Advertisement

ಹೈಕೋರ್ಟ್‌ನಲ್ಲಿ ಥರ್ಮಲ್‌ ಸ್ಕ್ರೀನಿಂಗ್‌

12:50 AM Mar 21, 2020 | Lakshmi GovindaRaj |

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟಲು ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿರುವ ಹೈಕೋರ್ಟ್‌, ಮಂಗಳವಾರದಿಂದ ನ್ಯಾಯಾಲಯಕ್ಕೆ ಭೇಟಿ ನೀಡಿದ ಕಕ್ಷಿದಾರರರು, ಸಿಬ್ಬಂದಿ, ನ್ಯಾಯಾಂಗ ಹಾಗೂ ಸರ್ಕಾರಿ ಅಧಿಕಾರಿಗಳು, ಸಂದರ್ಶಕರನ್ನು “ಥರ್ಮಲ್‌ ಸ್ಕ್ರೀನಿಂಗ್‌’ಗೆ ಒಳಪಡಿಸಲಾಯಿತು.

Advertisement

ಹೈಕೋರ್ಟ್‌ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಥ‌ರ್ಮಲ್‌ ಸ್ಕ್ರೀನಿಂಗ್‌ ನಡೆಸಿದರು. ಆ ಕಾರ್ಯವನ್ನು ಸ್ವತಃ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಅವರೇ ಬೆಳಗ್ಗೆ ಕಲಾಪ ಆರಂಭವಾಗುವ ಮುನ್ನ ಹಾಗೂ ಮಧ್ಯಾಹ್ನ ಭೋಜನ ವಿರಾಮದ ವೇಳೆ ಪರಿಶೀಲಿಸಿದರು.

ಅಧಿಕಾರಿಗೆ ತರಾಟೆ: ಮಾಸ್ಕ್ ಧರಿಸಿ ಕೋರ್ಟ್‌ ಹಾಲ್‌ನಲ್ಲಿ ಕೂತಿದ್ದ ಸರ್ಕಾರಿ ಅಧಿಕಾರಿಗೆ ಮುಖ್ಯ ನ್ಯಾಯಮೂರ್ತಿಗಳು ತರಾಟೆಗೆ ತೆಗೆದು ಕೊಂಡರು. ಮಾಸ್ಕ್ ಧರಿಸಿ ಕೂತಿದ್ದ ವ್ಯಕ್ತಿಯನ್ನು ಗಮ ನಿಸಿದ ಸಿಜೆ, ಆತ ಯಾರೆಂದು ವಿಚಾರಿಸುವಂತೆ ಕೋರ್ಟ್‌ ಆಫೀಸರ್‌ಗೆ ಸೂಚಿಸಿದರು. ವಕೀಲರೊಂದಿಗೆ ಬಂದಿರುವುದಾಗಿ ಆ ಅಧಿಕಾರಿ ತಿಳಿಸಿದರು.

“ಮಾಸ್ಕ್ ಹಾಕಿಕೊಂಡಿರುವುದೇಕೆ?’ ಎಂದು ಸಿಜೆ ಮರು ಪ್ರಶ್ನೆ ಮಾಡಿದಾಗ, “ಕೊರೊನಾ ವೈರಸ್‌ ಭೀತಿಯಿಂದ ಮಾಸ್ಕ್ ಹಾಕಿಕೊಂಡಿದ್ದಾರೆ’ ಎಂದು ವಕೀಲರು ಉತ್ತರಿಸಿದರು. ಅದಕ್ಕೆ, “ಕೊರೊನಾ ವೈರಸ್‌ ಸೋಂಕಿತರಷ್ಟೇ ಮಾಸ್ಕ್ ಧರಿಸಬೇಕು’ ಎಂದರಲ್ಲದೆ, “ಸೋಂಕು ಇದ್ದರೆ, ಆತನನ್ನು ಕೋರ್ಟ್‌ನಿಂದ ಹೊರ ಹಾಕಿ’ ಎಂದು ಸಿಜೆ ಹೇಳಿದರು. ತಮಗೆ “ಕೊರೊನಾ ಸೋಂಕು ಇಲ್ಲ’ ಎಂದು ತಿಳಿಸಿದ ಆ ಅಧಿಕಾರಿ, ಮಾಸ್ಕ್ ತೆಗೆದು ಕಲಾಪ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next