Advertisement

Thirthahalli; ನಂದಿ ಧ್ವಜಾರೋಹಣ ಮೂಲಕ ಎಳ್ಳಮಾವಾಸ್ಯೆ ರಾಮೇಶ್ವರ ದೇವರ ಜಾತ್ರೆಗೆ ಚಾಲನೆ

06:19 PM Jan 09, 2024 | Shreeram Nayak |

ತೀರ್ಥಹಳ್ಳಿ : ಸಾವಿರಾರು ವರ್ಷ ಇತಿಹಾಸವಿರುವ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರಿಗೆ ಐದು ದಿನಗಳ ಕಾಲ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದೇವೆ. ಈ ಐದು ದಿನಗಳ ಎಳ್ಳಮಾವಾಸ್ಯೆ ಜಾತ್ರೆಗೆ ಇಂದು ನಂದಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ್ದೇವೆ ಎಂದು ಪ್ರಧಾನ ತಂತ್ರಿಗಳಾದ ವೇ. ಬ್ರ. ಲಕ್ಷ್ಮೀಶ ತಂತ್ರಿಗಳು ಹೇಳಿದರು.

Advertisement

ರಾಮೇಶ್ವರ ದೇವಸ್ಥಾನದ ಎದುರು ಭಾಗದಲ್ಲಿ ಇರುವ 27 ಅಡಿ ನಂದಿ ಕಂಬಕ್ಕೆ ಮಂಗಳವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಮೊದಲನೇ ದಿವಸ ದೇವರಿಗೆ ಫಲನ್ಯಾಸ, ಪುಣ್ಯಾಹ, ದೇವಾನಾಂದಿ, ವೃಷಾಧಿವಾಸ ಹೋಮದ ನಂತರ ಧ್ವಜಾರೋಹಣ ಮಾಡಿದ್ದೇವೆ. ಸಂಜೆ ಕೂಡ ಹೋಮ ಹವನಗಳು ನಡೆಯಲಿವೆ.ಈ ವೇಳೆ ಅನೇಕ ಋತ್ವಿಜರು ಭಾಗವಹಿಸಲಿದ್ದಾರೆ ಎಂದರು.

ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿ ಪ್ರತಿವರ್ಷ ಲಕ್ಷಾಂತರ ಜನರು ಈ ಜಾತ್ರೆಗೆ ಹೊರ ಊರುಗಳಿಂದಲೂ ಆಗಮಿಸುತ್ತಾರೆ. ಮೂರು ದಿನಗಳ ಕಾಲ ಅಂದರೆ ಜ.11 ತೀರ್ಥಸ್ನಾನ, ಜ. 12 ರಥೋತ್ಸವ, ಜ 13. ತೆಪ್ಪೋತ್ಸವ ಹಾಗೂ ಈ ಮೂರು ದಿನಗಳ ಕಾಲ ಅನ್ನಸಂತರ್ಪಣೆ ಕೂಡ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಪ. ಪಂ ಅಧ್ಯಕ್ಷೆ ಗೀತಾ ರಮೇಶ್, ಜೀವಂದರ್ ಜೈನ್, ಸುಶೀಲಾ ಶೆಟ್ಟಿ, ರತ್ನಾಕರ್ ಶೆಟ್ಟಿ, ವಾಣಿ, ಸೇರಿದಂತೆ ಹಲವರು ಊರಿನ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next