ಸೋಶಿಯಲ್ ಮೀಡಿಯಾದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕಳ್ಳನೊಬ್ಬ ಕಳ್ಳತನ ಮಾಡಿದ ನಂತರ ತಾನು ಮಾಡಿದ ಅಪರಾಧಕ್ಕೆ ಕ್ಷಮೆಯಾಚಿಸುವಂತೆ ವಸ್ತು ಕಳೆದುಕೊಂಡ ವ್ಯಕ್ತಿಗೆ ಇ-ಮೇಲ್ ಹಾಕಿರುವುದು ಭಾರೀ ಚರ್ಚೆಯ ವಿಷಯವಾಗಿದೆ.
ಕಳ್ಳ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದರೂ ಆತನ ಸಂದೇಶ ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ವಾಸ್ತವವಾಗಿ, ಇತ್ತೀಚೆಗೆ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ನಲ್ಲಿ ಜ್ವೇಲಿ_ಥಿಕ್ಸೋ ಎಂಬ ವ್ಯಕ್ತಿ ತನ್ನ ಲ್ಯಾಪ್‌ಟಾಪ್ ಅನ್ನು ಕದ್ದ ಕಳ್ಳನಿಂದ ಸ್ವೀಕರಿಸಿದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಕಳ್ಳ ಮಾಡಿರುವ ಇ-ಮೇಲ್ ನಲ್ಲಿ ಲ್ಯಾಪ್ ಟಾಪ್ ಕಳ್ಳತನ ಮಾಡಿರುವ ಕುರಿತು ಕ್ಷಮೆ ಇರಲಿ, ನನಗೆ ತುರ್ತು ಹಣದ ಅವಶ್ಯಕತೆ ಇತ್ತು ಹಾಗಾಗಿ ನಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಮೇಲ್ ಮಾಡಿದ್ದಾನೆ ಅಲ್ಲದೆ ಇದರೊಂದಿಗೆ ಕಳ್ಳ ಮಾಡಿರುವ ಸಂದೇಶ ಲ್ಯಾಪ್ ಟಾಪ್ ಕಳೆದುಕೊಂಡ ವ್ಯಕ್ತಿಯ ಮನ ಮುಟ್ಟಿದೆ. ಅದೇನೆಂದರೆ ನಿಮ್ಮ ಲ್ಯಾಪ್ ಟಾಪ್ ನಲ್ಲಿ ಮುಖ್ಯವಾದ ಫೈಲ್ ಏನಾದರು ಇದ್ದಲ್ಲಿ ನನಗೆ ಸೋಮವಾರ ಮಧ್ಯಾಹ್ನ 12 ಗಂಟೆಯ ಒಳಗೆ ತಿಳಿಸಿ ಯಾಕೆಂದರೆ ಲ್ಯಾಪ್ ಟಾಪ್ ಕೊಳ್ಳಲು ಒಬ್ಬರು ಗ್ರಾಹಕರು ಸಿಕ್ಕಿದ್ದಾರೆ ಹಾಗಾಗಿ ಅದಕ್ಕೂ ಮೊದಲು ಏನಾದರು ಅಗತ್ಯ ಫೈಲ್ ಬೇಕಾಗಿದ್ದಾರೆ ನನಗೆ ಮೇಲ್ ಮಾಡಿ, ಕೂಡಲೇ ಕಳುಹಿಸುವೆ ಎಂದು ಹೇಳಿಕೊಂಡಿದ್ದಾನೆ.
ಕಳ್ಳನ ಈ ಮೇಲ್ ಕಂಡು ಲ್ಯಾಪ್ ಟಾಪ್ ಕಳೆದುಕೊಂಡ ವ್ಯಕ್ತಿಯೇ ಗೊಂದಲಕ್ಕೆ ಒಳಗಾಗಿದ್ದಾನೆ, ಆತನ ಆರ್ಥಿಕ ಪರಿಸ್ಥಿತಿ ಆತನನ್ನು ಈ ಸ್ಥಿತಿಗೆ ತಂದಿದೆ ಎಂದು ಆತ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ತನಗೆ ಹಾವು ಕಚ್ಚಿತೆಂದು ತಿರುಗಿ ಹಾವನ್ನೇ ಕಚ್ಚಿದ ಬಾಲಕ… ಮುಂದೆ ಆಗಿದ್ದು ಮಾತ್ರ ವಿಸ್ಮಯ