Advertisement

ನಿಮ್ಮ ಹಣ ದುಪ್ಪಟ್ಟಾಗಬೇಕೆ..? ಪೋಸ್ಟ್ ಆಪೀಸ್ ನ ಈ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ

03:02 PM Apr 29, 2021 | Team Udayavani |

ನವದೆಹಲಿ: ಜನ ಸಾಮಾನ್ಯರಿಗೆ ಹತ್ತಿರವಾಗುವಂತೆ  ಪೋಸ್ಟ್ ಆಫೀಸ್ ಗಳಲ್ಲಿ ಅನೇಕ ಉಳಿತಾಯ ಯೋಜನೆಗಳಿವೆ. ಪೋಸ್ಟ್ ಆಫೀಸ್ ನ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹಣ ಕಳೆದುಕೊಳ್ಳುತ್ತೇವೆ ಎಂಬ ಭಯ ಇರುವುದಿಲ್ಲ. ಹಾಗಾಗಿ ಆನ್ ಲೈನ್ ಟ್ರಾನ್ಸಾಕ್ಶನ್ ಯುಗದಲ್ಲಿಯೂ ಕೂಡ ಇಂದಿಗೂ ಪೋಸ್ಟ್ ಆಫೀಸ್ ಅಂದಿಂದ ವಿಶ್ವಾಸರ್ಹತೆಯನ್ನೇ ಉಳಿಸಿಕೊಂಡಿದೆ ಎನ್ನುವುದು ವಿಶೇಷ.

Advertisement

ಜನ ಸಾಮಾನ್ಯರಿಗೆ ಹತ್ತಿರವಾಗುವ ಪೋಸ್ಟ್ ಆಫೀಸ್ ನ ಕೆಲವು ಉಳಿತಾಯ ಖಾತೆಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ಇದೆ.

ಓದಿ : ಬೆಂಗಳೂರಿನಿಂದ ಹಳ್ಳಿಗಳಿಗೆ ಬಂದ ಜನರ ಬಗ್ಗೆ ನಿಗಾ ವಹಿಸಿ: ಜಿಲ್ಲಾಧಿಕಾರಿಗಳಿಗೆ ಸಿಎಂ

  1. ಪೋಸ್ಟ್ ಆಫೀಸ್ ಟೈಂ ಡೆಪಾಸಿಟ್ : 

ಅಂಚೆ ಕಚೇರಿಯ 1 ವರ್ಷದಿಂದ 3 ವರ್ಷಗಳವರೆಗಿನ ಟೈಂ ಡೆಪಾಸಿಟ್ ಮೇಲೆ 5.5% ಬಡ್ಡಿ ನೀಡುತ್ತದೆ. ಈ ಉಳಿತಾಯ ಖಾತೆಯಲ್ಲಿ ನೀವು ಹೂಡಿಕೆ ಮಾಡಿದರೆ, ನಿಮ್ಮ ಹಣವು ಸುಮಾರು 13 ವರ್ಷಗಳಲ್ಲಿ ದುಪ್ಪಟ್ಟಾಗುತ್ತದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅಂತೆಯೇ, ನೀವು 5 ವರ್ಷಗಳ ಟೈಂ ಡೆಪಾಸಿಟ್  ಮೇಲೆ ಶೇಕಡಾ 6 ರಷ್ಟು ಬಡ್ಡಿಯನ್ನು ಪಡೆಯ ಬಹುದಾಗಿದೆ.

 2. ಪೋಸ್ಟ್ ಆಫೀಸ್ ಸೇವಿಂಗ್ ಬ್ಯಾಂಕ್ ಅಕೌಂಟ್: 

Advertisement

ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಅಥವಾ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನಲ್ಲಿ ಇಟ್ಟರೆ,   ಇಲ್ಲಿ ಕೇವಲ 4.0 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಅಂದರೆ, ನಿಮ್ಮ ಹಣವು 18 ವರ್ಷಗಳಲ್ಲಿ ದುಪ್ಪಟ್ಟಾಗುತ್ತದೆ. ಅಂದರೇ, ನೀವು ಇಲ್ಲಿ ಹೆಚ್ಚು ಸಮಯವನ್ನು ನೀವು ಉಳಿತಾಯ ಮಾಡಿದ ಹಣ ದುಪ್ಪಟ್ಟಾಗಲು ಕಾಯ ಬೇಕಾಗುತ್ತದೆ.

3. ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ :

ಪ್ರಸ್ತುತ ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ ನಲ್ಲಿ ಶೇಕಡಾ 5.8 ರಷ್ಟು ಬಡ್ಡಿ  ನೀಡಲಾಗುತ್ತಿದೆ, ಆದ್ದರಿಂದ ಹಣವನ್ನು ಈ ಬಡ್ಡಿದರದೊಂದಿಗೆ ಹೂಡಿಕೆ ಮಾಡಿದರೆ, ಅದು ಸುಮಾರು 12.41 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

4. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ : 

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಶೇಕಡಾ 6.6 ಬಡ್ಡಿ ಸಿಗುತ್ತದೆ. ಈ ಬಡ್ಡಿದರದೊಂದಿಗೆ ಹಣವನ್ನು ಹೂಡಿಕೆ ಮಾಡಿದರೆ, ಅದು ಸುಮಾರು 10.91 ವರ್ಷಗಳಲ್ಲಿ ನೀವು ಉಳಿತಾಯ ಮಾಡಿದ ಹಣ ದುಪ್ಪಟ್ಟಾಗುತ್ತದೆ.

5. ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ : 

ಅಂಚೆ ಕಚೇರಿಯ ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಪ್ರಸ್ತುತ 7.4% ಬಡ್ಡಿಯನ್ನು ಪಾವತಿಸಲಾಗುತ್ತದೆ. ಸುಮಾರು 9.73 ವರ್ಷಗಳಲ್ಲಿ ನಿಮ್ಮ ಹಣ ಈ ಯೋಜನೆಯಲ್ಲಿ ದ್ವಿಗುಣಗೊಳ್ಳುತ್ತದೆ.

6.ಪೋಸ್ಟ್ ಆಫೀಸ್ ಪಿಪಿಎಫ್:

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಅಥವ ಪಿ ಎಫ್ ಎಫ್ ಪ್ರಸ್ತುತ ಶೇಕಡಾ 7.1 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಅಂದರೆ, ಈ ದರದಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಸುಮಾರು 10.14 ವರ್ಷಗಳು ತೆಗೆದುಕೊಳ್ಳುತ್ತದೆ.

7. ಸುಕನ್ಯಾ ಸಮೃದ್ಧಿ ಖಾತೆ:

ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಲ್ಲಿ ಪ್ರಸ್ತುತ ಶೇಕಡಾ 7.6 ರಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ.  ಬಾಲಕಿಯರಿಗಾಗಿ ನಡೆಸುತ್ತಿರುವ ಈ ಯೋಜನೆಯಲ್ಲಿ, ಹಣವನ್ನು ದ್ವಿಗುಣಗೊಳಿಸಲು ಸುಮಾರು 9.47 ವರ್ಷಗಳು ವ್ಯಯಿಸಲಿದೆ.

8. ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ:

ಅಂಚೆ ಕಚೇರಿ ಕಿಸಾನ್ ವಿಕಾಸ್ ಪತ್ರ  ಯೋಜನೆಯಲ್ಲಿ ಶೇಕಡಾ 6.9 ರಷ್ಟು ಬಡ್ಡಿ ನೀಡಲಾಗುತ್ತಿದೆ. ಈ ಬಡ್ಡಿದರದೊಂದಿಗೆ, ಇಲ್ಲಿ ಹೂಡಿಕೆ ಮಾಡಿದ ಮೊತ್ತವು 124 ತಿಂಗಳುಗಳಲ್ಲಿ ದುಪ್ಪಟ್ಟಾಗುತ್ತದೆ.

ಓದಿ : ಪ್ಲಾಸ್ಮಾ ದಾನ ಮಾಡಿ; ಸೋಂಕಿತರ ಜೀವ ಉಳಿಸಿ

Advertisement

Udayavani is now on Telegram. Click here to join our channel and stay updated with the latest news.

Next