Advertisement

ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌

05:25 PM Apr 28, 2020 | mahesh |

ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಆರೋಗ್ಯಾಧಿಕಾರಿಗಳು ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆ ಕಳೆದ 2 ದಿನಗಳಿಂದ ಮೈಸೂರಿನ
ಜನತಾನಗರ, ಕುವೆಂಪುನಗರ ಕಂಟೈನ್ಮೆಂಟ್‌ ಝೋನ್‌ವ್ಯಾಪ್ತಿಯಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ತಪಾಸಣೆ ನಡೆಸಲಾಯಿತು.

Advertisement

ಭಾನುವಾರ ಪೊಲೀಸರ ಬಿಗಿ ಭದ್ರತೆಯೊಂದಿಗೆ ಕುವೆಂಪುನಗರದ ಕೆಎಚ್‌ಬಿ ಕಾಲೋನಿಯಲ್ಲಿ ತಪಾಸಣೆ ನಡೆಸಿದ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಸೋಮವಾರ ಜನತಾ ನಗರದಲ್ಲಿ ತಪಾಸಣೆ ನಡೆಸಿದರು. ಜನತಾನಗರದ ಕಂಟೈನ್ಮೆಂಟ್‌ ಝೋನ್‌ ವ್ಯಾಪ್ತಿಯಲ್ಲಿರುವ 21ಂಬಗಳಿಂದ 829 ಮಂದಿಗೆ ತನಡೆಸಲಾಯಿತು. ಅವರಲ್ಲಿ 60 ವರ್ಷ ಮೇಲ್ಪಟ್ಟ 51 ಮಂದಿ, 14 ವರ್ಷಕ್ಕಿಂತಲೂ ಕಡಿಮೆ ಇರುವ 143 ಮಂದಿ, ರಕ್ತ ದೊತ್ತಡ ರೋಗಿಗಳು 17 ಮಂದಿ, ಮಧು ಮೇಹಿಗಳು 23 ಮಂದಿ, ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಇರುವ ರೋಗಿಗಳು 17 ಮಂದಿ, ಹೃದಯ ಸಂಬಂಧಿ ಕಾಯಿಲೆಯಿರುವ 6 ರೊಗಿಗಳು, 4 ಗರ್ಭಿಣಿಯರು, ಕಿಡ್ನಿ ಸಮಸ್ಯೆ ಇರುವ ಒಬ್ಬರಿಗೆ ತರ್ಮಲ್‌ ಸ್ಕ್ರೀನಿಂಗ್‌ ನಡೆಸಲಾಯಿತು.

ಕೊರೊನಾ ಲಕ್ಷಣಗಳಿಲ್ಲ: ಹಿರಿಯ ಆರೋಗ್ಯಾಧಿ ಕಾರಿ ರಾಜೇಂದ್ರಪ್ಪ ಮಾತನಾಡಿ, ಜನತಾ ನಗರದಲ್ಲಿ ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಿಸಿದ ಬಳಿಕ ಆ ವ್ಯಾಪ್ತಿಯಲ್ಲಿ ಪ್ರತಿದಿನ ಮನೆ ಮನೆ-ಮನೆಗೆ ಭೇಟಿ ನೀಡಿ, ಕಳೆದ 8 ದಿನಗಳಿಂದ ತಪಾಸಣೆ ನಡೆಸಲಾಗುತ್ತಿದೆ. ಸದ್ಯ ಯಾರಲ್ಲೂ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಸ್ಥಳೀಯ ನಿವಾಸಿಗಳು ಆರೋಗ್ಯವಾಗಿದ್ದಾರೆ ಎಂದು ಶ್ಲಾಘಿಸಿದರು. ಆರೋಗ್ಯಾಧಿಕಾರಿ ಪದ್ಮ, ರುಕ್ಮಣಿ, ಜಯಮ್ಮಣಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

25 ಪ್ರದೇಶಗಳು ಕಂಟೈನ್ಮೆಂಟ್‌ ಝೋನ್‌: ಮೈಸೂರು ಜಿಲ್ಲೆಯಲ್ಲಿ ಈವರೆಗೆ 40 ಬಡಾವರಣೆ ಮತ್ತು ಗ್ರಾಮಗಳನ್ನು ಕಂಟೈನ್ಮೆಂಟ್‌ ಝೋನ್‌ ವ್ಯಾಪ್ತಿಗೆ ಸೇರಿಸಲಾಗಿದ್ದು, ಇದರಲ್ಲಿ 1,277 ಮನೆಗಳಿದ್ದು, 41,204 ಮಂದಿ ಕಂಟೈನ್ಮೆಂಟ್‌ಗೆ ಒಳಪಟ್ಟಿದ್ದಾರೆ. ಮೈಸೂರು ನಗರದಲ್ಲಿ 12 ಬಡಾವಣೆಗಳನ್ನು ಕಂಟೈನ್ಮೆಂಟ್‌ ಎಂದು ಗುರುತಿಸಲಾಗಿದ್ದು, ಈ 12 ಬಡಾವಣೆಗಳಲ್ಲಿ 2248 ಮನೆಗಳಿದ್ದು, 9,062 ಜನರಿದ್ದಾರೆ. ಮೈಸೂರು ತಾಲೂಕಿ ನ 1 ಗ್ರಾಮ ಮತ್ತು ತಿ.ನರಸೀಪುರ ತಾಲೂಕಿ ನಲ್ಲಿ 1 ಗ್ರಾಮವನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಗುರುತಿಸಲಾಗಿದೆ. ನಂಜನಗೂಡು ತಾಲೂಕಿನಲ್ಲಿ ಪಟ್ಟಣ ಮತ್ತು ಗ್ರಾಮಾಂತರದಲ್ಲಿ 25 ಪ್ರದೇಶಗಳನ್ನು ಕಂಟೈನ್ಮೆಂಟ್‌ ಝೋನ್‌ ಮಾಡಿದ್ದು, ಒಟ್ಟು 9,453 ಮನೆಗಳು ಒಳಪಟ್ಟಿವೆ. ಇಲ್ಲಿ 28227 ಜನರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next