Advertisement
ತಾಲೂಕಿನ ಗಂಡಬೊಮ್ಮನಹಳ್ಳಿ ಗೋಶಾಲೆಗೆ ಬರುವ ಜಾನುವಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅವುಗಳಿಗೆ ಮೇವು ಪೂರೈಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಗೋಶಾಲೆಯಲ್ಲಿ ಮೇವಿನ ಕೊರತೆ ಕಂಡು ಬರುತ್ತಿದ್ದು , ಹಸಿ ಮೇವು ಇಲ್ಲದೇ ಜಾನುವಾರುಗಳು ಕಂಗಾಲಾಗಿವೆ. ಹಸಿ ಮೇವು ನೀಡುವ ಮೂಲಕ ಇಲ್ಲಿನ ಗೋಶಾಲೆಯ ಜಾನುವಾರುಗಳು ಚೆನ್ನಾಗಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಈಗ ಅ ಧಿಕಾರಿಗಳ ಮೇಲಿದೆ. ತಾಲೂಕಿನಲ್ಲಿರುವ ಏಕೈಕ ಗೋಶಾಲೆಯಲ್ಲಿ ಈ ಮೊದಲು ಸುಮಾರು 4300 ಜಾನುವಾರಗಳು ಇದ್ದವು. ಆದರೆ, ಕಳೆದೊಂದು ತಿಂಗಳಿಂದ ಇಲ್ಲಿಯವರೆಗೆ ಈಗ 7400 ಜಾನುವಾರುಗಳು ಗೋಶಾಲೆಗೆ ಬಂದಿವೆ. ಜಾನುವಾರುಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಪ್ರತಿನಿತ್ಯ 30 ಟನ್ ಮೇವು ಪೂರೈಕೆ ಮಾಡಲಾಗುತ್ತದೆ. ಗೋಶಾಲೆಯನ್ನು ತಿಂಗಳ ಕಾಲ ಮುಂದುವರಿಸಿದರೆ 900 ಟನ್ ಮೇವು ಅಗತ್ಯವಿದೆ. ಈಗಾಗಿ ಮೇವು ಪೂರೈಕೆ ಮಾಡುವುದು ಹೇಗೇ ಎಂಬುದು ಅಧಿ ಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಸ್ಥಳೀಯವಾಗಿ ಮೇವು ಸಿಗುತ್ತಿಲ್ಲ. ಹೀಗಾಗಿ ಗೋಶಾಲೆಯನ್ನು ಸರ್ಕಾರ ಮುಂದುವರಿಸಬೇಕು. ಅಲ್ಲದೇ ಇಲ್ಲಿಯವರೆಗೂ ನಾಲ್ಕೈದು ತಿಂಗಳು ಇಲ್ಲಿನ ಗೋಶಾಲೆಯ ಜಾನುವಾರುಗಳು ಒಣಮೇವು ತಿಂದು ಬಡಕಲಾಗಿವೆ. ಈಗ ನದಿ ದಡ ಇರುವ ಪ್ರದೇಶದ ಕಡೆ ಮಳೆಯಾಗಿರುವ ಕಡೆ ಹಸಿ ಮೇವು ಸಿಗುತ್ತದೆ. ಇಲ್ಲಿನ ಜಾನುವಾರುಗಳಿಗೆ ಹಸಿ ಮೇವು ಪೂರೈಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗಂಡಬೊಮ್ಮನಹಳ್ಳಿ ಗ್ರಾಮದ ರೈತ ಪಾಪಯ್ಯ ಆಗ್ರಹಿಸಿದ್ದಾರೆ.
Related Articles
ಎಲ್.ಕೃಷ್ಣಮೂರ್ತಿ ತಹಶೀಲ್ದಾರ್, ಕೂಡ್ಲಿಗಿ.
Advertisement
ಗೋಶಾಲೆಯಲ್ಲಿರುವ ಜಾನುವಾರುಗಳಿಗೆ ಸಮಾರ್ಪಕ ಮೇವು, ನೀರು ಪೂರೈಸಲಾಗಿದೆ. ಪ್ರಸುತ್ತ ನಿತ್ಯ 30 ಟನ್ ಮೇವು ವಿತರಿಸುತ್ತಿದ್ದು, ಸೊಪ್ಪೆ ಮತ್ತು ಭತ್ತದ ಮೇವು ಸಂಗ್ರಹವಿದೆ. ಜಾನುವಾರುಗಳ ನಿತ್ಯ ಆರೋಗ್ಯ ತಪಾಸಣೆಮಾಡಲಾಗುತ್ತಿದ್ದು, ಪಶುವೈದ್ಯ ಕೇಂದ್ರ ತೆರೆಯಲಾಗಿದೆ. ಅಗತ್ಯ ಮೇವು ಮೇವಿನ ಬ್ಯಾಂಕಿನಿಂದ ಬರುತ್ತದೆ. ಸ್ವತ್ಛತೆಗೆ ಒತ್ತು ನೀಡಲಾಗಿದೆ.
ಯಜಮಾನಪ್ಪ, ಕಂದಾಯ ನಿರೀಕ್ಷಕ, ಗೋಶಾಲೆ ಉಸ್ತುವಾರಿ ಅಧಿಕಾರಿ ಕೆ.ನಾಗರಾಜ