Advertisement
ನಾನೂ ಕೂಡ ಹೀಗೆ ಹಲವು ಬಾರಿ ಯೋಚಿಸಿದ್ದೇನೆ. ನನಗೂ ಕೂಡ ಎಲ್ಲರ ಹಾಗೆ ತಂದೆ ತಾಯಿ ಇರಬೇಕಿತ್ತು. ನನಗೂ ಒಂದು ಕುಟುಂಬ ಇರಬೇಕು, ಆಗ ನಾನು ಕೂಡ ಎಲ್ಲ ಮಕ್ಕಳ ಹಾಗೆ ಖುಷಿಯಾಗಿರುತ್ತಿದ್ದೆ. ಒಂದು ಒಳ್ಳೆಯ ಕುಟುಂಬದಲ್ಲಿ ನಾನು ಬೆಳೆದಿದ್ದರೆ ಇಂದು ನಾನು ಏನನ್ನಾದರೂ ಸಾಧಿಸುತ್ತಿದ್ದೆ. ಒಳ್ಳೆಯ ಸಂಸ್ಕಾರ ನನಗೆ ಸಿಗಲಿಲ್ಲ, ಕುಟುಂಬದ ಪ್ರೀತಿ ಏನಂತ ನನಗೆ ತಿಳಿದಿಲಿಲ್ಲ, ನನ್ನ ಜೀವನದಲ್ಲೇ ಇವೆಲ್ಲ ಏಕೆ ಆಗುತ್ತಿವೆ? ಹೀಗೆ ನೂರಾರು ಯೋಚನೆ ವಿಚಾರಗಳು ನನ್ನಲ್ಲೂ ಸದಾ ಬರುತ್ತವೆ.
Related Articles
Advertisement
ರಕ್ತದ ಮಡುವಿನಲ್ಲಿ ಬಿದ್ದಿದ್ದ ಕರ್ಣನು ತನ್ನ ಕೊನೆಯ ಗಳಿಗೆಯಲ್ಲಿ ಶ್ರೀ ಕೃಷ್ಣನನ್ನು ತನ್ನತ್ತ ಕರೆದು ಕೇಳುತ್ತಾನೆ ಹೇ ವಾಸುದೇವ ಇದು ನಿನಗೆ ಸರಿ ಅನ್ನಿಸುತ್ತದೆಯೇ? ನಾನು ಜನಿಸಿದ್ದು ಒಬ್ಬ ಕ್ಷತ್ರಿಯನಾಗಿ ರಾಜವಂಶದಲ್ಲಿ ಆದರೆ ಹುಟ್ಟಿದ ಮರುಕ್ಷಣವೇ ಕುಂತಿಮಾತೆ ನನ್ನನ್ನು ಗಂಗೆಗೆ ಅರ್ಪಿಸಿಬಿಟ್ಟಳು. ಅನಂತರ ನಾನು ರಾಧೆ ಮಾತೆಗೆ ಸಿಕ್ಕೇ ಅವಳ ಪಾಲನೆಯಲ್ಲಿ ನಾನು ಬೆಳೆದೆ, ಪಾಂಡು ಪುತ್ರದಲ್ಲಿ ನಾನು ಹಿರಿಯವನಾದರೂ ಕೂಡ ಒಬ್ಬ ಸೂತಪುತ್ರನಾಗಿ ರಥವನ್ನು ಓಡಿಸುವವನಾದೆ.
ಅದು ಸಾಲದು ಎಂಬಂತೆ ನನ್ನ ಗುರು ಪರಶುರಾಮರಿಂದಲೇ ನಾನು ಶಾಪಗ್ರಸ್ತನಾದೆ. ವಿಶ್ವದ ಶ್ರೇಷ್ಠ ಅನು ಧನು ಧನುರ್ಧಾರಿಯಾಗುವ ಎಲ್ಲ ಅರ್ಹತೆಗಳು ನನ್ನಲ್ಲಿ ಇದ್ದರೂ ಯುದ್ಧದ ಸಮಯದಲ್ಲಿ ಭೂತಾಯಿಯು ನನ್ನ ಜತೆ ನಿಲ್ಲಲಿಲ್ಲ. ಶ್ರೇಷ್ಠತೆಯನ್ನು ಗಿಟ್ಟಿಸಿಕೊಡುವ ಎಲ್ಲದರಲ್ಲಿಯೂ ನಾನು ಅಗ್ರಗಣ್ಯ, ಯುದ್ಧಕಾಲದಲ್ಲಿ ನಾನು ಯಾವುದೇ ಶಸ್ತ್ರವನ್ನು ಸಹೋದರರ ವಿರುದ್ಧ ಬಳಸುವಂತಿಲ್ಲ ಎಂದು ಸ್ವಂತ ತಾಯಿಯಿಂದಲೇ ವಚನವನ್ನು ಪಡೆದುಕೊಂಡೆ.
ನನ್ನ ಕರ್ಣ-ಕುಂಡಲಗಳನ್ನು ಕೂಡ ದಾನವಾಗಿ ಇಂದ್ರದೇವ ಪಡೆದುಕೊಂಡ. ಆದರೆ ನೀನು ಸಾಕ್ಷಾತ್ ವಿಷ್ಣುವಿನ ಅವತಾರ ಎಲ್ಲವನ್ನು ಬಲ್ಲ, ನೀನು ಅರ್ಜುನನ ಜತೆಗೂಡಿ ಕಪಟದಿಂದ ನನ್ನನ್ನು ಸೋಲಿಸಿದ್ಧಿ ಇದು ನ್ಯಾಯವೇ?, ಇದೆÇÉಾ ನನ್ನ ಜೀವನದಲ್ಲಿ ಏಕಾಯಿತು?, ನಾನು ಏನು ತಪ್ಪು ಮಾಡಿದ್ದೆ ವಾಸುದೇವ? ಎಂದು ಕೇಳಿದನು. ಆಗ ಕೃಷ್ಣನು ಕರ್ಣನಿಗೆ ನನ್ನ ಜೀವನವೂ ಕೂಡ ನಿನ್ನ ಹಾಗೆ ಇತ್ತು.
ನಾನು ಹುಟ್ಟಿದ್ದು ಸೆರೆವಾಸದಲ್ಲಿ, ಹುಟ್ಟಿದ ತತ್‌ಕ್ಷಣವೇ ಸಾವು ನನ್ನ ಬೆನ್ನು ಹತ್ತಿತ್ತು. ಹೆತ್ತವರಿಂದ ನಾನು ಬೇರ್ಪಡುವಂತಾಯಿತು. ಹಾಗೂ ತಾಯಿ ಯಶೋಧರೆಯ ಪಾಲನೆಯಲ್ಲಿ ಬೆಳೆಯಬೇಕಾಯಿತು. ಅನೇಕ ಅಸುರರು ನನ್ನನ್ನು ಕೊಲ್ಲಲು ಪ್ರಯತ್ನಿಸಿದರು. ಕ್ಷತ್ರಿಯ ವಂಶದಲ್ಲಿ ನಾನು ಜನಿಸಿದ್ದರೂ ಹಳ್ಳಿಯ ಗೋ-ಬಾಲಕರೊಂದಿಗೆ ಹಸುವನ್ನು ಮೇಯಿಸಿಕೊಂಡು ದೊಡ್ಡವನಾದೆ. ರಾಜವಂಶವನಾದರೂ ನನಗೆ ಶಿಕ್ಷಣ ದೊರಕಲಿಲ್ಲ.
ಕೊನೆಗೆ ನನ್ನ ಪ್ರಿಯಸಖೀ ರಾಧೆಯಿಂದಲೇ ನಾನು ದೂರವಾಗುವಂತಾಯಿತು. ಆದರೆ ನಾನು ನಿನ್ನಂತೆ ಎಂದಿಗೂ ನನ್ನ ಜೀವನದ ಬಗ್ಗೆ ಬೇಸರವನ್ನು ಮಾಡಿಕೊಂಡಿಲ್ಲ. ಕರ್ಣ ಇಂದು ನಿನ್ನ ಈ ಸ್ಥಿತಿಗೆ ನೀನೇ ಕಾರಣವಾಗಿರುವೆ. ನನ್ನ ಹುಟ್ಟು ಹಾಗೂ ಜೀವನ ದರಿದ್ರತೆಯಿಂದ ಕೂಡಿದ್ದರೂ ನಾನು ಧರ್ಮದ ದಾರಿಯಲ್ಲಿ ಪಾಂಡವರ ಸಹಾಯಕ್ಕೆ ನಿಂತೆ. ಆದರೆ ನೀನು ಅಧರ್ಮಿಗಳಾದ ಕೌರವರ ಪರವಾಗಿ ನಿಂತು ಅಧರ್ಮದ ಸಾತು ಕೊಟ್ಟೆ ಎಂದನು.
ಮಹಾಭಾರತದ ಈ ಕಥಾಪ್ರಸಂಗ ಓದಿದ ಬಳಿಕ ನನ್ನ ಆಲೋಚನಾ ದಿಸೆಯೇ ಬದಲಾಯಿತು. ಜೀವನದಲ್ಲಿ ಎಷ್ಟೇ ಕೆಟ್ಟ ಬಂದರೂ ನಾವು ಎಂದಿಗೂ ಅಧರ್ಮದ ಹಾದಿಯನ್ನು ಹಿಡಿಯಬಾರದು. ಹಾಗೂ ದುಡುಕಿ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.
ಇತರರೊಂದಿಗೆ ನಮ್ಮನ್ನು ಹೋಲಿಸಿಕೊಂಡು ಕೊರಗಬಾರದು. ತಾಳಿದವನು ಬಾಳಿಯಾನು ಎನ್ನುವಂತೆ ತಾಳ್ಮೆಯಿಂದ ನಮ್ಮ ಗುರಿಯತ್ತ ಸಾಗಬೇಕು. ನಮಗೂ ಒಳ್ಳೆಯ ದಿನಗಳು ಬಂದೇ ಬರುತ್ತವೆ. ಪ್ರಾಮಾಣಿಕವಾಗಿ ನಮ್ಮ ಕಾರ್ಯದಲ್ಲಿ ಪ್ರಯತ್ನಮಗ್ನರಾಗಬೇಕು ಅಷ್ಟೇ.
-ಕಾರ್ತಿಕ ಹಳಿಜೋಳ
ಎಂ.ಎಂ. ಕಾಲೇಜು ಶಿರಸಿ