Advertisement
ಭಾರತೀಯ ಆಹಾರ ಕ್ರಮಕ್ಕೂ ಹಾಗೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ಪುರಾತನ ಕಾಲದಿಂದಲೂ ಬೆಳೆಸಿಕೊಂಡು ಬಂದ ಆಹಾರ ಕ್ರಮಗಳು ನಮ್ಮನ್ನು ಕಾಡಬಲ್ಲ ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತಾ ಬಂದಿದೆ. ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಧಗಳಾದ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಅರಶಿನಗಳು ನಮ್ಮ ಆರೋಗ್ಯವನ್ನು ಕಾಪಾಡುವ ಮೂಲಕ ಸುಂದರ ಬದುಕಿಗೆ ಸಹಾಯಕವಾಗಿವೆ. ಅಂತಹಾ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಅರಶಿನಗಳ ನಾನಾ ಉಪಯೋಗಗಳು ಈ ಕೆಳಗಿನಂತಿದೆ…
Advertisement
-ಬೆಳ್ಳುಳ್ಳಿ, ಮೆಣಸು, ನಾಗದಾಳಿ ಸೊಪ್ಪು ಸಮಪ್ರಮಾಣದಲ್ಲಿ ಅರೆದು ಮಾತ್ರೆ ತಯಾರಿಸಿಟ್ಟುಕೊಂಡು ದಿನಕ್ಕೆ ಮೂರು ಬಾರಿ ಸೇವಿಸಿದರೆ ಉಬ್ಬಸ ರೋಗ ಕಡಿಮೆಯಾಗುತ್ತದೆ.
-ಬೆಳ್ಳುಳ್ಳಿಯನ್ನು ಜಜ್ಜಿ ಎಳ್ಳೆಣ್ಣೆಯಲ್ಲಿ ಹಾಕಿ ಬಿಸಿಮಾಡಿ ತಣ್ಣಗಾದ ನಂತರ ಇಲ್ಲವೇ ಸ್ವಲ್ಪ ಬೆಚ್ಚಗಿರುವಾಗಲೇ ಶೋಧಿಸಿ ಮೂರ್ನಾಲ್ಕು ಹನಿ ಕಿವಿಗೆ ಹಾಕಿದರೆ ಕಿವಿನೋವು ನಿವಾರಣೆಯಾಗುತ್ತದೆ.
-40 ಗ್ರಾಂ. ಬೆಳ್ಳುಳ್ಳಿ ಹಾಗೂ 5 ಗ್ರಾಂ ಸೈಂಧವ ಲವಣ, ಜೀರಿಗೆ, ಶುಂಠಿ, ಮೆಣಸು ,ಹಿಪ್ಪಲಿ, ಹುರಿದ ಇಂಗು ಇವುಗಳನ್ನು ಅರೆದು ಮಾತ್ರೆ ತಯಾರಿಸಿಕೊಂಡು ಬೆಳಿಗ್ಗೆ 1 ಮಾತ್ರೆಯನ್ನು ಹದಿನೈದು ದಿನಗಳ ಕಾಲ ಸೇವಿಸಿದರೆ ಕೀಲು ನೋವು ಕಡಿಮೆಯಾಗುತ್ತದೆ.
-ಚೇಳು ಕುಟುಕಿದ ಜಾಗಕ್ಕೆ ಬೆಳ್ಳುಳ್ಳಿ ತೊಳೆಯನ್ನು ತೇದು ಹಚ್ಚಿದರೆ ನೋವು ಕೂಡಲೇ ಕಡಿಮೆಯಾಗುತ್ತದೆ.
-ಬೆಳ್ಳುಳ್ಳಿ ಸೇವನೆಯಿಂದ ಕ್ಷಯ ರೋಗ ನಿವಾರಣೆಯಾಗುತ್ತದೆ.
-ದಢೂತಿಗಳು ಬೆಳ್ಳುಳ್ಳಿಯನ್ನು ಪ್ರತಿದಿನ ಆಹಾರದಲ್ಲಿ ಉಪಯೋಗಿಸಿದರೆ ಶರೀರದ ತೂಕ ಗಣನೀಯವಾಗಿ ಕುಗ್ಗುತ್ತದೆ
-ಪ್ರತಿದಿನ ಬೆಳ್ಳುಳ್ಳಿಯನ್ನು ಆಹಾರದೊಡನೆ ಸೇವಿಸುತ್ತಿದ್ದರೆ ರಕ್ತದೊತ್ತಡ ಉಂಟಾಗುವುದಿಲ್ಲ.
-ಬೆಳ್ಳುಳ್ಳಿ ಬೇಯಿಸಿದ ನೀರಿನಿಂದ ಗಾಯವಾದ ಜಾಗವನ್ನು ತೊಳೆಯುತ್ತಿದ್ದರೆ ರೋಗಾಣುಗಳು ನಾಶವಾಗಿ ಗಾಯ ಬಹುಬೇಗ ಮಾಯವಾಗುತ್ತದೆ.
ಈರುಳ್ಳಿ:
-ಒಂದು ಚಮಚ ಹಸಿ ಈರುಳ್ಳಿ ರಸಕ್ಕೆ ಒಂದು ಚಮಚ ಬೆಲ್ಲ ಸೇರಿಸಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
-4 ಚಮಚ ಈರುಳ್ಳಿ ರಸದಲ್ಲಿ 1 ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆರಡು ಸಲ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ.
-ಈರುಳ್ಳಿ ರಸಕ್ಕೆ ಒಂದು ಚಿಟಿಕೆ ಅರಿಶಿಣದ ಪುಡಿ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ತಲೆ ನೋವು ಗುಣವಾಗುತ್ತದೆ.
-ಈರುಳ್ಳಿಯನ್ನು ಜಜ್ಜಿ ಮೂಗಿನ ಬಳಿ ಹಿಡಿದು ವಾಸನೆ ತೆಗೆದುಕೊಳ್ಳುತ್ತಿದ್ದರೆ ಮೂಗಿನಿಂದ ರಕ್ತ ಬರುವುದು ನಿಲ್ಲುತ್ತದೆ.
-50 ಮಿಲಿ ಈರುಳ್ಳಿ ರಸವನ್ನು ಸಿಹಿ ಮಜ್ಜಿಗೆಯಲ್ಲಿ ಬೆರೆಸಿ ಊಟದ ಬಳಿಕ ಕುಡಿದರೆ ಮೂಲವ್ಯಾಧಿ ವಾಸಿಯಾಗುತ್ತದೆ.
-ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನುತ್ತಿದ್ದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ.
-2 ಚಮಚ ಬಿಳಿ ಈರುಳ್ಳಿ ರಸ, 1 ಚಮಚ ಶುಂಠಿ ರಸ, 1 ಚಮಚ ಜೇನುತುಪ್ಪ, ಅರ್ಧ ಚಮಚ ತುಪ್ಪ ಇವುಗಳನ್ನು ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿದರೆ ಲೈಂಗಿಕ ಶಕ್ತಿ ಹೆಚ್ಚುತ್ತದೆ
– ಈರುಳ್ಳಿಯನ್ನು ಹಸಿಯಾಗಿ ಪ್ರತಿನಿತ್ಯ ಸೇವಿಸಿದರೆ ರಕ್ತ ಹೆಚ್ಚಾಗುತ್ತದೆ.
– ಈರುಳ್ಳಿಯನ್ನು ಸುಟ್ಟು ತಿನ್ನುವುದರಿಂದ ಅಜೀರ್ಣ ದೂರವಾಗುತ್ತದೆ.
-ಸ್ವಲ್ಪ ಬೆಲ್ಲದೊಂದಿಗೆ ಈರುಳ್ಳಿಯನ್ನು ತಿನ್ನುತ್ತಿದ್ದರೆ ದೇಹದ ತೂಕ ಹೆಚ್ಚಾಗುತ್ತದೆ.
-ಊಟದ ಜೊತೆಯಲ್ಲಿ ಹಸಿ ಈರುಳ್ಳಿಯನ್ನು ನಂಚಿಕೊಂಡು ತಿಂದರೆ ಕಣ್ಣು ನೋವು ನಿವಾರಣೆಯಾಗುತ್ತದೆ.
-ಚೇಳು ಕುಟುಕಿದ ಜಾಗಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಉಜ್ಜಿದರೆ ನೋವು ಶಮನವಾಗುತ್ತದೆ.
-ಈರುಳ್ಳಿ ರಸವನ್ನು ಬಿಸಿ ಮಾಡಿ ಒಂದೆರಡು ತೊಟ್ಟು ಕಿವಿಗೆ ಹಾಕಿಕೊಂಡರೆ ಶೀತಕ್ಕೆ ಉಂಟಾಗುವ ಕಿವಿ ನೋವು ನಿವಾರಣೆಯಾಗುತ್ತದೆ.
-ಈರುಳ್ಳಿಯನ್ನು ನುಣ್ಣಗೆ ಅರೆದು ವಸಡಿಗೆ ಮೃದುವಾಗಿ ಹಚ್ಚಿದರೆ ದಂತಕ್ಷಯ ನಿವಾರಣೆಯಾಗುತ್ತದೆ.
-ಬಿಸಿ ಈರುಳ್ಳಿ ರಸಕ್ಕೆ ಅರಿಶಿಣದ ಪುಡಿ ಹಾಕಿ ಕಲಸಿ ತುರಿಕಜ್ಜಿ ಮೇಲೆ ಹಚ್ಚಿದರೆ ತುರಿಕಜ್ಜಿ ಬಹುಬೇಗ ನಿವಾರಣೆಯಾಗುತ್ತದೆ
-ಪ್ರತಿದಿನ ಈರುಳ್ಳಿಯನ್ನು ಸುಮಾರಾಗಿ ಬೇಯಿಸಿಕೊಂಡು ತಿಂದರೆ ಹೃದಯದ ಸಮಸ್ಯೆ ಬರುವುದಿಲ್ಲ
– ಅರ್ಧ ಈರುಳ್ಳಿ 2 ಬೆಳ್ಳುಳ್ಳಿ ,ಇಂಗು ಬೆರೆಸಿ ಅರೆದು ಲೇಹ ಮಾಡಿ ಹಾಕಿದರೆ ಕಿವಿನೋವು ವಾಸಿಯಾಗುತ್ತದೆ
ಅರಶಿನ
-ಅರಿಶಿನದ ಚೂರನ್ನು ಸುಟ್ಟು ಪುಡಿ ಮಾಡಿಕೊಂಡು ಬೆರೆಸಿ ಹಲ್ಲುಜ್ಜುವುದರಿಂದ ದಂತಕ್ಷಯ ನಿವಾರಣೆಯಾಗುತ್ತದೆ
-ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಶಿನ ಪುಡಿ ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ಕುಡಿಯುವುದರಿಂದ ನೆಗಡಿ ಮತ್ತು ಗಂಟಲು ನೋವು ನಿವಾರಣೆಯಾಗುತ್ತದೆ.
-ಅರಿಶಿನದ ಪುಡಿಯನ್ನು ಹರಳೆಣ್ಣೆ ಮಿಶ್ರಣ ಮಾಡಿ ಶರೀರಕ್ಕೆ ಹಚ್ಚಿಕೊಂಡು ಸ್ನಾನ ಮಾಡಿದರೆ ಚರ್ಮದ ಕಾಂತಿ ಹೆಚ್ಚಾಗುವುದು ಮತ್ತು ಚರ್ಮರೋಗ ನಿವಾರಣೆಯಾಗುವುದು.
-ಸ್ವಲ್ಪ ಅಪ್ಪಟವಾದ ಅರಿಶಿನದ ಪುಡಿಯನ್ನು ಮೊಸರಿನಲ್ಲಿ ಕದಡಿ ಬೆಳಗಿನ ಹೊತ್ತಿನಲ್ಲಿ ಒಂದು ವಾರದವರೆಗೆ ಸೇವಿಸಿದರೆ ಕಾಮಾಲೆ ರೋಗ ದೂರವಾಗುತ್ತದೆ.
-ಅರಶಿನದ ಅಡುಗೆಯಲ್ಲಿ ಬಳಸಿದರೆ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
– ಅರಸಿನದ ಕೊಂಬನ್ನು ಪುಡಿಮಾಡಿ ಕೆಂಡದ ಮೇಲೆ ಹಾಕಿ ಅದರ ಆವಿಯನ್ನು ತೆಗೆದುಕೊಳ್ಳುತ್ತಿದ್ದರೆ ನೆಗಡಿ ಕಡಿಮೆಯಾಗುತ್ತದೆ.