Advertisement
ತೀರ್ಪು ಹೊರಬೀಳುತ್ತಿದ್ದಂತೆಯೇ, ಮಾಜಿ ಸಚಿವ ಎ.ರಾಜಾ, ಸಂಸದೆ ಕನಿಮೋಳಿ ಸೇರಿದಂತೆ ಆರೋಪಿಗಳು, ಅವರಿಗೆ ಸಂಬಂಧಿಸಿದ ಪಕ್ಷಗಳು, ಕಾರ್ಯಕರ್ತರು ನಿಟ್ಟುಸಿರು ಬಿಟ್ಟರು. ಜತೆಗೆ, ಯುಪಿಎ ಸರಕಾರಕ್ಕೆ 2ಜಿ ಹಗರಣದ ಮಸಿ ಬಳಿದ ಬಿಜೆಪಿ ಮೇಲೆ ಹರಿಹಾಯಲು ಆರಂಭಿಸಿ ದರು. ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಮಾತನಾಡಿ, “2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಯಾವುದೇ ನಷ್ಟ ಆಗಿಲ್ಲ ಎಂದು ನಾನು ಮೊದಲಿಂ ದಲೂ ಹೇಳುತ್ತಾ ಬಂದಿದ್ದೇನೆ. ಅದಿವತ್ತು ಸಾಬೀತಾಯಿತು. ನಿಜ ಹೇಳಬೇಕೆಂದರೆ, ಇದು ಸುಳ್ಳುಗಳ ಹಗರಣ. ಹಾಗಾಗಿ, ಅಂದಿನ ಸಿಎಜಿ ವಿನೋದ್ ರಾಯ್ ಹಾಗೂ ಬಿಜೆಪಿ ದೇಶದ ಕ್ಷಮೆ ಯಾಚಿಸಬೇಕು,’ ಎಂದು ಆಗ್ರಹಿಸಿದರು. ಜತೆಗೆ, ಸುಪ್ರೀಂ ಕೋರ್ಟ್ ಟೆಲಿಕಾಂ ಲೈಸೆನ್ಸ್‌ಗಳನ್ನು ರದ್ದು ಮಾಡಿದ್ದು ತಪ್ಪು ನಿರ್ಧಾರವಾಗಿತ್ತು ಎಂದೂ ಹೇಳಿದರು.
Related Articles
ಸಿಬಿಐನ ವಿಶೇಷ ಕೋರ್ಟ್ ನ್ಯಾಯಾಧೀಶ ಓಂ ಪ್ರಕಾಶ್ ಸೈನಿ ಹಿಂದೊಮ್ಮೆ ಕಾಮ ನ್ವೆಲ್ತ್ ಹಗರಣದ ವಿಚಾರಣೆಯನ್ನೂ ನಡೆಸಿದ್ದರು. ಮಾಜಿ ಸಚಿವ ಸುರೇಶ್ ಕಲ್ಮಾಡಿ, ಲಲಿತ್ ಭಾನೋಟ್, ವಿ.ಕೆ.ವರ್ಮಾ ಸೇರಿದಂತೆ ಪ್ರಮುಖರನ್ನು ಒಮ್ಮೆ ಕಂಬಿ ಎಣಿಸು ವಂತೆ ಮಾಡಿದ್ದೂ ಇವರೇ. ಇಂಥ ಹೆಗ್ಗಳಿಕೆ ಇರುವ ಸೈನಿ ಆರಂಭದದಲ್ಲಿ ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆ³ಕ್ಟರ್ ಆಗಿದ್ದರು. ಪೊಲೀಸ್ ಇಲಾಖೆಗೆ ಸೇರಿ ಆರು ವರ್ಷಗಳ ಬಳಿಕ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಪರೀಕ್ಷೆ ಬರೆದರು. ಅದರಲ್ಲಿ ಉತ್ತೀರ್ಣಗೊಂಡು ನ್ಯಾಯಾಂಗ ಸೇವೆಗೆ ಬಂದರು. ಸೈನಿ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ.ಕೆ.ಸಿಂ Ì ಮತ್ತು ಎ.ಕೆ.ಗಂಗೂಲಿ ಅವರು ವಿಶೇಷ ಕೋರ್ಟ್‌ಗೆ ನ್ಯಾಯಾಧೀಶರನ್ನಾಗಿ ನೇಮಿಸಿದ್ದರು. ಕೆಂಪು ಕೋಟೆಯಲ್ಲಿ ನಡೆದ ಶೂಟೌಟ್, ನಾಲ್ಕೋ ಲಂಚ ಪ್ರಕರಣಗಳ ವಿಚಾರಣೆಯನ್ನೂ ಅವರು ನಡೆಸಿದ್ದರು.
Advertisement
ಇಲ್ಲದ “ಹಗರಣ’ದಲ್ಲಿ “ಹಗರಣ’ವ ಕಂಡರು!“ಕೆಲವು ವ್ಯಕ್ತಿಗಳೇ ಆಯ್ದ ಸತ್ಯಗಳನ್ನು ಕಲಾತ್ಮಕ ವಾಗಿ ಜೋಡಿಸಿ, ಹಗರಣವೇ ಅಲ್ಲದ್ದನ್ನು “ಹಗರಣ’ವನ್ನಾಗಿ ಸೃಷ್ಟಿಸಿದರು.’ ಹೀಗೆಂದು ಹೇಳಿದ್ದು ಬೇರ್ಯಾರೂ ಅಲ್ಲ. ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಕೋಲಾಹಲವೆಬ್ಬಿಸಿದ 2ಜಿ ಲೈಸೆನ್ಸ್ ಹಂಚಿಕೆ ಹಗರಣದ ತೀರ್ಪು ನೀಡಿದ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಒ.ಪಿ.ಸೈನಿ. ಹಗರಣದಿಂದಾಗಿ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ವರದಿ ನೀಡಿದ್ದ ಮಹಾಲೇಖಪಾಲರು ಹಾಗೂ ತನಿಖೆ ನಡೆಸಿದ ಸಿಬಿಐ ವಿರುದ್ಧ ನ್ಯಾಯಾಧೀಶರು ಕಿಡಿ ಕಾರಿದ್ದಲ್ಲದೆ, “ಇಲ್ಲದ ಹಗರಣದಲ್ಲಿ ಹಗರಣ ವನ್ನು ಕಂಡವರಿವರು’ ಎಂದರು. ದೂರ ಸಂಪರ್ಕ ಇಲಾಖೆಯ ಅಧಿಕಾರಿಗಳ ವಿವಿಧ ಕ್ರಿಯೆಗಳು ಮತ್ತು ಲೋಪಗಳಿಂದಾಗಿ ಎಲ್ಲರೂ ಇದರಲ್ಲಿ ಹಗರಣವೊಂದಿದೆ ಎಂದು ಭಾವಿಸಿ ದರು. ಇನ್ನು ಕೆಲವರಂತೂ ಕೆಲವೇ ಕೆಲವು ಸತ್ಯಗಳನ್ನು ಜೋಡಿಸಿ, ಎಲ್ಲವನ್ನೂ ವೈಭವೀ ಕರಿಸಿ ಹಗರಣವಿರು ವಂತೆ ಬಿಂಬಿಸಿದರು. ಇಲಾಖೆಯ ಅಧಿಕಾರಿಗಳು ಕಡತಗಳನ್ನು ಕ್ರಮಬದ್ಧವಾಗಿ ಜೋಡಿಸಿಡಲಿಲ್ಲ. ಒಂದಕ್ಕೊಂದು ಮಿಶ್ರಣ ಮಾಡಿ ಗೊಂದಲ ಸೃಷ್ಟಿಸಿದರು. ಇದೂ ಕೂಡ ಸಮಸ್ಯೆ ಕ್ಲಿಷ್ಟಕರವಾಗಲು ಕಾರಣವಾ ಯಿತು ಎಂದೂ ಹೇಳಿದರು ನ್ಯಾಯಾಧೀಶ ಸೈನಿ.