Advertisement

Thirthahalli: ವಾಗ್ದೇವಿ ಶಾಲೆಯ 4 ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

04:56 PM Oct 01, 2024 | Kavyashree |

ತೀರ್ಥಹಳ್ಳಿ: ಶಾಲಾ ಶಿಕ್ಷಣ ಇಲಾಖೆಯವರು ಸೆ.30ರ ಸೋಮವಾರ ಭದ್ರಾವತಿಯಲ್ಲಿ ನಡೆಸಿದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಜಿಲ್ಲಾ ಮಟ್ಟದ ಕ್ರಿಕೆಟ್ ಆಯ್ಕೆಯಲ್ಲಿ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯ 4 ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Advertisement

ಅನುಜ್ (9ನೇ ತರಗತಿ), ಉತ್ಸವ್ ಗೌಡ (8ನೇ ತರಗತಿ), ವರ್ಚಸ್ (8ನೇ ತರಗತಿ) ಮತ್ತು ಪೂರ್ವ (7ನೇ ತರಗತಿ) ಅತ್ಯುತ್ತಮವಾಗಿ ತಮ್ಮ ಆಟ ಪ್ರದರ್ಶಿಸಿ ಶೈಕ್ಷಣಿಕ ವಿಭಾಗವಾಗಿರುವ ಬೆಂಗಳೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ಮಾರ್ಗದರ್ಶನವನ್ನು ನೀಡಿ, ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕರಿಸಿದ ಸಿಟಿ ಕ್ರಿಕೆಟ್ ಕ್ಲಬ್ ನ ಮುಖ್ಯಸ್ಥ ಅಬ್ದುಲ್ ಕಲಾಂ ಆಜಾದ್‌ ಅವರಿಗೆ ಹಾಗೂ ತರಬೇತಿದಾರ ಸುಬ್ರಹ್ಮಣ್ಯ ಸವರಿಗೆ ವಾಗ್ದೇವಿ ಶಿಕ್ಷಣ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಅಭಿನಂದಿಸಿ ಮುಂದಿನ ಕ್ರೀಡೆಗೆ ಶುಭಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next