ಡಾ.ಶಿವರಾಜ್ ಪಾಟೀಲ್ ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವ ಬಗ್ಗೆ ಮತ್ತೂಮ್ಮೆ ವಿಧಾನಸಭೆ ಕಾರ್ಯದರ್ಶಿಗೆ
ಪತ್ರ ನೀಡಿದ್ದಾರೆ.
Advertisement
ಖುದ್ದು ಹಾಜರಾಗಿ ವಿವರಣೆ ನೀಡುವಂತೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ನೀಡಿದ್ದ ನೋಟಿಸ್ ಹಿನ್ನೆಲೆಯಲ್ಲಿ ಸೋಮವಾರ ಇಬ್ಬರೂ ಶಾಸಕರು ವಿದಾನಸಭೆ ಕಾರ್ಯದರ್ಶಿ ಎದುರು ಹಾಜರಾಗಿ ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಲಿಖೀತ ಪತ್ರ ಸಲ್ಲಿಸಿದರು.
ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನಪ್ಪ ವಜ್ಜಲ್, ನಾವು ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇವೆ. ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದೇವೆ. ಅದಕ್ಕೂ ಮುನ್ನ ಸ್ಪೀಕರ್ ಅವರ ಜತೆಯೂ ಚರ್ಚಿಸಿದ್ದೇವೆ. ಅವರ ನಿರ್ದೇಶನದ ಪ್ರಕಾರವೇ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೆವು. ಇದೀಗ ಮತ್ತೆ ವಿವರಣೆ ಕೋರಿದ್ದರಿಂದ ಲಿಖೀತ ಪತ್ರ ಸಹ ನೀಡಿದ್ದೇವೆ. ರಾಜೀನಾಮೆ ಅಂಗೀಕಾರದ ಬಳಿಕ ಬಿಜೆಪಿ
ಸೇರಲಿದ್ದೇವೆ ಎಂದು ತಿಳಿಸಿದರು. ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮ ಇದೆ ಎಂದು ಹೇಳಿದ್ದಕ್ಕೆ ಹೋಗಿದ್ದೆವು ಅಷ್ಟೆ.
ಆದರೆ, ನಮ್ಮ ವಿರುದಟಛಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಉಪಾಧ್ಯಕ್ಷರು
ಯಾಕೆ ಮನವಿ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.