Advertisement

Namma Metro: ಇತರೆ ಮೂಲಗಳಿಂದ ಆದಾಯ ಗಳಿಕೆಗೆ ಚಿಂತನೆ

10:35 AM Sep 04, 2023 | Team Udayavani |

ಬೆಂಗಳೂರು: ನಮ್ಮ ಮೆಟ್ರೋವು ಪ್ರಯಾಣಿಕರ ಪಯಣ ದರದ ಜೊತೆಗೆ ಇನ್ನಿತರ ಮೂಲಗಳಿಂದಲೂ ಆದಾಯ ಸಂಗ್ರಹಿಸಲುಕಳೆದ ಕೆಲ ವರ್ಷಗಳಿಂದ ನಿರಂತರ ಪ್ರಯತ್ನ ನಡೆಸುತ್ತಿದೆ. ಆದರೆ, ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ.

Advertisement

ನಮ್ಮ ಮೆಟ್ರೋವು ತನ್ನ ನಿಲ್ದಾಣ, ಮೆಟ್ರೋ ಕಂಬ ಮತ್ತು ತನಗೆ ಸೇರಿದ ಜಾಗಗಳಲ್ಲಿ ಜಾಹೀರಾತು ಫ‌ಲಕಗಳನ್ನು ಹಾಕುವುದರ ಮೂಲಕ ಆದಾಯ ಸಂಗ್ರಹಣೆ ನಡೆಸುವ ಪ್ರಯತ್ನ ನಡೆಸಿತ್ತು. ಆದರೆ, ಜಾಹೀರಾತು ಫ‌ಲಕಗಳನ್ನು ನಿಷೇಧಿಸಿ ಹೈಕೋರ್ಟ್‌ ಕಠಿಣ ನಿಲುವು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದ ಮುಂದಿದ್ದ ಜಾಹೀರಾತುಫ‌ಲಕಗಳ ಮೂಲಕ ಆದಾಯ ಸಂಗ್ರಹದ ದಾರಿ ಸದ್ಯಕ್ಕೆ ಮುಚ್ಚಿದೆ.

ವಿಶೇಷ ಅನುಮತಿ ಪಡೆಯಲು ಪ್ರಯತ್ನ: ಅದಾಗ್ಯೂ ನಮ್ಮ ಮೆಟ್ರೋ ತನ್ನ ವ್ಯಾಪ್ತಿಯಲ್ಲಿ ಜಾಹೀರಾತು ಫ‌ಲಕ, ಫ್ಲೆಕ್ಸ್‌ಗಳನ್ನು ಅಳವಡಿಸಲು ಅವಕಾಶ ಕೋರಿ ನ್ಯಾಯಾಲಯದ ಕದ ತಟ್ಟಿ ಗಂಭೀರ ಪ್ರಯತ್ನ ನಡೆಸಬೇಕು ಎಂಬ ಅಭಿಪ್ರಾಯವಿದೆ. ಮೆಟ್ರೋ ತನ್ನ ವ್ಯಾಪ್ತಿಯಲ್ಲಿನ ಜಾಹೀರಾತು ಫ‌ಲಕ, ಫ್ಲೆಕ್ಸ್‌ಗಳನ್ನು ಅಳವಡಿಸಲು ಕೋರ್ಟ್‌ನಿಂದ ವಿಶೇಷ ಅನುಮತಿ ಪಡೆದುಕೊಳ್ಳಲು ಪ್ರಯತ್ನಿಸಬೇಕು. ಮುಂದಿನ ಎರಡು ವರ್ಷದಲ್ಲಿ 175 ಕಿ.ಮೀ. ಉದ್ದದ ಜಾಲ ಹೊಂದಲಿರುವ ನಮ್ಮ ಮೆಟ್ರೋಗೆ ಜಾಹೀರಾತು ಫ‌ಲಕ ಅಳವಡಿಕೆಗೆ ಅವಕಾಶ ಕಲ್ಪಿಸಿ ಆದಾಯ ಗಳಿಸುವ ಉತ್ತಮ ಅವಕಾಶವಿದೆ.

ಒಳಾಂಗಣ ಜಾಹೀರಾತು ಬಗ್ಗೆ ಗಮನ ಹರಿಸಿಲ್ಲ: ಹಾಗೆಯೇ ಮೆಟ್ರೋ ನಿಲ್ದಾಣದೊಳಗೆ ಕಾನ್‌ಕೋರ್ಸ್‌, ಪ್ಲಾಟ್‌ಫಾರಂಗಳಲ್ಲಿಯೂ ಒಳಾಂಗಣ ಜಾಹೀರಾತುಗಳನ್ನು ಅಳವಡಿಸುವ ಅವಕಾಶವಿದೆ. ಮೆಟ್ರೋದ ಮೇಲ್ಮೆ„ಯಲ್ಲಿಯೂ ಜಾಹೀರಾತನ್ನು ಹೆಚ್ಚು ವ್ಯಾಪಾಕವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಆದರೆ, ಈ ನಿಟ್ಟಿನಲ್ಲಿ ಮೆಟ್ರೋ ಹೆಚ್ಚು ಗಮನಹರಿಸಿದಂತಿಲ್ಲ. ಅದೇ ರೀತಿ ಮೆಟ್ರೋ ನಿಲ್ದಾಣದೊಳಗೆ ಮಳಿಗೆ ತೆರೆಯಲು ಸ್ಥಳಾವಕಾಶವನ್ನು ಬಾಡಿಗೆಗೆ ನೀಡಿ ಆದಾಯ ಸಂಗ್ರಹಿಸುವ ಪ್ರಯತ್ನವನ್ನು ಮೆಟ್ರೋ ನಿಗಮವು ಗಂಭೀರವಾಗಿ ನಡೆಸುತ್ತಿದೆ. ಪ್ರಸ್ತುತ ವಾಣಿಜ್ಯ ಸಂಚಾರ ನಡೆಸುತ್ತಿರುವ ನೇರಳೆ, ಹಸಿರು ಮಾರ್ಗದಲ್ಲಿ 24 ನಿಲ್ದಾಣಗಳಲ್ಲಿ 100 ಮುಕ್ತ ಸ್ಥಳಗಳನ್ನು ಮೆಟ್ರೋ ಗುರುತಿಸಿದ್ದು, 1,55,034 ಚದರ ಅಡಿ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶವನ್ನು ನಮ್ಮ ಮೆಟ್ರೋ ಹೊಂದಿದೆ. ಉಳಿದಂತೆ ಈ ವರ್ಷ ಇನ್ನಷ್ಟು ಮೆಟ್ರೋ ನಿಲ್ದಾಣಗಳು ಜನ ಬಳಕೆಗೆ ಲಭ್ಯವಾಗಲಿದೆ. ತನ್ಮೂಲಕ ಪ್ರಯಾಣಿಕರಿಗೆ ಸೌಲಭ್ಯದ ಜೊತೆಗೆ ಆದಾಯವನ್ನು ಸಂಗ್ರಹಿಸಲು ಸಾಧ್ಯ ಎಂಬುದು ಮೆಟ್ರೋದ ಲೆಕ್ಕಾಚಾರ.

ಆದರೆ, ಮೆಟ್ರೋ ತನ್ನ ನಿಲ್ದಾಣಗಳನ್ನು ರಚಿಸುವ ಸಂದರ್ಭದಲ್ಲೇ ವಾಣಿಜ್ಯ ಬಳಕೆಯಸಾಧ್ಯತೆಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಕೆಲವು ನಿಲ್ದಾಣಗಳಲ್ಲಿ ವಾಣಿಜ್ಯ ಬಳಕೆಗೆ ಹೆಚ್ಚಿನ ಅವಕಾಶಗಳಿರುತ್ತವೆ. ಅಂತಹ ನಿಲ್ದಾಣಗಳಲ್ಲಿ ನಿಲ್ದಾಣದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಂಡರೆ ಹೆಚ್ಚಿನ ಪ್ರಯೋಜನವಾಗುತ್ತದೆ. ಎಂ.ಜಿ.ರೋಡ್‌ ನಿಲ್ದಾಣವನ್ನು ಮುಂದಾಲೋಚನೆಯಿಂದ ಕಟ್ಟಿದ್ದರೆ ವಾಣಿಜ್ಯ ಚಟುವಟಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಿ ಆದಾಯ ಗಳಿಸಬಹುದಿತ್ತು.

Advertisement

ಎಟಿಎಂ, ಪುಸ್ತಕದ ಅಂಗಡಿ, ತಿನಿಸುಗಳ ಅಂಗಡಿ, ಮಾಹಿತಿ ಕೇಂದ್ರ, ಉಡುಗೊರೆಗಳ ಅಂಗಡಿ, ಸ್ಮರಣಿಕೆಗಳ ಅಂಗಡಿ ಮುಂತಾದವುಗಳ ವ್ಯಾಪಾರಕ್ಕೆ ಮೆಟ್ರೋ ನಿಲ್ದಾಣ ಹೆಚ್ಚು ಸೂಕ್ತ ಎಂಬ ಅಭಿಪ್ರಾಯವಿದೆ.

ಪಾರ್ಕಿಂಗ್‌ ಜಾಗ ಅಭಿವೃದ್ಧಿಪಡಿಸಲಿ:

ಮೆಟ್ರೋ ಆದಾಯ ವೃದ್ಧಿಸಿಕೊಳ್ಳಲು ನಿಗಮದ ಸ್ವಾಧೀನದಲ್ಲಿರುವ ಖಾಲಿ ಜಾಗವನ್ನು ಪಾರ್ಕಿಂಗ್‌ಗಾಗಿ ಅಭಿವೃದ್ಧಿ ಪಡಿಸುವ ಅವಕಾಶವಿದೆ. ಕೆಲನಿಲ್ದಾಣಗಳಲ್ಲಿ ಈಗಾಗಲೇ ಪಾರ್ಕಿಂಗ್‌ಗೆ ಅವಕಾಶ ಇದೆ. ಇದರಿಂದ ಮೆಟ್ರೋ ದಲ್ಲಿನ ಜನ ಸಂಚಾರ ಹೆಚ್ಚುವುದರ ಜೊತೆಗೆ ಪಾರ್ಕಿಂಗ್‌ ಮೂಲಕವೂ ಹಣ ಸಂಗ್ರಹಿಸಲು ಸಾಧ್ಯವಿದೆ. ಇದರ ಜೊತೆಗೆ ಕಾರ್ಪೊರೇಟ್‌ ಕಂಪನಿಗಳ ಹೆಸರನ್ನು ಮೆಟ್ರೋ ನಿಲ್ದಾಣದ ಹೆಸರಿಗೆ ಜೋಡಿಸುವ ಮೂಲಕ ಆದಾಯ ಗಳಿಸುವ ಚಿಂತನೆಯಿದೆ. ಮೆಜೆಸ್ಟಿಕ್‌ನ ನಿಲ್ದಾಣದ ಮೇಲೆ 4 ಮಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಕಟ್ಟುವ ಯೋಜನೆ ನಿಗಮ ಹೊಂದಿದೆ.

ನಿಲ್ದಾಣಗಳಲ್ಲಿ ಮಳಿಗೆಗೆ ಸ್ಥಳಾವಕಾಶ:  ಮಳಿಗೆ ತೆರೆಯಲು ಸ್ಥಳಾವಕಾಶ ನೀಡಲು ನಿರ್ಧರಿಸಿರುವ ನೇರಳೆ ಮಾರ್ಗದ ನಿಲ್ದಾಣಗಳು ಬೈಯ್ಯಪ್ಪನಹಳ್ಳಿ, ಎಸ್‌.ವಿ.ರೋಡ್‌, ಇಂದಿರಾನಗರ, ಹಲಸೂರು, ಟ್ರಿನಿಟಿ, ಎಂ.ಜಿ.ರೋಡ್‌, ವಿಜಯನಗರ, ಅತಿಗುಪ್ಪೆ, ಕೆಂಗೇರಿ. ಹಸಿರು ಮಾರ್ಗದಲ್ಲಿ ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ, ಯಶವಂತಪುರ, ಮಹಾಲಕ್ಷ್ಮೀ ಲೇ ಔಟ್‌, ರಾಜಾಜಿನಗರ, ಶ್ರೀರಾಮಪುರ, ಮಂತ್ರಿ ಸ್ಕ್ವಾರ್‌ ಸಂಪಿಗೆ ರಸ್ತೆ, ನಾಡಪ್ರಭು ಕೇಂಪೇಗೌಡ, ಚಿಕ್ಕಪೇಟೆ, ನ್ಯಾಷನಲ್‌ ಕಾಲೇಜು, ಲಾಲ್‌ಬಾಗ್‌, ಜಯನಗರ, ಬನಶಂಕರಿ ಮತ್ತು ಜೆ.ಪಿ.ನಗರ.

ಮೆಟ್ರೋ ನಿಲ್ದಾಣಕ್ಕೆ ಬರುವಾಗ ಅಥವಾ ಮೆಟ್ರೋ ನಿಲ್ದಾಣದಿಂದ ಹೊರ ಹೋಗುವಾಗ ಧಾವಂತದಲ್ಲೇ ಹೆಚ್ಚು ಮಂದಿ ಇರುತ್ತಾರೆ. ಆದರೆ, ಮೆಟ್ರೋ ನಿಲ್ದಾಣಗಳನ್ನು ಒಂದು ರೀತಿಯಲ್ಲಿ ಶಾಪಿಂಗ್‌ ಹಬ್‌ ಅಥವಾ ಟೈಂ ಪಾಸ್‌ ಮಾಡುವ ಜಾಗದಂತೆ ಅಭಿವೃದ್ಧಿಪಡಿಸಿದರೆ ಆಗ ಹೆಚ್ಚಿನ ಸಮಯ ನಿಲ್ದಾಣದಲ್ಲಿ ಕಳೆಯಬಹುದು. ಇದರಿಂದ ಮೆಟ್ರೋ ನಿಲ್ದಾಣದಲ್ಲಿನ ಅಂಗಡಿಗಳಿಗೂ ವ್ಯಾಪಾರವಾಗುತ್ತದೆ. ಶೈಲಜಾ ರಾವ್‌, ಮೆಟ್ರೋ ರೈಲು ಪ್ರಯಾಣಿಕರು, ಪೀಣ್ಯ.

-ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next