ಇನ್ನೇನು ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಕೈ ಚಾಚುವಷ್ಟು ದೂರ ಬೆರಳೆಣಿಕೆಯ ದಿನಗಳು. ಇನ್ನು ಕೆಲವೇ ದಿನಗಳಲ್ಲಿ ನಾವು ಹೊಸ ವರುಷವನ್ನು ಸ್ವಾಗತಿಸಲು ತಯಾರಾಗುತ್ತಿದ್ದೇವೆ. ಆದರೆ, ಒಮ್ಮೆ ಯೋಚಿಸಿ ಹೊಸ ವರುಷ ಎಂದರೆ ಏನು? ಹೊಸ ವರ್ಷವನ್ನು ಸ್ವಾಗತಿಸುವುದೆಂದರೇನು? ಹೊಸ ವರುಷ ಎಂದರೆ ಡಿಸೆಂಬರ್ 31ರ ರಾತ್ರಿ ಕುಣಿದು ಕುಪ್ಪಳಿಸುವುದಲ್ಲ. ಮಧ್ಯರಾತ್ರಿಯವರೆಗೂ ಪಾರ್ಟಿಯ ಮೋಜು ಮುಗಿಸಿ ಕುಡಿತದ ಅಮಲಿನಲ್ಲಿ ಕಾರು, ಬೈಕು ಚಲಾಯಿಸುವುದಲ್ಲ. ಬದಲಾಗಿ, ಹೊನ್ನ ಹರಿವಾಣದಲ್ಲಿ ಹೊಸ ಆಸೆ, ಹೊಸ ಆಕಾಂಕ್ಷೆ, ಹೊಸ ಕನಸುಗಳನ್ನು ಹೊತ್ತುಕೊಂಡು 2017ರ ಹೊಸ್ತಿಲಿಗೆ ಶುಭಸಮಯದಲ್ಲಿ ಬಲಗಾಲನ್ನಿಡುವುದು. ಹೊಸ ವರ್ಷ ಎಂದರೆ 31ರ ರಾತ್ರಿ ಕೇವಲ ಅಜ್ಜನ ಪ್ರತಿಕೃತಿಗಳನ್ನು ಇಟ್ಟು ಸುಡುವುದಲ್ಲ, ಬದಲಾಗಿ ನಮ್ಮಲ್ಲಿರುವ ಕೆಟ್ಟ ಭಾವನೆ, ಕೆಟ್ಟ ಆಲೋಚನೆ, ನಕರಾತ್ಮಕ ಚಿಂತನೆಗಳನ್ನು ಮಾನಸಿಕವಾಗಿಯೇ ಸುಡಬೇಕು.
ಹೊಸ ವರ್ಷ ಎಂದರೆ ಅದು ಬರೀ ಒಂದು ದಿನದ ಆಚರಣೆಯಾಗಬಾರದು, ಬದಲಾಗಿ ವರುಷದ ಎÇÉಾ ದಿನವೂ ಹೊಸತು ಎಂದುಕೊಂಡು ಖುಷಿಯಿಂದ ಸಂಭ್ರಮಿಸಬೇಕು. ಹೊಸ ವರ್ಷ ಬಂದಾಗ ನಾವು ಮಾಡಲೇಬೇಕಾದ ಒಳ್ಳೆ ಕೆಲಸಗಳ ಬಗ್ಗೆ ಯೋಚಿಸೋಣ. ಮುಗಿಸಲೇಬೇಕಾದ ಕಾರ್ಯಗಳ ಪಟ್ಟಿ ಮಾಡೋಣ. ಸಾಧಿಸಬೇಕಾದುದರ ಬಗ್ಗೆ ಚಿಂತಿಸೋಣ. ಒಟ್ಟಿನಲ್ಲಿ ಹೊಸ ವರ್ಷವನ್ನು ಸಂತೋಷದಿಂದ ಬರಮಾಡಿಕೊಂಡು ಕನಸುಗಳನ್ನು ಹೊತ್ತುಕೊಂಡು ಮುನ್ನುಗ್ಗೊàಣ.
– ಪಿನಾಕಿನಿ ಎಂ. ಶೆಟ್ಟಿ
ಸ್ನಾತಕೋತ್ತರ ವಿಭಾಗ,
ಕೆನರಾ ಕಾಲೇಜು, ಮಂಗಳೂರು