Advertisement

ಲೆಕ್ಕ ಬಿಡಿಸುವುದರಲ್ಲಿ ಈ ಮಕ್ಕಳು ಪಕ್ಕ

12:13 PM Oct 31, 2017 | Team Udayavani |

ಬೆಂಗಳೂರು: ನಗರದ ಎಸ್‌ಐಪಿ ಅಕಾಡೆಮಿ ಇತೀ¤ಚೆಗೆ ಯಶವಂತಪುರದ ಪ್ರಭಾಕರ್‌ ಕೋರೆ ಕನ್ವೆನ್ಷನ್‌ ಸೆಂಟರ್‌ನಲ್ಲಿ ಅಂತಾರಾಷ್ಟ್ರೀಯ ಅಬಾಕಸ್‌ ಮತ್ತು ಅರಿತ್‌ಮ್ಯಾಟಿಕ್‌ ಸ್ಪರ್ಧೆ ಆಯೋಜಿಸಿತ್ತು. ಸ್ಪರ್ಧೆ ಕುರಿತು ಎಸ್‌ಐಪಿ ಅಕಾಡೆಮಿಯ ಮುಖ್ಯಸ್ಥ ಎಚ್‌.ಎನ್‌.ನರೇಂದ್ರ ಅವರು ಮಾತನಾಡಿ, ಸ್ವರ್ಧೆ ಕೇವಲ ಅಬಾಕಸ್‌ ಮತ್ತು ಬ್ರೈನ್‌ಜಿಮ್‌ ಅಲ್ಲ.

Advertisement

ಆರಿತ್‌ಮ್ಯಾಟಿಕ್‌ ಜೀನಿಯಸ್‌ ಎನ್ನುವ ಗಣಿತದ ಸ್ಪರ್ಧಾತ್ಮಕ ಪರೀಕ್ಷೆ ಇದಾಗಿದ್ದು, ಮಕ್ಕಳ ಏಕಾಗ್ರತೆ, ವಿಶ್ವಾಸ, ಬುದ್ಧಿವಂತಿಕೆ, ವೇಗ, ನಿಖರತೆಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮಕ್ಕಳಲ್ಲಿರುವ ಸ್ಪರ್ಧಾತ್ಮಕ ಮನೋಭಾವವನ್ನು ಉತ್ತಮಪಡಿಸುವುದು ಹಾಗೂ ಲೆಕ್ಕ ಬಿಡಿಸುವುದರಲ್ಲಿ ಮಕ್ಕಳನ್ನು ಪಕ್ಕಗೊಳಿಸುವುದು ಈ ಸ್ಪರ್ಧೆಯ ಉದ್ದೇಶ. 

ಸ್ಪರ್ಧೆಯಲ್ಲಿ ರಾಜ್ಯದ ಹುಬ್ಬಳ್ಳಿ, ರಾಣೆಬೆನ್ನೂರು, ಬಳ್ಳಾರಿ, ಹರಿಹರ, ಬ್ಯಾಡಗಿ, ಚಿಕ್ಕಬಳ್ಳಾಪುರ, ತುಮಕೂರು, ಗುಲ್ಬರ್ಗ, ಉಡುಪಿ, ನೆಲ ಮಂಗಲ, ತುಮಕೂರು, ಕೊಪ್ಪಳ, ಮೈಸೂರು, ಸಿರಗುಪ್ಪ, ಕುಮಟಾ, ಹೊನ್ನಾವರದಿಂದ 3800 ಮಕ್ಕಳು ಭಾಗವಹಿಸಿದ್ದರು ಎಂದು ತಿಳಿಸಿದರು. 

ಲಿಮ್ಕಾ ಸಾಧನೆ: ಎಸ್‌ಐಪಿ ಅಕಾಡೆಮಿಯು ಅಂತರಾಷ್ಟ್ರೀಯ ಅಬಾಕಸ್‌ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಿರುವುದಕ್ಕೆ ಹಾಗೂ ಎಸ್‌ ಐಪಿ ಸ್ಪರ್ಧೆಯಲ್ಲಿ ಐದು ನಿಮಿಷದ ಅವಧಿಯಲ್ಲಿ ಅತಿ ಹೆಚ್ಚಿನ ಗಣಿತದ ಲೆಕ್ಕವನ್ನು ಪರಿಹಾರ ಮಾಡಿದ ಸಾಧನೆಗಾಗಿ ಲಿಮ್ಕಾ ಸಾಧನೆಗೆ ದಾಖಲೆಯಾಗಿದೆ. ಮಾಹಿತಿಗೆ 98864 75059 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next