Advertisement
ಶನಿವಾರ ಸಂಜೆ ಗ್ರಾಮೀಣಾಭಿವೃದ್ಧಿ ಸಭಾಂಗಣದಲ್ಲಿ ನಡೆದ ತೆಪ್ಪೋತ್ಸವ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಆರ್’ಎಂ ಮಂಜುನಾಥ್ ಗೌಡರ ನೇತೃತ್ವದಲ್ಲಿ ಅದ್ದೂರಿ ತೆಪ್ಪೋತ್ಸವ ಹಾಗೂ ಎಳ್ಳಮಾವಾಸ್ಯೆ ಜಾತ್ರೆಯನ್ನು ನಡೆಸಲು ತೀರ್ಮಾನಿಸಲಾಯಿತು.
ಪಾರದರ್ಶಕವಾಗಿ ಲೆಕ್ಕ ಪತ್ರ ಕೊಟ್ಟಿದ್ದಾರೆ. ಅವರನ್ನೇ ಪುನಃ ಸಂಚಾಲಕರನ್ನಾಗಿ ಮಾಡಿ ಹಳೆ ಸಮಿತಿ ಜೊತೆಗೆ ಹೊಸಬರನ್ನು ಸೇರಿಸಿ ದಸರಾ ಕಾರ್ಯಕ್ರಮ ಆದಂತೆ ಆಗುವುದು ಬೇಡ ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕುಕ್ಕೆ ಪ್ರಶಾಂತ್ ಸಲಹೆ ನೀಡಿದರು. ತಕ್ಷಣವೇ ಪಟ್ಟಣ ಪಂಚಾಯಿತಿ ಸದಸ್ಯ ಕಂಡಿಲ್ ರಾಘವೇಂದ್ರ ಶೆಟ್ಟಿ ತೆಪ್ಪೋತ್ಸವ ಮೊದಲು ಹುಟ್ಟಿದ್ದಾ? ಕುಕ್ಕೆ ಪ್ರಶಾಂತ್ ಮೊದಲು ಹುಟ್ಟಿದ್ದಾ? ತಿಳಿದಿಲ್ಲ. ನಾವು ಗೌರವಯುತವಾಗಿ ಸಭೆಯಲ್ಲಿ ಮಾತನಾಡುತ್ತಿದ್ದೇವೆ ಅಂದ ಮೇಲೆ ನೀವು ಹಾಗೆ ಮಾತನಾಡಬೇಕು ಎಂದು ಹೇಳಿದಾಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಯಿತು.
Related Articles
Advertisement
ಆರ್’ಎಂ ಮಂಜುನಾಥ್ ಗೌಡ ಮಾತನಾಡಿ ಇಲ್ಲಿ ಅಭಿಪ್ರಾಯ ಹೇಳಲು ಎಲ್ಲರಿಗೂ ಮುಕ್ತ ಅವಕಾಶ ಇದೆ. ಅವರು ಮಾತನಾಡಿದಾಗ ನೀವು ಚಪ್ಪಾಳೆ ಹೊಡೆಯುವುದು, ನೀವು ಮಾತನಾಡಿದಾಗ ಅವರು ಚಪ್ಪಾಳೆ ಹೊಡೆಯುವುದಕ್ಕೆ ಇದು ರಾಜಕಾರಣ ಸಭೆಯಲ್ಲ, ದೇವಸ್ಥಾನಕ್ಕೆ ಸಂಬಂಧಪಟ್ಟ ರಾಮೇಶ್ವರ ತೆಪ್ಪೋತ್ಸವ ಪೂರ್ವ ಬಾವಿ ಸಭೆ ಎನ್ನುತ್ತಿದ್ದಂತೆ ಸಭೆ ಮದ್ಯ ಒಬ್ಬರು ನಿಮ್ಮವರು ಹೊಡೆದಿದ್ದು ಮೊದಲು ಚಪ್ಪಾಳೆ ಎನ್ನುತ್ತಿದ್ದಂತೆ ಆರ್ ಎಂ ಮಂಜುನಾಥ್ ಗೌಡ ಗರಂ ಆಗಿ ನಾನೇ ಈ ಬಾರಿ ಜಾತ್ರೆ ಮಾಡುತ್ತೇನೆ, ನನಗೂ ಅನುಭವ ಇದೆ ಎಂದು ಆರ್ಭಟಿಸಿದಾಗ ಇಡೀ ಸಭೆ ಮೌನವಾಯಿತು.
ಅಧಿಕಾರಿಗಳೇ ಜಾತ್ರೆ ನಡೆಸಲಿ ನಾವು ಅವರಿಗೆ ಸಹಕಾರ ನೀಡೋಣ. ಈ ಮನಸ್ತಾಪ ಎಲ್ಲಾ ಬೇಡ, ಶಾಸಕರು ಇದ್ದಾರೆ ತೀರ್ಮಾನ ಮಾಡುತ್ತಾರೆ. ಇದು ರಾಜಕಾರಣ ವಿಚಾರ ಅಲ್ಲ. ಯಾರೇ ಆದರೂ ಇದು ನಮ್ಮ ಊರಿನ ಜಾತ್ರೆ ಅದನ್ನು ಎಲ್ಲರು ಸೇರಿ ಮಾಡಬೇಕು. ಅದನ್ನು ಬಿಟ್ಟು ಹೀಗೆ ಗಲಾಟೆ ಮಾಡುವುದಾದರೆ ಅಧಿಕಾರಿಗಳೇ ಜಾತ್ರೆ ನಡೆಸುತ್ತಾರೆ ಎಂದು ಗರಂ ಆದರು.
ಹಿರಿಯ ಮುಖಂಡರ ಹೊಂದಾಣಿಕೆ ಕಿರಿಯರಲ್ಲಿ ಇಲ್ಲವೇ ..!?
ಶಾಸಕ ಆರಗ ಜ್ಞಾನೇಂದ್ರ ಹಾಗೂ ಆರ್ ಎಂ ಮಂಜುನಾಥ್ ಗೌಡರ ಮಾತಿನ ಶೈಲಿ ಸಭೆಯಲ್ಲಿದ್ದವರನ್ನು ಬೆರಗುಗೊಳಿಸುವಂತೆ ಮಾಡಿತು. ಸಭೆ ಆರಂಭದಲ್ಲಿ ಕಿರಿಯ ಕಾರ್ಯಕರ್ತರಲ್ಲಿರುವ ಹೊಂದಾಣಿಕೆ ಹೇಗೆ ಎಂಬುದು ತಿಳಿದರೆ, ಅದನ್ನೆಲ್ಲಾ ಸರಿಪಡಿಸುವ ಮೂಲಕ ಜಾತ್ರೆಯ ಸ್ಪಷ್ಟ ಚಿತ್ರಣ ಕೊಟ್ಟ ಹಿರಿಯ ರಾಜಕಾರಣಿಗಳನ್ನು ನೋಡಿದರೆ ಹಿರಿಯ ಮುಖಂಡರ ಹೊಂದಾಣಿಕೆ ಕಿರಿಯರಲ್ಲಿ ಇಲ್ಲವೇ ..!? ಎಂಬ ಅನುಮಾನ ಸಹ ಮೂಡಿತು.
ಇದನ್ನೂ ಓದಿ: Holehonnur: ಸರಕಾರದಿಂದ ಬಿಡುಗಡೆಯಾಗದ ಹಣ… ಗ್ರಾಮ ಪಂಚಾಯತ್ ಸದಸ್ಯನಿಂದ ರಸ್ತೆ ದುರಸ್ಥಿ