Advertisement

ವೈದಿಕ ಪರಂಪರೆ ತೊಡೆದು ಹಾಕಲು ವೈಚಾರಿಕ ಕ್ರಾಂತಿ ನಾಂದಿ

11:01 AM Jan 29, 2018 | Team Udayavani |

ಕಲಬುರಗಿ: ವೈದಿಕ ಪರಂಪರೆ ತೊಡೆದು ಹಾಕಲು ಧಾರ್ಮಿಕ ವೈಚಾರಿಕ ಕ್ರಾಂತಿ ನಾಂದಿ ಹಾಡಿತ್ತಲ್ಲದೇ ವಿಶ್ವಗುರು ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸುವ ಮೂಲಕ ವೈಜ್ಞಾನಿಕವಾಗಿರುವ ಶ್ರೇಷ್ಠ ಧರ್ಮವನ್ನು ಈ ಸಮಾಜಕ್ಕೆ ನೀಡಿದರು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ರಜಿಸ್ಟಾರ್‌ ಡಾ| ಮಲ್ಲಿಕಾರ್ಜುನ ಪಾಟೀಲ ಹೇಳಿದರು.

Advertisement

ಮಹಾದಾಸೋಹಿ ಶರಣಬಸವೇಶ್ವರರು ಚಿರಂಜೀವಿ ಪೂಜ್ಯ ದೊಡ್ಡಪ್ಪ ರೂಪದಲ್ಲಿ ಮತ್ತೇ ಭೂಮಿಗೆ ಬಂದಿರುವ ನಿಮಿತ್ತ ರವಿವಾರ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ವತಿಯಿಂದ ಆಯೋಜಿಸಲಾಗಿದ್ದ ಭಾರತೀಯ ಇಂಗ್ಲಿಷ್‌ ಸಾಹಿತ್ಯದಲ್ಲಿ ಆಧ್ಯಾತ್ಮದ ಪ್ರತಿಧ್ವನಿ ಮತ್ತು ಅನುಭಾವ ಕುರಿತ ರಾಷ್ಟ್ರೀಯ ಅಧಿವೇಶನದಲ್ಲಿ ಮುಖ್ಯ ಅತಿಥಿಗಳಾಗಿ ದಿಕ್ಸೂಚಿ ಭಾಷಣ ಮಾಡಿದರು. 

ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದರು. ಬಳಿಕ ದೇಶದ ವಿವಿಧ ಭಾಗಗಳಲ್ಲಿ ನಡೆದ ಭಕ್ತಿ ಚಳವಳಿಯ ಸಂತ ಶ್ರೇಷ್ಠರು ಅಪಾರ ಕೊಡುಗೆ ನೀಡಿದರು. ದಾಸ ಸಾಹಿತ್ಯ ಜನರನ್ನು ಭಕ್ತಿಪಥದತ್ತ ಕರೆದುಕೊಂಡು ಹೋಗಲು ನೆರವಾಯಿತು.

ಬಸವಾದಿ ಶರಣ ವಚನ ಸಾಹಿತ್ಯ, ಭಕ್ತಿ ಚಳವಳಿ, ದಾಸ ಸಾಹಿತ್ಯ ಮೊದಲಾದವುಗಳಿಂದ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಧಾರ್ಮಿಕ ಪರಂಪರೆ ಹೊಂದಿರುವ ಭಾರತೀಯರ ಮೇಲೆ ಅನ್ಯರ ದಾಳಿ ಪ್ರಭಾವದಿಂದ ಹಾಗೂ ನಮ್ಮಲ್ಲಿನ
ಕೆಲವರ ಸ್ವಾರ್ಥ ಹಿತಾಸಕ್ತಿಯಿಂದ ತಿರುಚಿದ್ದರಿಂದ ಶ್ರೇಷ್ಠ ಪರಂಪರೆ ಮಸುಕಾಗಿಸಿದೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೇ ಶ್ರೇಷ್ಠ ಆಧ್ಯಾತ್ಮಿಕ ಅನುಭಾವ ನಮ್ಮ ನೆಲದಲ್ಲಿದೆ. ಆದರೆ, ವಿದೇಶಿಗರ ವಿಚಾರಧಾರೆಗಳು, ಸಾಗರದಾಚೆಗಿನ ಸಂಸ್ಕೃತಿ ನಮ್ಮ ಇಂಗ್ಲೀಷ ಸ ಸಾಹಿತ್ಯದ ಮೇಲೆ ಪ್ರಭಾವ ಬೀರಿದ್ದರಿಂದ ಆಧ್ಯಾತ್ಮದ ಬದಲಿಗೆ ಹೊಸ ಮಾರ್ಗದಲ್ಲಿ ಹೋಯಿತು ಎಂದು ಹೇಳಿದರು. 

ವಿಲಿಯಂ ಶೇಕಸ್‌ಪಿಯರ್‌ ಸಾಹಿತ್ಯಕ್ಕಿಂತಲೂ, ರವೀಂದ್ರನಾಥ ಟ್ಯಾಗೋರರ ಸಾಹಿತ್ಯ ಶ್ರೇಷ್ಠವಾಗಿದೆ. ಅಂತಹ ಅನೇಕ ಧಾರ್ಮಿಕತೆ ಮೆರೆದವರು ನಮ್ಮಲ್ಲಿದ್ದಾರೆ. ಮರಳಿ ಆಧ್ಯಾತ್ಮ ಅನುಭಾವ, ಭಕ್ತಿಯ ಕಡೆಗೆ ಕರೆದುಕೊಂಡು
ಬರುವ ಕಾಯಕವನ್ನು ಎಲ್ಲರು ಮಾಡಿಕೊಂಡು ಹೋಗಲು ಯುವಪೀಳಿಗೆ ಸಜ್ಜಾಗಬೇಕು ಎಂದು ಹೇಳಿದರು. 

Advertisement

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ರಾಷ್ಟ್ರೀಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಿಯುಕೆ ರಜಿಸ್ಟಾರ್‌ ಡಾ| ಚಂದ್ರಕಾಂತ ಯಾತನೂರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಜನರ ಮನೋಭಾವನೆ ಬದಲಾದ ಪರಿಣಾಮ ಆಧ್ಯಾತ್ಮಿಕ ಮೌಲ್ಯಗಳು ಕುಸಿತವಾಗುತ್ತಿವೆ. ಧರ್ಮಗಳು ಒಳ್ಳೆಯದನ್ನೇ ಕಲಿಸಿವೆ. ಪ್ರಗತಿಪರ ವಿಚಾರಧಾರೆಗಳು, ಚಿಂತನೆಗಳ ಪ್ರೇರಣೆಯಾಗಿಸಿ ನಮ್ಮನ್ನು ಹೊಸ ದಿಕ್ಕಿನಲ್ಲಿ ಕರೆದುಕೊಂಡು ಹೋಗಿವೆ. ಅವನ್ನು ಪಾಲಿಸಿ ಆಧ್ಯಾತ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ| ವಿ.ಡಿ. ಮೈತ್ರಿ, ಸಂಯೋಜಕಿ ಸುನಂದ ವಾಂಜರಖೇಡೆ,
ಇಂಗ್ಲೀಷ ವಿಭಾಗದ ಮುಖ್ಯಸ್ಥ ಮಹೇಶಕುಮಾರ ಹೆಬ್ಟಾಳೆ ಇದ್ದರು. ಪ್ರಾಚಾರ್ಯರಾದ ಡಾ| ಎಸ್‌.ಜಿ. ಡೊಳ್ಳೆಗೌಡರ ಅಧ್ಯಕ್ಷತೆ ವಹಿಸಿದ್ದರು. 

ವಿದ್ಯಾರ್ಥಿಗಳಾದ ವಿನಯ ಮತ್ತು ಮುಕ್ತಾಂಬಿಕಾ ನಿರೂಪಿಸಿದರು. ಸುಷ್ಮಾ,ಗೀತಾ, ಮಂಜರಿ ಅತಿಥಿಗಳ ಪರಿಚಯಿಸಿದರು. ಆಶೀಶ್‌ಕುಮಾರ ಸ್ವಾಗತಿಸಿದರು. ಪ್ರಾಚಾರ್ಯರಾದ ಶಿವಶಂಕರ ಚಟ್ಟಿ, ನೀಲಾಂಬಿಕಾ ಪೊಲೀಸ್‌ಪಾಟೀಲ, ಪ್ರಾಧ್ಯಾಪಕರಾದ ಎ.ಜಿ. ಹಿರೇಮಠ, ಅಂಗಡಿ, ಭಾಗ್ಯಮ್ಮ, ಮಹಾಂತೇಶ ಹೂಗಾರ ಸೇರಿದಂತೆ
ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಅರ್ಥಪೂರ್ಣ ಕಾರ್ಯಕ್ರಮ
ಕಳೆದ ನ. 1ರಂದು ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನಕ್ಕೆ ಚಿರಂಜೀವಿ ಪೂಜ್ಯ ದೊಡ್ಡಪ್ಪ ಸ್ವರೂಪದಲ್ಲಿ ಮತ್ತೇ ಭೂಮಿಗೆ ಅವತರಿಸಿ ಬಂದಿದ್ದರಿಂದ ರಾಷ್ಟ್ರೀಯ ಅಧಿವೇಶನವನ್ನು ಅವರಿಗೆ ಅರ್ಪಣೆ ಮಾಡಲಾಗುವುದು
ಎಂದು ಪ್ರಾಚಾರ್ಯರಾದ ಡಾ| ಎಸ್‌.ಜಿ. ಡೊಳ್ಳೆಗೌಡರ ಹೇಳಿದರು. 

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಶರಣಬಸವೇಶ್ವರರು ಜನರಿಗೆ ಭಕ್ತಿಯ ಅನುಭಾವ ನೀಡಿದ್ದಾರೆ, ಪೂಜ್ಯ ಡಾ| ಶರಣಬಸವಪ್ಪ ಅಪ್ಪಾಜಿ ಅವರು ಹಲವು ಕೃತಿಗಳ ರಚಿಸುವ ಮೂಲಕ ಜನರಿಗೆ ಭಕ್ತಿಯ ರಸದೌತಣ ನೀಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next