Advertisement

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

10:31 AM Nov 22, 2024 | Team Udayavani |

ಉದಯವಾಣಿ ಸಮಾಚಾರ
ಬೆಂಗಳೂರು: ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಕ್ರಿಮಿನಲ್‌ಗ‌ಳ ಪತ್ತೆಗೂ ಒಂದು ಕೃತಕ ಬುದ್ಧಿಮತ್ತೆ ಬಂದಿದೆ! ವಿಜನ್‌ ಫ್ಯಾಕ್ಟ್ಸ್ ಎಐ ಸ್ಟಾರ್ಟ್‌ಅಪ್‌‌ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ. ಅದರಲ್ಲಿ ಸೆರೆಯಾಗುವ ವಿಡಿಯೋ ಚಿತ್ರಗಳನ್ನು ಆಧರಿಸಿ, ವಿವಿಧ ಕೃತ್ಯಗಳಲ್ಲಿ ತೊಡಗಿರುವ ಕ್ರಿಮಿನಲ್‌ಗ‌ಳ ಪತ್ತೆಗೆ ಸಹಕಾರಿ ಆಗಲಿದೆ. ಆದರೆ, ಇದಕ್ಕಾಗಿ
ಪೊಲೀಸರ ಬಳಿ ಈಗಾಗಲೇ ಇರುವ ಕ್ರಿಮಿನಲ್‌ಗ‌ಳ ಪಟ್ಟಿಯನ್ನು ಅಭಿವೃದ್ಧಿಪಡಿಸಿದ ಡಿವೈಸ್‌ ಮೂಲಕ ತಾಂತ್ರಿಕವಾಗಿ ವಿಶ್ಲೇಷಣೆ ಮಾಡಬೇಕಾಗುತ್ತದೆ.

Advertisement

ಸಾಮಾನ್ಯವಾಗಿ ಪೊಲೀಸರ ಬಳಿ ಕ್ರಿಮಿನಲ್‌ಗ‌ಳ ಪಟ್ಟಿ ಇರುತ್ತದೆ. ಆ ಕ್ರಿಮಿನಲ್‌ಗ‌ಳ ಫೋಟೋ ಸಹಿತ ಎಲ್ಲ ವಿವರವನ್ನು ವಿಜನ್‌ ಫ್ಯಾಕ್ಟ್ಸ್ ಎಐ ಅಭಿವೃದ್ಧಿ‌ ಪಡಿಸಿದ ಡಿವೈಸ್‌ನಲ್ಲಿ ಅಳವಡಿಸಿದರೆ ಸಾಕು, ಅದು ಆ ದತ್ತಾಂಶಗಳನ್ನು ವಿಶ್ಲೇಷಣೆ ಮಾಡುತ್ತದೆ. ಈ ಅಪರಾಧಿಗಳು ಯಾವುದೇ ಘಟನೆ ನಡೆದ ಸ್ಥಳದಲ್ಲಿ ಹಾಜರಿದ್ದರೆ, ಅಲ್ಲಿ ಅಳವಡಿಸಿರುವ ಸಿಸಿ
ಕ್ಯಾಮೆರಾದಲ್ಲಿನ ವಿಡಿಯೋ ತುಣುಕುಗಳಲ್ಲಿ ಸೆರೆ ಆಗಿರುತ್ತಾನೆ. ಅದನ್ನು ಉದ್ದೇಸಿತ ಎಐ ಡಿವೈಸ್‌ನಲ್ಲಿ ಹಾಕಿದರೆ, ತಕ್ಷಣ ಮಾಹಿತಿ ದೊರೆಯುತ್ತದೆ’ ಎಂದು ವಿಜನ್‌ ಫ್ಯಾಕ್ಟ್ಸ್ ಎಐನ ಅರುಣ್‌ ತಿಳಿಸಿದರು.

ಈಗಾಗಲೇ ಎಲ್ಲೆಂದರಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅವುಗಳನ್ನು ವಿಜನ್‌ ಫ್ಯಾಕ್ಟ್ಸ್ ಎಐನೊಂದಿಗೆ ಸಂಯೋಜನೆಗೊಳಿಸಿ, ಪತ್ತೆ ಮಾಡಲು ಸಾಧ್ಯವಿದೆ. ಈಗಾಗಲೇ ಬೆಂಗಳೂರು ಸಂಚಾರ ಪೊಲೀಸರೊಂದಿಗೆ ಸಂಚಾರ ನಿಯಮಗಳ ಉಲ್ಲಂಘಿಸುವ ವಾಹನ ಸವಾರರ ಪತ್ತೆಯಲ್ಲಿ ಈ ಪ್ರಯೋಗ ನಡೆಯುತ್ತಿದೆ.

ಪ್ರಸ್ತುತ ಈಗಿರುವ ಸಿಗ್ನಲ್‌ಗ‌ಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರ ಚಿತ್ರಗಳನ್ನು ಸೆರೆಹಿಡಿದು ಕಳುಹಿಸುತ್ತಿವೆ. ಆದರೆ, ಅವುಗಳು ಅಷ್ಟು ನಿಖರವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಜನ್‌ಫ್ಯಾಕ್ಟ್ಸ್ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಯೋಗಿಕವಾಗಿ ಎರಡು ಪ್ರಮುಖ ಸಿಗ್ನಲ್‌ಗ‌ಳಲ್ಲಿ‌ ನಾವು ಪ್ರಯೋಗ ಮಾಡುತ್ತಿದ್ದೇವೆ. ಈ ವ್ಯವಸ್ಥೆಯಲ್ಲಿ ನಿಯಮ ಉಲ್ಲಂಘಿಸಿದ ವಾಹನಗಳ ಬಗ್ಗೆ ತಕ್ಷಣ ಸಂಚಾರ ಪೊಲೀಸರಿಗೆ ಮಾಹಿತಿ ರವಾನೆ ಆಗುತ್ತದೆ ಎಂದು ಅರುಣ್‌ ವಿವರಿಸಿದರು.

ಇದರ ಮುಂದುವರಿದ ಭಾಗವಾಗಿ ಕ್ರಿಮಿನಲ್‌ ಗಳ ಪತ್ತೆಯನ್ನೂ ಮಾಡಬಹುದಾಗಿದೆ. ಕ್ರಿಮಿನಲ್‌ ಗಳ ಮಾಹಿತಿ ಪಡೆದು, ಡಿವೈಸ್‌ನಲ್ಲಿ ಅಳವಡಿಸಿದರೆ ಸಾಕು, ಯಾವುದೇ ಕ್ರಿಮಿನಲ್‌ ಪ್ರಕರಣ ನಡೆದಾಗ, ಅದರಲ್ಲಿ ಈಗಾಗಲೇ ಕ್ರಿಮಿನಲ್‌ ಚಟುವಟಿಕೆಯಲ್ಲಿದ್ದ ವ್ಯಕ್ತಿಯ ಕೈವಾಡ ಇದೆಯೇ ಎಂಬುದನ್ನು ಸಿಸಿ ಕ್ಯಾಮೆರಾ ಸೆರೆಹಿಡಿದ ದೃಶ್ಯಗಳ ಮೂಲಕ ಪತ್ತೆ
ಮಾಡಬಹುದು ಎಂದು ಅವರು ಹೇಳಿದರು.

Advertisement

ಕ್ರಿಮಿನಲ್‌ಗ‌ಳ ಪತ್ತೆ ಹೇಗೆ?
1)ಕ್ರಿಮಿನಲ್‌ಗ‌ಳ ವಿವರವನ್ನು ವಿಜನ್‌ ಫ್ಯಾಕ್ಟ್ಸ್‌ ಡಿವೈಸ್‌ ಹಾಕಬೇಕು

2)ಬಳಿಕ ಕ್ರಿಮಿನಲ್‌ಗ‌ಳ ದತ್ತಾಂಶ ವಿಶ್ಲೇಷಣೆ ಮಾಡುವ ಫ್ಯಾಕ್ಟ್ಸ್‌ ಡಿವೈಸ್‌

3)ಅಪರಾಧಿ ಘಟನಾ ಸ್ಥಳದಲ್ಲಿದ್ದರೆ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆ

4)ಆ ಚಿತ್ರವನ್ನು ಎಐ ಡಿವೈಸ್‌ಗೆ ಹಾಕಿದರೆ ಅಪರಾಧಿಗಳ ಮಾಹಿತಿ ಲಭ್ಯ

 

Advertisement

Udayavani is now on Telegram. Click here to join our channel and stay updated with the latest news.

Next