ಬೆಂಗಳೂರು: ಪೂರ್ವ ವಿಭಾಗದ ಐದು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ16 ಆರೋಪಿಗಳನ್ನು ಬಂಧಿಸಿ 38 ಲಕ್ಷ ರೂ. ಮೌಲ್ಯದ 58 ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಕಂಠೀರವ ಸ್ಟೇಡಿಯಂನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ವೀಲ್ಹಿಂಗ್ ನಡೆಸಲು ಹಾಗೂ ಜಾಲಿ ರೈಡ್‌ಗಾಗಿ ಬೈಕ್ ಕದಿಯುತ್ತಿದ್ದ ವಿಮಲ್ ರಾಜ್, ವಿನೋದ್‌ನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿ 6.5 ಲಕ್ಷ ರೂ. ಬೆಲೆ ಬಾಳುವ11 ದ್ವಿಚಕ್ರ ವಾಹನಗಳ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ವೀಲ್ಹಿಂಗ್ ಮಾಡಲು ಹಾಗೂ ಜಾಲಿ ರೈಡ್‌ಗಾಗಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಲಾಕ್ ಮುರಿದು ಹಾಗೂ ನಕಲಿ ಕೀಗಳನ್ನು ಉಪಯೋಗಿಸಿ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು.
ಬಾಣಸವಾಡಿ ಪೊಲೀಸರು ದಿಲೀಪ್, ರಂಗನಾಥ್, ಮೊಹಮ್ಮದ್ ಸಾಹಿಲ್, ಮೊಹಮ್ಮದ್ ಮಕ್ಸೂದ್, ಸೈಯದ್ ಜಬೀ, ಅಹಮದ್ ಖಾನ್, ಸೈಯದ್ ಅಸ್ಲಂ ಅವರನ್ನು ಬಂಧಿಸಿ 22 ಲಕ್ಷ ರೂ. ಮೌಲ್ಯದ 28 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ಕಳ್ಳತನ ಮಾಡಿದ ವಾಹನಗಳನ್ನು ಕೋಲಾರ, ಹೊಸಕೋಟೆ ಇನ್ನಿತರ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಅವರು ಹೇಳಿದರು.
ಕೀ ಬಿಟ್ಟು ಹೋದ ವಾಹನ ಕಳವು: ಪುಲಕೇಶಿನಗರ ಠಾಣೆ ಪೊಲೀಸರು ಮುದಾಸಿರ್, ಮೋಸಿನ್ ಹಾಗೂ ಆಲನ್‌ನ್ನು ಬಂಧಿಸಿ 4 ಲಕ್ಷ ಬೆಲೆ ಬಾಳುವ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಾಹನಗಳಲ್ಲಿಯೇ ಕೀ ಬಿಟ್ಟು ಹೋಗಿರುವ, ಮನೆಯ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಗಳ ಲಾಕ್ ಅನ್ನು ಮುರಿದು ಮತ್ತು ನಕಲಿ ಕೀಗಳನ್ನು ಉಪಯೋಗಿಸಿ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು.
ಮೋಜಿನ ಜೀವನ ಹಾಗೂ ಜಾಲಿ ರೈಡ್‌ಗಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ 3 ಮಂದಿ ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ಜೆ.ಬಿ.ನಗರ ಠಾಣೆ ಪೊಲೀಸರು ಪತ್ತೆಮಾಡಿದ್ದು, ಅವರಿಂದ 4 ಲಕ Ò ರೂ. ಬೆಲೆ ಬಾಳುವ 5ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ರಾತ್ರಿ ವೇಳೆಯಲ್ಲಿ ಮನೆಯ ಮುಂಭಾಗ ನಿಲ್ಲಿಸಿದ್ದ ವಾಹನಗಳ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಜಗ್ನನಾಥ್‌ನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿ 1.50 ಲಕ Ò ರೂ. ಬೆಲೆ ಬಾಳುವ 3 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ ಎಂದು ಅವರು ವಿವರಿಸಿದರು.