ತಿರುವನಂತಪುರಂ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಭಾರತ ತಂಡವು ಇದೀಗ ದಕ್ಷಿಣ ಆಫ್ರಿಕಾ ಸರಣಿಗೆ ತಯಾರಾಗಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಕೇರಳದ ತಿರುವನಂತಪುರಂನಲ್ಲಿ ನಡೆಯಲಿದ್ದು, ಎರಡೂ ಪಂದ್ಯಗಳು ನಗರಕ್ಕೆ ಆಗಮಿಸಿದೆ.
ಬಹುಕಾಲದ ಬಳಿಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ತಿರುವನಂತಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂ ಇದೀಗ ವಿದ್ಯುತ್ ಕೊರತೆ ಕಾರಣದಿಂದ ಮುಜುಗರಕ್ಕೆ ಒಳಗಾಗಗಿದೆ. ಈ ಸ್ಟೇಡಿಯಂನ ಸುಮಾರು RS 2.5 ಕೋಟಿ ರೂ. (ಯುಎಸ್ ಡಾಲರ್ 400,000) ರಷ್ಟು ವಿದ್ಯುತ್ ಬಿಲ್ ಪಾವತಿಸದ ಕಾರಣ ಕೇರಳ ರಾಜ್ಯ ವಿದ್ಯುತ್ ಮಂಡಳಿಯು ಸ್ಟೇಡಿಯಂನ ವಿದ್ಯುತ್ ಸಂಪರ್ಕ ಕಡಿತ ಮಾಡುವ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.
ಗ್ರೀನ್ ಫೀಲ್ಡ್ ಸ್ಟೇಡಿಯಂ ಕೇರಳ ಸ್ಪೋರ್ಟ್ಸ್ ಫೆಸಿಲಿಟಿ (ಕೆಎಸ್‌ಎಫ್‌ಎಲ್) ಒಡೆತನದಲ್ಲಿದೆ. ಅವರಿಂದ ಕೇರಳ ಕ್ರಿಕೆಟ್ ಅಸೋಸಿಯೇಷನ್ ಮೈದಾನವನ್ನು ಬಾಡಿಗೆಗೆ ಪಡೆಯುತ್ತದೆ.
ಇದನ್ನೂ ಓದಿ:ಕರಾವಳಿಯಾದ್ಯಂತ ನವರಾತ್ರಿ ಸಡಗರಕ್ಕೆ ಚಾಲನೆ : ಶತಮಾನೋತ್ಸವ ಶಾರದಾ ಮಾತೆ ವಿಗ್ರಹ ಪ್ರತಿಷ್ಠೆ
ವಿದ್ಯುತ್ ಸಂಪರ್ಕವಿಲ್ಲದೆ ಪಂದ್ಯ ನಡೆಸುವುದು ಅಸಾಧ್ಯವಾದ ಕಾರಣ ಕೆಸಿಎ ಸಮಸ್ಯೆ ಬಗೆಹರಿಸಲು ಪ್ರಯತ್ನ ಪಟ್ಟಿದೆ. ಪಂದ್ಯ ಮುಗಿದ ಬಳಿಕ ಬಾಕಿ ಮೊತ್ತವನ್ನು ಆದಷ್ಟು ಬೇಗ ಪಾವತಿ ಮಾಡುವುದಾಗಿ ಕೆಸಿಎ ಭರವಸೆ ನೀಡಿದೆ. ಹೀಗಾಗಿ ಸೆ.28ರಂದು ನಡೆಯಲಿರುವ ಪಂದ್ಯಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಪಂದ್ಯ ಯೋಜನೆಯಂತೆ ನಡೆಯಲಿದೆ ಎಂದು ವರದಿ ಹೇಳಿದೆ.
ಅಲ್ಲದೆ ರಾತ್ರಿ ನಡೆಯುವ ಪಂದ್ಯವಾದ ಕಾರಣ ಫ್ಲಡ್ ಲೈಟ್ ಗಳಿಗಾಗಿ ಹೆಚ್ಚುವರಿ ಜನರೇಟರ್ ಬಳಸಲು ನಿರ್ಧರಿಸಲಾಗಿದೆ.