Advertisement
ಬಹುದಿನಗಳ ಬೇಡಿಕೆಯಂತೆ ದೇಗುಲಗಳನ್ನು ನಿಯಂತ್ರಣ ಕಾಯ್ದೆಗಳಿಂದ ಮುಕ್ತಗೊಳಿ ಸಲು ಕಾನೂನು ತರಲು ಚಿಂತನೆ ನಡೆಸಿದೆ.
Related Articles
Advertisement
ಆಶಾದಾಯಕ ಬಜೆಟ್ಬಜೆಟ್ಗಳು ತಮ್ಮ ನಿರೀಕ್ಷೆಗಳಿಗೆ ಆಶಾ ದಾ ಯಕ ವಾಗಿಲ್ಲ ಎಂಬ ನೋವು ಜನತೆ ಯದ್ದಾಗಿದೆ. ಯಾರಿಗಾಗಿ ನಾವು ಬಜೆಟ್ ಮಾಡು ತ್ತೇವೆಯೋ ಅವರಲ್ಲಿ ಆಶಾಭಾವನೆ ಮೂಡಿ ಸುವ, ಅವರಿಗೆ ತೃಪ್ತಿ ತರುವ ನಿಟ್ಟಿನಲ್ಲಿ ಬಜೆಟ್‌ಗೆ ಹೊಸರೂಪ ನೀಡಲು ಯೋಜಿಸಿದ್ದೇನೆ. ಇದ ಕ್ಕಾಗಿ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ. ಸಚಿವರು, ಶಾಸಕರೊಂದಿಗೆ ಚರ್ಚಿಸಿ ಬಜೆಟ್ ಸಿದ್ಧಪಡಿಸುತ್ತೇನೆ ಎಂದರು. ಸಾಮಾಜಿಕ ನ್ಯಾಯ ಎಂಬುದು ರಾಜಕೀಯ ಬಂಡವಾಳವಾಗಿ ಬಳಕೆ ಆಗುತ್ತಿದೆ. ಸಾಮಾಜಿಕ ನ್ಯಾಯಕ್ಕೆ ಸಕಾರಾತ್ಮಕತೆ ನೀಡುವ ಚಿಂತನೆ ನಡೆದಿದೆ. ಸಾಮಾಜಿಕ ಸಮಾನತೆ-ಅವಕಾಶಗಳು ನೀಡಲಾಗಿದೆ. ಆಡಳಿತಾತ್ಮಕ ನ್ಯೂನತೆಗಳ ನಿವಾ ರಣೆಗೆ ಯತ್ನಿಸಲಾಗುವುದು. ನಾಲ್ಕೆ „ದು ತಿಂಗಳುಗಳಿಂದ ಸರಕಾರದಲ್ಲಿ ಭದ್ರ ಬುನಾದಿ ಕಾರ್ಯ ಮಾಡಿದ್ದು, ಜನವರಿಯಿಂದ ಎರಡನೇ ಆಯಾಮ ನೀಡುತ್ತೇನೆ. ಆಡಳಿತಾತ್ಮಕವಾಗಿ ಗಟ್ಟಿತನದ ನಿಲುವು ಕೈಗೊಳ್ಳುವೆ. ಇರುವ ವ್ಯವಸ್ಥೆ ಸರಿಪಡಿಸುವ, ಭ್ರಷ್ಟಾಚಾರ ಇಲ್ಲದೆ ಪಾರದರ್ಶಕ ಆಡಳಿತ ನೀಡುವುದಕ್ಕೆ ಒತ್ತು ನೀಡುವೆ. ಅಭಿವೃದ್ಧಿ, ರಾಜ್ಯದ ಹಿತ ಕಾಯುವ ವಿಚಾರದಲ್ಲಿ ಯಾವುದೇ ರಾಜಿಗೆ ಸಿದ್ಧನಿಲ್ಲ ಎಂದು ಅತ್ಯಂತ ಜವಾಬ್ದಾರಿ ಯುತವಾಗಿ ಹೇಳುತ್ತಿದ್ದೇನೆ ಎಂದರು. ಇದನ್ನೂ ಓದಿ:ದಲಿತರ ರಕ್ಷಣೆಗೆ ಸರಕಾರ ಬದ್ಧ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಷ್ಠೆ, ಸ್ವ ಹಿತಾಸಕ್ತಿ ಇಲ್ಲ
ನನಗೆ ಯಾವುದೇ ಪ್ರತಿಷ್ಠೆ, ಸ್ವ ಹಿತಾಸಕ್ತಿ ಇಲ್ಲ. ನನಗೇನಿದ್ದರೂ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಷ್ಠೆ, ರಾಜ್ಯದ ಜನರ ಹಾಗೂ ಪಕ್ಷದ ಕಾರ್ಯಕರ್ತರ ಹಿತ ಮುಖ್ಯವಾಗಿದೆ. ಪಕ್ಷದ ವರಿಷ್ಠರು, ಹಿರಿಯರಾದ ಯಡಿಯೂ ರಪ್ಪ, ಜಗದೀಶ ಶೆಟ್ಟರ್, ಸದಾನಂದ ಗೌಡರ ಮಾರ್ಗದರ್ಶನದಲ್ಲಿ ಸಂಪುಟ ಸಹೋದ್ಯೋಗಿ ಗಳು, ಶಾಸಕರು, ಕಾರ್ಯಕರ್ತರ ಸಹಕಾರ ಹಾಗೂ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ನೊಂದಿಗೆ 2023ರ ಚುನಾವಣೆಗೆ ಜನರ ಮುಂದೆ ಹೋಗುತ್ತೇನೆ ಎಂದು ಬೊಮ್ಮಾಯಿ ಹೇಳಿದರು. ಕನಸು ತೆರೆದಿಟ್ಟ ಸಿಎಂ
ಕಾರ್ಯಕಾರಿಣಿ ಸಮಾರೋಪವನ್ನು ಸಿಎಂ ರಾಜ್ಯದ ಅಭಿವೃದ್ಧಿಗೆ ಭವಿಷ್ಯದಲ್ಲಿ ತಮ್ಮ ಯೋಜನೆ, ಬದ§ತೆ ಹಾಗೂ ನೀಲನಕ್ಷೆ ಏನು ಎಂಬುದರ ಬಗ್ಗೆ ಜನತೆ ಹಾಗೂ ಪಕ್ಷದ ನಾಯಕರಿಗೆ ಸಂದೇಶ ರವಾನಿಸಲು ವೇದಿಕೆಯಾಗಿಸಿಕೊಂಡರು. ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ರಾಜ್ಯದ ನಾಯಕರನ್ನು ಜತೆಗೂಡಿಸಿಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಶಕ್ತಿ ತನಗಿದೆ ಎಂಬುದನ್ನು ಮನವರಿಕೆ ಮಾಡಿದರು. ಮತಾಂತರ ತಡೆಗೆ ಕಾರ್ಯಪಡೆ
ಯುಕೆಪಿಗೆ ವರ್ಷಕ್ಕೆ 10 ಸಾವಿರ ಕೋಟಿ ರೂ. ನೀಡುತ್ತೇವೆಂದು 5 ವರ್ಷಗಳಲ್ಲಿ ಕೇವಲ 7,500 ಕೋ. ರೂ. ನೀಡಿ ಯೋಜನೆ ಕೃಷ್ಣಾರ್ಪಣೆ ಮಾಡಿದ್ದ ಕಾಂಗ್ರೆಸ್ ಮೇಕೆದಾಟಿಗಾಗಿ ಪಾದಯಾತ್ರೆ ಮಾಡಿ ಕಾವೇರಿಯರ್ಪಣಕ್ಕೆ ಮುಂದಾಗಿದೆ.
– ಬಸವರಾಜ ಬೊಮ್ಮಾಯಿ, ಸಿಎಂ