Advertisement

ಹೀಗೂ ಉಂಟೇ! ಆರೋಗ್ಯ ಕೇಂದ್ರದಿಂದ ಕೋವಿಡ್ ಲಸಿಕೆ ಎಂದು ಮಕ್ಕಳ ಔಷಧ ಕದ್ದೊಯ್ದರು..

04:14 PM May 28, 2021 | Team Udayavani |

ಮಹಾರಾಷ್ಟ್ರ: ಚಿನ್ನ, ಬೆಳ್ಳಿ, ಹಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುವ ವಿಚಾರ ಸಾಮಾನ್ಯವಾಗಿದೆ. ಆದರೆ ಮಹಾರಾಷ್ಟ್ರದ ಥಾಣೆಯ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ಕಳ್ಳರು ಕೋವಿಡ್ ಲಸಿಕೆ ಎಂದು ಮಕ್ಕಳಿಗೆ ಸಂಬಂಧಿಸಿದ ಸುಮಾರು 300 ವಿವಿಧ ಔಷಧದ ಬಾಟಲಿಗಳನ್ನು ಕದ್ದೊಯ್ದಿರುವ ಘಟನೆ ವರದಿಯಾಗಿದೆ.

Advertisement

ಇದನ್ನೂ ಓದಿ:3000 ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡ ‘ಟ್ಯಾಸ್ಮೆನಿಯನ್ ಡೆವಿಲ್’

ಆರೋಗ್ಯ ಕೇಂದ್ರದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕೋವಿಡ್ ಲಸಿಕೆಯನ್ನು (ಕೋವಿಶೀಲ್ಡ್) ಕಳವು ಮಾಡಲು ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಯಾಕೆಂದರೆ ಕಳ್ಳರು ಕದ್ದೊಯ್ದ ಬಾಟಲಿಗಳ ಮೇಲೆ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಸ್ಟಿಕ್ಕರ್ ಅನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅಪರಿಚಿತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಗಳನ್ನು ಕಳವು ಮಾಡಿದ ನಂತರ ಸಿಸಿಟಿವಿಯ ಡಿವಿಆರ್ ಮತ್ತು ಮಾನಿಟರ್ ಅನ್ನು ಕೂಡಾ ಕದ್ದೊಯ್ದಿದ್ದಾರೆ. ಕಳ್ಳತನದ ಯಾವುದೇ ಪುರಾವೆ ಸಿಗಬಾರದು ಎಂಬುದು ಕಳ್ಳರ ಉದ್ದೇಶವಾಗಿತ್ತು ಎಂದು ವರದಿ ತಿಳಿಸಿದೆ.

ಮಹಾರಾಷ್ಟ್ರದ ಉಲ್ಲಾಸ್ ನಗರದ ಮಂಗ್ರುಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬಂದಿ ಕೆಲಸಕ್ಕೆ ಬಂದಾಗ ಕಳವು ಘಟನೆ ಬೆಳಕಿಗೆ ಬಂದಿತ್ತು. ಔಷಧಗಳ ಸ್ಟಾಕ್ ಅನ್ನು ಪರಿಶೀಲಿಸಿದಾಗ 25 ಆ್ಯಂಟಿ ಟಿಬಿ ಲಸಿಕೆ, 17 ಕೆಮ್ಮದ ಔಷಧ ಬಾಟಲು, 13 ಧರ್ನುವಾಯು ಔಷಧದ ಬಾಟಲು, 15 ಪೋಲಿಯೋ ಲಸಿಕೆ ಬಾಟಲು, 30 ರುಬೆಲ್ಲಾ ಮತ್ತು 270 ರೋಟಾ ವೈರಸ್ ಔಷಧ ಬಾಟಲು ಕಳ್ಳತನವಾಗಿರುವುದು ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next