Advertisement
ವಿವಿಗಳ ಕುಲಪತಿಗಳೊಂದಿಗೆ ಗುರುವಾರ ವೀಡಿಯೋ ಕಾನ್ಫರೆನ್ಸ್ ನಡೆಸಿದ ನಂತರ ಮಾತನಾಡಿದ ಅವರು, ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಪಾಠ ಪ್ರವಚನಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪರೀಕ್ಷೆ ಯಾವಾಗ, ಹೇಗೆ ನಡೆಸಬೇಕು ಎಂಬ ಬಗ್ಗೆ ಕುಲಪತಿಗಳ ಸಲಹೆ ಕೇಳಲಾಗಿದೆ. ಆನ್‌ಲೈನ್ ಮೂಲಕ ಪಾಠ ಪೂರ್ಣಗೊಳಿಸಿ ಪರೀಕ್ಷೆ ನಡೆಸಬೇಕೇ ಅಥವಾ ತರಗತಿಗಳು ಆರಂಭವಾದ ನಂತರ ತಡವಾಗಿ ಪರೀಕ್ಷೆ ನಡೆಬೇಕೇ ಎಂಬ ಬಗ್ಗೆ ಮಾಹಿತಿ ಕೋರಲಾಗಿದೆ ಎಂದರು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ವಾಟ್ಸಪ್ ಅಥವಾ ಇಮೇಲ್ ಮೂಲಕ ಶುಕ್ರವಾರ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ.
ಬೆಂಗಳೂರು: ಆನ್ ಲೈನ್ ತರಗತಿ ರಾಜ್ಯದ ಗ್ರಾಮೀಣ ಭಾಗದ ಪದವಿ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗುತ್ತಿದೆ. ಬಹುತೇಕ ಕಾಲೇಜುಗಳು ಝೂಮ್ ಆ್ಯಪ್ ಮೂಲಕ ಆನ್ ಲೈನ್ ತರಗತಿ ಆರಂಭಿಸಿವೆ. ಸರ್ಕಾರಿ ಪದವಿ ಕಾಲೇಜಿನಲ್ಲಿ ಆನ್ ಲೈನ್ ತರಗತಿ ಅಷ್ಟೊಂದು ಪರಿಣಾಮಕಾರಿಯಾಗಿ ಆರಂಭವಾಗಿಲ್ಲ. ಇನ್ನು ಕೆಲವೆಡೆ ಆನ್ ಲೈನ್ ತರಗತಿ ಆರಂಭಿಸಿವೆ. ಆದರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್ಲ„ನ್ ತರಗತಿಯಲ್ಲಿ ಭಾಗವಹಿಸಲು ನಾನಾ ಕಂಟಕ ಎದುರಾಗುತ್ತಿದೆ. ಕೆಲವು ವಿದ್ಯಾರ್ಥಿಗಳಲ್ಲಿ ಸಮರ್ಪಕವಾದ ಅಥವಾ ಆ್ಯಪ್ ಗೆ
ಸರಿಹೊಂದುವ ಸ್ಮಾರ್ಟ್ ಫೋನ್‌ಗಳಿಲ್ಲ. ಇನ್ನು ಕೆಲವೆಡೆ ನೆಟ್‌ವರ್ಕ್ ಸಮಸ್ಯೆ ಹೆಚ್ಚಿದೆ. ವಾಣಿಜ್ಯ ವಿಭಾಗದ ಕೆಲವೊಂದು ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 50ಕ್ಕಿಂತಲೂ ಅಧಿಕವಿದೆ. ಹೀಗಾಗಿ ಏಕಕಾಲದಲ್ಲಿ ಎಲ್ಲರೂ ಆನ್ ಲೈನ್ ಮೂಲಕ ಸೇರಿಕೊಳ್ಳಲು ಆಗುತ್ತಿಲ್ಲ. ಆನ್ಲ„ನ್ ತರಗತಿ ನಡೆಸಲು ನಿರ್ದಿಷ್ಟ ಸೂಚನೆ ಬಂದಿಲ್ಲ. ಆದರೆ, ಕೆಲವೊಂದು ಕಾಲೇಜುಗಳಲ್ಲಿ ಈಗಾಗಲೇ ಆರಂಭಿಸಿದ್ದಾರೆ. ಶೇ.100ರಷ್ಟು ಪರಿಣಾಮಕಾರಿಯಾಗಿ ತರಗತಿ ನಡೆಸಲು ಸಾಧ್ಯವಿಲ್ಲ ಎಂದು ಪದವಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು.