Advertisement

ಚೀನದಲ್ಲಿ ಮೂರನೇ ಕೆನಡ ಪ್ರಜೆ ಪೊಲೀಸರ ವಶಕ್ಕೆ

03:20 PM Dec 19, 2018 | Team Udayavani |

ಬೀಜಿಂಗ್‌ : ಚೀನದ ಟೆಲಿಕಾಂ ಕಾರ್ಯ ನಿರ್ವಾಹಕ ನಿರ್ದೇಶಕರೊಬ್ಬರು ಈಚೆಗೆ ಕೆನಡದಲ್ಲಿ  ಬಂಧಿಸಲ್ಪಟ್ಟದ್ದನ್ನು ಅನುಸರಿಸಿ ಬೀಜಿಂಗ್‌ ಮತ್ತು ಒಟಾವಾ ನಡುವಿನ ರಾಜತಾಂತ್ರಿಕ ತಿಕ್ಕಾಟಗಳು ತಾರಕಕ್ಕೇರಿರುವ ನಡುವೆಯೇ ಚೀನದಲ್ಲಿ ಇಂದು ಬುಧವಾರ ಕೆನಡದ ಮೂರನೇ ಪ್ರಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Advertisement

ಚೀನದಲ್ಲಿ ಕೆನಡ ಪ್ರಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ ಎಂದು ಕೆನಡದ ವಿದೇಶ ಸಚಿವಾಲಯದ ವಕ್ತಾರ ಹೇಳಿರುವುದನ್ನು ಉಲ್ಲೇಖೀಸಿ ನ್ಯಾಶನಲ್‌ ಪೋಸ್ಟ್‌ ವರದಿ ಮಾಡಿದೆ. 

ಚೀನದಲ್ಲಿ ಕೆನಡ ಪ್ರಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿರುವುದಕ್ಕೂ ಕೆನಡದಲ್ಲಿ  ಈಚೆಗೆ ಚೀನದ ಹುವೇಯಿ ಮುಖ್ಯ ಹಣಕಾಸು ಅಧಿಕಾರಿ ಮೆಂಗ್‌ ವಾಂಝೋ ಅವರನ್ನು ಬಂಧಿಸಲಾಗಿರುವುದಕ್ಕೂ ನಂಟು ಇದೆಯೇ ಎಂಬುದನ್ನು ಕೆನಡ ವಿದೇಶ ವಕ್ತಾರ ಹೇಳಿಲ್ಲ .

Advertisement

Udayavani is now on Telegram. Click here to join our channel and stay updated with the latest news.

Next