Advertisement

ಕಳ್ಳನ ಸೆರೆ: ಚಿನ್ನಾಭರಣ ವಶ

03:53 PM Dec 10, 2018 | |

ಕೆಜಿಎಫ್: ಕೆಜಿಎಫ್ ಉಪ ವಿಭಾಗದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಆಂಡರಸನ್‌ ಪೇಟೆಯ ಜನತಾ ಕಾಲೋನಿ ನಿವಾಸಿ ರವಿ ಎಂಬಾತನನ್ನು ಬಂಧಿಸಿ, ಆತನಿಂದ ಸುಮಾರು 1.35 ಲಕ್ಷ ರೂ., ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಉಪ ವಿಭಾಗದ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ.

Advertisement

ಆತನ ಪತ್ತೆಗಾಗಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಸೂರ್ಯಪ್ರಕಾಶ್‌ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಮೇಶ್‌, ಗಜೇಂದ್ರ, ಬಿ.ವೆಂಕಟೇಶಪ್ಪ, ಶ್ರೀನಿವಾಸ್‌, ಚಂದ್ರಶೇಖರ್‌, ಸುನಿಲ್‌ ಕುಮಾರ್‌, ಮಹೇಂದ್ರ ಕುಮಾರ್‌ ಅವರನ್ನು ಒಳಗೊಂಡು ತಂಡವನ್ನು ರಚಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next