Advertisement
ಏಕವ್ಯಕ್ತಿ ನಾಯಕತ್ವ, ಏಕ ಸಂಸ್ಕೃತಿ, ಏಕಧರ್ಮ ಪ್ರತಿಪಾದಿಸಲಾಗುತ್ತಿದೆ. ಖಾಸಗೀಕರಣ, ಉದಾರೀಕರಣ ಪ್ರೋತ್ಸಾಹಿಸಲಾಗುತ್ತಿದೆ. ಶ್ರೇಣಿಕರಣದಲ್ಲಿ ಸ್ಥಿತ್ಯಂತರವಾಗಿ, ಒಳಶ್ರೇಣಿಕರಣ ಶುರುವಾಗಿದೆ. ಉದಾರೀಕರಣ ಉಳ್ಳವರ ಉದರೀಕರಣವಾಗಿದೆ. ಇಂತಹ ಹೊಸ ಸಂದರ್ಭವನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಸಂಘಟನೆಗಳು ಚಿಂತಿಸಬೇಕು ಎಂದರು.
Related Articles
Advertisement
ಪ್ರಾಣಕ್ಕೂ ಪಕ್ಷದ ಅಂಟು
ಇಂದು ದೇಶದಲ್ಲಿ 1.78 ಕೋಟಿ ಜನರು ಇನ್ನೂ ಕೈಯಲ್ಲಿ ಮಲ ತೆಗೆಯುವವರಿದ್ದಾರೆ. ದೇಶದಲ್ಲಿ ಒಬ್ಬ ಮಲ ತೆಗೆಯುವ ವ್ಯಕ್ತಿ ಇದ್ದರೂ ಅದು ಪ್ರಜಾಪ್ರಭುತ್ವಕ್ಕೆ ಅವಮಾನ. ಐದು ದಿನಕ್ಕೊಬ್ಬ ಸಫಾಯಿ ಕರ್ಮಚಾರಿ ಸಾಯುತ್ತಿದ್ದಾನೆ. ಇದನ್ನು ಯಾರೂ ಕೇಳುತ್ತಿಲ್ಲ. ಪ್ರಾಣಕ್ಕೂ ಪಕ್ಷದ ಅಂಟು ಹಚ್ಚಲಾಗುತ್ತಿದೆ. ನಿರುದ್ಯೋಗ ಶೇ.7.2ರಷ್ಟು ಹೆಚ್ಚಾಗಿದೆ. ಕೊರೊನಾ ಕಾಲದಲ್ಲಿ 1.47 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ. ಇಂತಹ ಕೊರೊನಾ ಕಾಲದಲ್ಲಿಯೇ ಶೇ.35ರಷ್ಟು ಕೋಟ್ಯಧಿಪತಿಗಳ ಆದಾಯ ಹೆಚ್ಚಾಗಿದೆ. ಶೇ.74ರಷ್ಟು ದೇಶದ ಸಂಪತ್ತು ಕೇವಲ ಶೇ.ಒಂದರಷ್ಟು ಜನರಲ್ಲಿ ಶೇಖರಣೆಯಾಗಿದೆ. ಶೇ.26ರಷ್ಟು ಸಂಪತ್ತು ಶೇ.99ಜನರಲ್ಲಿ ಹಂಚಿಕೆಯಾಗಿದೆ. ಹೀಗೆ ದೇಶದಲ್ಲಿ ಸಾಮಾಜಿಕ ಅಂತರದ ಜತೆಗೆ ಆರ್ಥಿಕ ಅಂತರವೂ ಅಧಿಕವಾಗಿದೆ. ಡಿಜಿಟಲೀಕರಣದ ಹೆಸರಲ್ಲಿ ಶೇ.60ರಷ್ಟು ಆನ್‌ಲೈನ್ ವಿದ್ಯಾಲಯಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಬಡವರಿಗೆ, ಶೋಷಿತರಿಗೆ ಶಿಕ್ಷಣದಿಂದ ವಂಚಿಸಲಾಗುತ್ತಿದೆ ಎಂದರು. ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಕೋಡಿಹಳ್ಳಿ ಆದಿಜಾಂಭವ ಮಠದ ಷಡಕ್ಷರಿ ದೇಶೀಕೇಂದ್ರ ಸ್ವಾಮೀಜಿ, ಚಿತ್ರದುರ್ಗದ ಬಸವ ನಾಗಿದೇವ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಸಮಾವೇಶದಲ್ಲಿದ್ದರು.