Advertisement

ಜೈಪುರ: ಎಸಿಬಿ ಅಧಿಕಾರಿಯ ಎಸ್‌ಯುವಿ ವಾಹನ ಕಳವು

04:04 PM May 30, 2018 | Team Udayavani |

ಜೈಪುರ : ಶೆವರ್‌ಲೆಟ್‌ ಟ್ಯಾವೆರಾ ಎಸ್‌ಯುವಿ ವಾಹನಗಳನ್ನೇ ಕದಿಯುವ ಗ್ಯಾಂಗ್‌ ಒಂದು ಇಲ್ಲಿನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಯೋರ್ವರ ವಾಹನವನ್ನು ಕದ್ದೊಯ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಎಸಿಬಿ ಅಧಿಕಾರಿಯ ಶೆವರ್‌ಲೆಟ್‌ ಟ್ಯಾವೆರಾ ವಾಹನವನ್ನು ಇಲ್ಲಿನ ಲಾಲ್‌ಕೋಠಿ ಪ್ರದೇಶದಲ್ಲಿ ಪಾರ್ಕ್‌ ಮಾಡಿದ ಚಾಲಕ ತರಕಾರಿ ತರಲೆಂದು ಹೋಗಿದ್ದಾಗ ಈ ಬಗೆಯ ವಾಹನವನ್ನೇ ಕದಿಯುವ ಗ್ಯಾಂಗಿನವರು ಅದನ್ನು ಕದ್ದೊಯ್ದರೆಂದು ಪೊಲೀಸ್‌ ಉಪಾಯುಕ್ತ ಕನ್ವರ್‌ ರಾಷ್ಟ್ರದೀಪ್‌ ಹೇಳಿದರು. 

ಕಳೆದ ಮೇ 15ರಂದು ಇಲ್ಲಿನ ಗುಪ್ತಚರ ದಳದ ಅಧಿಕಾರಿಯೋರ್ವರು ವಾಹನವನ್ನುಕಳ್ಳರು ಒಯ್ದಿದ್ದರು. 

ಸಿಸಿಟಿವಿ ಚಿತ್ರಿಕೆಯಿಂದ ನಿಖರವಾಗಿ ಏನೂ ಗೊತ್ತಾಗಿಲ್ಲವಾದರೂ ವಾಹನ ಚೋರರನ್ನು ಬೇಗನೆ ಸೆರೆ ಹಿಡಿಯುವ ವಿಶ್ವಾಸವನ್ನು ಡಿಸಿಪಿ ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next