Advertisement

Watch Video; ಇಂಥ ಆ್ಯಂಬುಲೆನ್ಸ್‌ ಗಳಲ್ಲಿ ಹೋಗೋ ರೋಗಿಗಳನ್ನು ದೇವರೇ ಕಾಪಾಡಬೇಕು!

03:52 PM May 23, 2020 | Nagendra Trasi |

ಇದು ನಮ್ಮ ಆ್ಯಂಬುಲೆನ್ಸ್‌ ಡ್ರೆವರ್‌ ಸ್ಥಿತಿ. ಇಂಥ ಆ್ಯಂಬುಲೆನ್ಸ್‌ ಗಳಲ್ಲಿ ಹೋಗೋ ರೋಗಿಗಳನ್ನು ದೇವರೇ ಕಾಪಾಡಬೇಕು. ಬ್ರಹ್ಮಾವರದ ಉಪ್ಪೂರು ಬಳಿ ಉಡುಪಿಯಿಂದ ವಾಪಸು ಹೊರಟ ಈ ಆ್ಯಂಬುಲೆನ್ಸ್‌ ಮಧ್ಯಾಹ್ನ 1.30 ಸುಮಾರಿಗೆ ಸೀದಾ ಗದ್ದೆಗೆ ಇಳಿಯಿತು. ಪುಣ್ಯಕ್ಕೆ ಅದರಲ್ಲಿ ರೋಗಿ ಇರಲಿಲ್ಲ.
ಕೂಡಲೇ ಜನರು ಓಡೋಡಿ ಬಂದರು, ಪಾಪ ಡ್ರೆವರ್‌ ಗೆ ಏನಾದರೂ ಆಗಿರಬಹುದು, ಒಳಗೆ ಯಾರಾದರೂ ರೋಗಿಗಳಿದ್ದರೆ ಅಂತ ದೌಡಾಯಿಸಿ ಬಂದರು. ಆಗ ಮೆಲ್ಲಗೆ ಡ್ರೈವರ್‌ ಕೆಳಗಿಳಿದು ಬಂದರು.

Advertisement

ಅವನ ಸ್ಥಿತಿ ನೋಡಿ ಜನರೆಲ್ಲಾ ಬೇಸ್ತು. ಯಾಕೆಂದರೆ, ಆ ಡ್ರೈವರ್‌ ಕಂಠಪೂರ್ತಿ ಕುಡಿದಿದ್ದ. ಆ್ಯಂಬುಲೆನ್ಸ್‌ ಆಯ ತಪ್ಪಿದ್ದು ಹೇಗೆ ಎಂದು ನೋಡಲಿಕ್ಕೆ ಬಂದ ಜನರಿಗೆ ಸ್ವತಃ ಡ್ರೈವರ್‌ ಆಯ ತಪ್ಪಿದ್ದು ಗಮನಕ್ಕೆ ಬಂದಿತು. ಕೂಡಲೇ ಕೆಲವರು ಆ ಆ್ಯಂಬುಲೆನ್ಸ್‌ನ ಮಾಲಕರಿಗೆ ಫೋನ್‌ ಮಾಡಿ ಆ್ಯಂಬುಲೆನ್ಸ್‌ ಮತ್ತು ಅವರ ಡ್ರೈವರ್‌ ಸ್ಥಿತಿಯನ್ನು ತಿಳಿಸಿದರು.

ಈ ಮಧ್ಯೆ ಡ್ರೈವರ್‌ ಅಲ್ಲೇ ಒಂದು ಕಡೆ ಏಳಲಾಗದೆ ಮಲಗಿ ಬಿಟ್ಟರು. ಕೆಲವು ಕ್ಷಣಗಳ ಬಳಿಕ ಕೈಯಲ್ಲಿ ತಮ್ಮ ಎರಡು ಚಪ್ಪಲಿ ಇಟ್ಟುಕೊಂಡು ಮೆಲ್ಲಗೆ ಗುಡ್ಡ ಹತ್ತತೊಡಗಿದರು. ದೇಹ ಎಲ್ಲೆಂದರಲ್ಲಿ ತೂರಾಡುತ್ತಿತ್ತು. ಮೇಲೆ ಹತ್ತುವುದೇ ಕಷ್ಟವಾಯಿತು. ಆದರೂ ಒಂದಿಷ್ಟು ದೂರ ಬಂದು ಧೊಪ್ಪನೆ ಕೆಳಗೆ ಉರುಳಿದರು. ಮರಳಿ ಯತ್ನದಲ್ಲಿ ತೊಡಗಿದ ಡ್ರೈವರ್‌ ಎಲ್ಲರಿಗೂ ಕೈ ಮುಗಿಯುತ್ತಾ ಮೇಲೆ ಬಂದಾಗ ಜನರೆಲ್ಲಾ, ಅಬ್ಬಾ..ಮೇಲೆ ಬಂದರಲ್ಲ ಎಂದು ನಿಟ್ಟುಸಿರು ಬಿಟ್ಟರು.
ಜೀವರಕ್ಷಕವಾದ ಆ್ಯಂಬುಲೆನ್ಸ್‌ನ ಡ್ರೈವರ್‌ಗಳೇ ಹೀಗಾದರೆ ಏನು ಮಾಡುವುದು ಎಂಬುದು ಜನರ ಪ್ರಶ್ನೆಯಾಗಿತ್ತು.

ಇದು ಸಾಮಾಜಿಕ ಕಳಕಳಿಯ ವಿಷಯ. ನಮ್ಮ ನಡುವೆ ಪ್ರಾಣವನ್ನೇ ಪಣಕ್ಕಿಟ್ಟು ಬೇರೆಯವರ ಪ್ರಾಣವನ್ನು ಉಳಿಸಿದ ಆ್ಯಂಬುಲೆನ್ಸ್‌ ಡ್ರೈವರ್‌ಗಳು, ಸಿಬಂದಿಯೂ ಇದ್ದಾರೆ. ಅದರ ಬಗ್ಗೆ ಅನುಮಾನವೇ ಇಲ್ಲ. ಆದರೆ, ಇಂಥ ಕೆಲವರಿಂದ ಎಲ್ಲ ಆ್ಯಂಬುಲೆನ್ಸ್‌ನವರನ್ನೂ ಜನ ಗಾಬರಿಯಿಂದ ನೋಡುವಂತಾಗಿದೆ. ಹಾಗಾಗಿ ಆ್ಯಂಬುಲೆನ್ಸ್‌ ಮಾಲಕರಿಗೆ ಹೊಣೆಗಾರಿಕೆ ಹೆಚ್ಚು. ಇಂಥ ಅವಘಡಗಳಿಂದ ಡ್ರೈವರ್‌ ಅಷ್ಟೇ ಅಲ್ಲ ; ಸಾರ್ವಜನಿಕರ ಪ್ರಾಣಕ್ಕೂ ಧಕ್ಕೆ ತರಬಹುದು.
ಎಚ್ಚರವಹಿಸಿ.

ಜತೆಗೇ ಜನರೂ ಸಹ ಆ್ಯಂಬುಲೆನ್ಸ್‌ ಹತ್ತುವ ಮೊದಲು ಡ್ರೈವರ್‌ ವರ್ತನೆ [ಕುಡಿತ ಇತ್ಯಾದಿ] ಕೊಂಚ ಅನುಮಾನ ಬಂದರೂ ಸಂಬಂಧಪಟ್ಟ ಮಾಲಕರಿಗೆ, ಪೊಲೀಸರಿಗೆ ತಿಳಿಸಿ, ವಾಹನ ಹತ್ತಲು ಹೋಗಬೇಡಿ. ಆ ಮುನ್ನೆಚ್ಚರಿಕೆ ವಹಿಸಲೇಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next