Advertisement

ರೇಷ್ಮೆ ಮಾರುಕಟ್ಟೆ ವಾರಣಾಸಿಗೆ ವಿಸ್ತರಿಸುವ ಚಿಂತನೆ: ಡಾ|ನಾರಾಯಣ ಗೌಡ

08:31 PM Nov 16, 2021 | Team Udayavani |

ಬೆಂಗಳೂರು: ರಾಜ್ಯದ ರೇಷ್ಮೆ ಮಾರುಕಟ್ಟೆಯನ್ನು ಬನಾರಸ್‌ ಸೀರೆ ನೇಯ್ಗೆಗೆ ಖ್ಯಾತಿಯ ವಾರಣಾಸಿಗೆ ವಿಸ್ತರಿಸುವ ಚಿಂತನೆಯಿದೆ ಎಂದು ರೇಷ್ಮೆ ಇಲಾಖೆ ಸಚಿವ ಡಾ| ನಾರಾಯಣ ಗೌಡ ತಿಳಿಸಿದರು.

Advertisement

ಮಂಗಳವಾರ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಶಾಖೆ ತೆರೆಯುವ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯವು ಉತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ವಿಶ್ವವಿಖ್ಯಾತಿ ಪಡೆದುಕೊಂಡಿದೆ. ನಮ್ಮ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ನ.18ರಂದು ಉತ್ತರ ಪ್ರದೇಶದ ರೇಷ್ಮೆ ಸಚಿವ ಸಿದ್ಧಾರ್ಥನಾಥ್‌ ಸಿಂಗ್‌ ಅವರ ಭೇಟಿ ಮಾಡಿ, ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯದ ರೇಷ್ಮೆಗೂ ವಾರಣಾಸಿ ನೇಕಾರರಿಗೂ ಅವಿನಾಭಾವ ಸಂಬಂಧವಿದೆ. ವಾರಣಾಸಿಗೆ ಕರ್ನಾಟಕ ಹಾಗೂ ಚೀನಾದಿಂದ ರೇಷ್ಮೆ ಆಮದು ಮಾಡಿಕೊಳ್ಳಲಾಗುತ್ತದೆ. ಚೀನಾದ ಅಗ್ಗದ ರೇಷ್ಮೆ ಅಬ್ಬರಕ್ಕೆ ರಾಜ್ಯದ ರೇಷ್ಮೆ ಖರೀದಿಯಲ್ಲಿ ಕುಂಠಿತವಾಗಿತ್ತು. ಇದೀಗ ಚೀನಾದಿಂದ ರೇಷ್ಮೆ ಆಮದು ಸ್ಥಗಿತಗೊಳಿಸಿರುವುದರಿಂದ ಮತ್ತೆ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆಯ ವೈಭವವನ್ನು ಮರುಕಳಿಸಲು ಸಾಧ್ಯ. ವಾರಣಾಸಿಗೆ ಸಂಪೂರ್ಣ ರೇಷ್ಮೆಯನ್ನು ರಾಜ್ಯದಿಂದ ಪೂರೈಸುವ ಬಗ್ಗೆ ಉತ್ತರ ಪ್ರದೇಶ ರೇಷ್ಮೆ ಸಚಿವರೊಂದಿಗೆ ಚರ್ಚಿಸಲಾಗುತ್ತದೆ ಎಂದರು.

ಇದನ್ನೂ ಓದಿ:ಜ.30 ರೊಳಗೆ ದೇವಸ್ಥಾನಗಳ ಆಡಿಟ್‌ ರಿಪೋರ್ಟ್‌ ಸಲ್ಲಿಸಿ : ಸಚಿವೆ ಶಶಿಕಲಾ ಜೊಲ್ಲೆ ತಾಕೀತು

ನಿಯೋಗ
ಸಚಿವ ಡಾ| ನಾರಾಯಣಗೌಡ ಅವರ ನಿಯೋಗದಲ್ಲಿ ಕೆಎಸ್‌ಎಂಬಿ ಅಧ್ಯಕ್ಷೆ ಸವಿತಾ ಅಮರ ಶೆಟ್ಟಿ, ರೇಷ್ಮೆ ಇಲಾಖೆ ಪ್ರ. ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ ಸೇರಿದಂತೆ ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿಗಳು ಉತ್ತರ ಪ್ರದೇಶಕ್ಕೆ ತೆರಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next