Advertisement

ನೋಟು ಅಪಮೌಲ್ಯ ಕುರಿತು ಮೋದಿ ವಿಚಾರಣೆ ಇಲ್ಲ: ಪಿಎಸಿ

09:29 AM Jan 14, 2017 | Team Udayavani |

ಹೊಸದಿಲ್ಲಿ: ನೋಟು ಅಪಮೌಲ್ಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ, ಕಾಂಗ್ರೆಸ್‌ ಸಂಸದ ಕೆ.ವಿ. ಥಾಮಸ್‌ ನೀಡಿದ ಹೇಳಿಕೆಯನ್ನು ಸಮಿತಿಯೇ ಖುದ್ದಾಗಿ ತಿರಸ್ಕರಿಸಿದೆ.

Advertisement

“ನಿಯಮಗಳ ಅನುಸಾರ ಪ್ರಧಾನಿ ಅಥವಾ ಕೇಂದ್ರ ಮಂತ್ರಿಗಳನ್ನು ಲೆಕ್ಕಪತ್ರ ಸಮಿತಿ ವಿಚಾರಣೆಗೆ ಕರೆಸಲಾಗದು. ಅವರ ಪರ ವಾದ ಮಾಡಲು ಅಧಿಕಾರಿಗಳು ಹಾಜರಾಗ ಬಹುದು. ಅದನ್ನು ಬಿಟ್ಟು, ಪ್ರಧಾನಿಯನ್ನೇ ವಿಚಾರಣೆಗೆ ಕರೆಸಲಾಗುವುದು ಎಂದು ಹೇಗೆ ಹೇಳಿಕೆ ನೀಡಿದಿರಿ? ನಿಮ್ಮ ಹೇಳಿಕೆ ಅನೈತಿಕ ವಾದುದು’ ಎಂದು ಪಿಎಸಿ ಸಭೆಯಲ್ಲಿ ಬಿಜೆಪಿ ಸದಸ್ಯರು ಥಾಮಸ್‌ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ಹೇಳಿವೆ.

ಇದಕ್ಕೆ ಉತ್ತರಿಸಲು ತಡ ಬಡಾಯಿಸಿದ ಥಾಮಸ್‌, “ಸದಸ್ಯರೆಲ್ಲ ಸಹಮತ ವ್ಯಕ್ತ ಪಡಿಸಿದರೆ ಕರೆಸಬಹುದು ಎಂದಿದ್ದೆ’ ಎಂದು ಸ್ಪಷ್ಟೀಕರಣ ನೀಡಿದರು. ಆದರೆ ನಿಯ ಮಾನುಸಾರ ಹೀಗೆ ಕರೆಸಲು ಆಗದು ಎಂದು ಹೇಳಿದ ಸಭೆಯು, ಖುದ್ದು ಅಧ್ಯಕ್ಷ 
ಥಾಮಸ್‌ ಇರಾದೆಯನ್ನು ತಿರ ಸ್ಕರಿಸಿತು. ಬಳಿಕ ಈ ಸಂಬಂಧ ಬಹಿರಂಗ ಸ್ಪಷ್ಟನೆಯನ್ನೂ ಅದು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next