Advertisement
ಪರಿಸರದಲ್ಲಿ ರೋಗ ಭೀತಿಈ ರೀತಿ ರಸ್ತೆಯಲ್ಲಿ ಕೋಳಿ ಹಾಗೂ ಇತರ ಮಾಂಸ ತ್ಯಾಜ್ಯಗಳನ್ನು ರಸ್ತೆ ಬದಿ ಎಸೆದು ಹೋಗುತ್ತಿರುವದರಿಂದ ಪರಿಸರದಲ್ಲಿ ದುರ್ನಾತ ಬೀರುತ್ತಿದ್ದು, ಜನರಿಗೆ ರೋಗ ಭೀತಿ ಎದುರಾಗಿದೆ. ರಾತ್ರಿ ಸಮಯದಲ್ಲಿ ವಾಹನಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಸುರಿದು ಹೋಗುತ್ತಿದ್ದಾರೆ.
ಸಾರ್ವಜನಿಕ ರಸ್ತೆಯಲ್ಲಿ ಈ ರೀತಿಯಲ್ಲಿ ತ್ಯಾಜ್ಯ ಎಸೆದು ಪರಿಸರಕ್ಕೆ ಸಮಸ್ಯೆ ಉಂಟುಮಾಡುವ ಕಿಡೆಗೇಡಿಗಳ ವಿರುದ್ಧ ಸ್ಥಳೀಯಾಡಳಿತ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು. ಮುಂದೆ ಇಂತಹ ಸಮಸ್ಯೆ ಬಾರದ ರೀತಿಯಲ್ಲಿ ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಬೀದಿ ನಾಯಿಗಳ ಕಾಟ
ಈ ರಸ್ತೆಯ ಬದಿಯಲ್ಲಿ ಇರುವ ಮಾಂಸ ತ್ಯಾಜ್ಯಗಳನ್ನು ತಿನ್ನಲು ನಾಯಿಗಳ ಹಿಂಡೇ ಬರುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆಯಲ್ಲಿ ಅತ್ತಿಂದಿತ್ತ ಹೋಗುತ್ತಿರುವ ಬೀದಿ ನಾಯಿಗಳು ಕೆಲವೊಮ್ಮೆ ದ್ವಿಚಕ್ರ ವಾಹನದ ಹಿಂದೆ ಬೆನ್ನಟ್ಟಿಕೊಂಡು ಬರುತ್ತಿರುತ್ತವೆ. ಇದು ವಾಹನ ಸವಾರರಿಗೆ ಸಂಕಟವಾಗಿ ಪರಿಣಮಿಸಿದೆ.
Related Articles
ರಸ್ತೆ ಬದಿ ತ್ಯಾಜ್ಯ ಎಸೆಯುವ ಕುರಿತು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಎಲ್ಲಕೋಳಿ ಹಾಗೂ ಮಾಂಸದ ಅಂಗಡಿಯವರಿಗೆ ಸೂಚನೆ ಕೊಡಲಾಗಿದೆ. ಆದರೂ ಯಾರು ಎಸೆದು ಹೋಗುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಅಲ್ಲದೆ ಆ ಭಾಗದಲ್ಲಿ ಸಿಸಿ ಕೆಮರಾ ಅಳವಡಿಸವುದು ಕಷ್ಟ. ಈ ಕುರಿತು ಸಾರ್ವಜನಿಕರಿಗೆ ಯಾರು ತ್ಯಾಜ್ಯ ಎಸೆಯುತ್ತಾರೆ ಎನ್ನುವ ಮಾಹಿತಿ ಇದ್ದಲ್ಲಿ ಗ್ರಾ.ಪಂ. ಗೆ ನೀಡಬಹುದು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಪ್ರವೀಣ್ ಶೆಟ್ಟಿ,
ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷರು
Advertisement
ಗೋಪಾಲಕೃಷ್ಣ ಸಂತೋಷನಗರ