಒಳನಾಡಿನಲ್ಲಿ ಉಗ್ರರ ಉಪಟಳಗಳಿಂದ ಇಂಥ ಸಾವುಗಳು ಸಂಭವಿಸುತ್ತಿವೆ ಎಂದು ಹೇಳಲಾಗಿದೆ. ಇತ್ತೀಚೆಗೆ, ರಸ್ತೆ ಅಪಘಾತಗಳಲ್ಲೇ ಸೈನಿಕರು, ನೌಕಾಪಡೆಯ ಸೇಲರ್‌ಗಳು ಹಾಗೂ ವಾಯುಪಡೆಯ ಯೋಧರು ಸೇರಿ ಸುಮಾರು 350 ಮಂದಿ ಸಾವಿಗೀಡಾಗಿದ್ದಾರೆ.
Related Articles
3,323 ಕಿ.ಮೀ. ಭಾರತ ಮತ್ತು ಪಾಕಿಸ್ಥಾನ ನಡುವಿನ ಒಟ್ಟಾರೆ ಗಡಿ ರೇಖೆಯ ಉದ್ದ
Advertisement
221 ಕಿ.ಮೀ. ಗಡಿರೇಖೆಯ ಇಷ್ಟು ಭಾಗ ಅಂತಾರಾಷ್ಟ್ರೀಯ ಗಡಿರೇಖೆಯೆಂದು ಗುರುತು
740 ಕಿ.ಮೀ. ಗಡಿರೇಖೆಯ ಇಷ್ಟು ಭಾಗ ಜಮ್ಮು-ಕಾಶ್ಮೀರ ಬಳಿಯ ಗಡಿ ನಿಯಂತ್ರಣ ರೇಖೆ
2003ರ ನವೆಂಬರ್‌ನಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಕದನ ವಿರಾಮ ಕುರಿತಂತೆ ಒಪ್ಪಂದವೊಂದು ಏರ್ಪಟ್ಟಿದೆ. ಅದರನ್ವಯ, ಉಭಯ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿ ರೇಖೆಯ ಪ್ರಾಂತ್ಯಗಳಲ್ಲಿ, ಗಡಿ ನಿಯಂತ್ರಿತ ರೇಖೆ ಹಾಗೂ ಜಮ್ಮು ಕಾಶ್ಮೀರದ ಭೂಭಾಗಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ಎರಡೂ ದೇಶದ ಯೋಧರು ನಡೆಸುವ ಹಾಗಿಲ್ಲ. ಹಾಗಿದ್ದರೂ, ಪಾಕಿಸ್ಥಾನ ಪದೇ ಪದೇ ಈ ಒಪ್ಪಂದ ಉಲ್ಲಂ ಸುವ ಮೂಲಕ ಭಾರತವನ್ನು ಕೆಣಕುತ್ತಲೇ ಇದೆ.