Advertisement

Thirthahalli: ಅಕ್ರಮ ಮರಳು ಮಾಫಿಯಾಕ್ಕೆ ಬ್ರೇಕ್ ಹಾಕೋದ್ಯಾರು !?

05:39 PM Nov 12, 2024 | Kavyashree |

ತೀರ್ಥಹಳ್ಳಿ: ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಈ ಅಕ್ರಮ ಮರಳು ಮಾಫಿಯಾಕ್ಕೆ ಅಧಿಕಾರಿಗಳೇ ಬೆಂಬಲ ಕೊಡುತ್ತಿದ್ದಾರಾ? ಎಂಬ ಪ್ರಶ್ನೆ ಒಂದೆಡೆಯಾದರೆ ಈ ಅಕ್ರಮ ಮರಳುಗಾರಿಕೆಯಿಂದ ಹಲವು ಸಮಸ್ಯೆಗಳು ಆಗುತ್ತಿದೆ. ರಸ್ತೆಗಳೆಲ್ಲವೂ ಮರಳು ಲಾರಿಯಿಂದ ಹೊಂಡ ಗುಂಡಿಗಳು ಬೀಳುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಬುಕ್ಲಾಪುರ, ಮಂಡಗದ್ದೆ, ಮುಂಡವಳ್ಳಿ, ಹುಣಸವಳ್ಳಿ, ತುದೂರು, ಬಗ್ಗೋಡಿಗೆ, ಮಹಿಷಿ, ಮಾಳೂರು, ಆಂದಿನಿ ಹೀಗೆ ನೂರಾರು ಕಡೆ ಮರಳು ಮಾಫಿಯಾ ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಇತ್ತ ರಸ್ತೆಗಳಲ್ಲಿ ಮರಳು ಲಾರಿಗಳು ವಿಪರೀತವಾಗಿ (ಗುಬ್ಬಿ ಲೋಡ್) ತುಂಬಿ ಓಡಾಡುತ್ತಿರುವ ಅಕ್ರಮ ಮರಳು ಗಾಡಿಗಳಿಂದ ರಸ್ತೆ ಹೊಂಡ ಗುಂಡಿಯಾಗುತ್ತಿರುವುದು ಒಂದೆಡೆಯಾದರೆ ಇತ್ತ ಅಕ್ರಮ ಮರಳುಗಾರಿಕೆಯಿಂದ ಸಾರ್ವಜನಿಕರಿಗೆ ತೀವ್ರವಾಗಿ ದಿನನಿತ್ಯ ತೊಂದರೆಯಾಗುತ್ತಿದೆ.

ಅಕ್ರಮ ಮರಳುಗಾರಿಕೆ, ಸಾಗಾಣಿಕೆ ತಡೆಯಬೇಕಾದ ಅಧಿಕಾರಿಗಳು ಕಂಡರೂ ಕಾಣದಂತೆ ಇರುವುದು ಅಧಿಕಾರಿಗಳ ನಡೆಯ ಕುರಿತು ಸಾರ್ವಜನಿಕರಲ್ಲಿ ಅನುಮಾನ ಬರುವಂತಾಗಿದೆ. ನಿತ್ಯ ಬೆಳಿಗ್ಗೆ, ಸಂಜೆ, ರಾತ್ರಿ ಸಮಯದಲ್ಲಿ ಇತ್ತೀಚಿಗೆ ಹಗಲಿನಲ್ಲೂ ಕೂಡ ಪಿಕಪ್ ಹಾಗೂ ಲಾರಿಗಳಲ್ಲಿ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಮಾಡಲಾಗುತ್ತಿದೆ.

ತೀರ್ಥಹಳ್ಳಿ ತಾಲೂಕಿನಾದ್ಯಂತ ವಿಪರೀತ ಮಳೆಯಿಂದ ಹೇರಳವಾಗಿ ತುಂಗಾ ನದಿಯ ಪಾತ್ರದಲ್ಲಿ ಮರಳು ಶೇಖರಣೆಯಾಗಿದ್ದು, ಇದನ್ನೇ ಕೆಲವರು ಬಂಡವಾಳ ಮಾಡುವ ಸಲುವಾಗಿ ಅಕ್ರಮವಾಗಿ ಮರಳು ತುಂಬಿ ಶಿವಮೊಗ್ಗ ಮಾರ್ಗದಲ್ಲಿ ಬೆಂಗಳೂರು ಹಾಗೂ ಇತರೆಡೆ ಒಂದು ಲೋಡಿಗೆ 50 ಸಾವಿರದಂತೆ ಮಾರಾಟ ಮಾಡುವ ದಂಧೆಗೆ ಇಳಿದಿದ್ದು, ಇದರ ಬಗ್ಗೆ ಅಧಿಕಾರಿಗಳು ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next