Advertisement
ತಾಲೂಕಿನ ನವಲಿ, ಯತ್ನಟ್ಟಿ, ಬುನ್ನಟ್ಟಿ, ಕರಡೋಣಿ ಗ್ರಾಮದ ಹಳ್ಳ ಮತ್ತು ಖಾಸಗಿ ಜಮೀನಿನಲ್ಲಿ ದೊರೆಯುವ ಮರುಳನ್ನು ಕನಕಗಿರಿ, ಗಂಗಾವತಿ, ರಾಯಚೂರು, ಕುಷ್ಟಗಿ, ತಾವರಗೇರಾ, ಸಿಂಧನೂರು ಪಟ್ಟಣ ಸೇರಿದಂತೆ ವಿವಿಧ ನಗರಗಳಿಗೆ ಅಕ್ರಮವಾಗಿ ಮರಳನ್ನು ಸಾಗಿಸಲಾಗುತ್ತಿದೆ. ರಾತ್ರಿ ವೇಳೆ ಮರುಳನ್ನು ಯಾರ ಭಯವಿಲ್ಲದೇ ಸಾಗಿಸುತ್ತಿದ್ದು, ವಾಹನ ಶಬ್ಧದಿಂದ ಗ್ರಾಮಸ್ಥರು ನಿದ್ದೆಯನ್ನೇ ಮಾಡುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಸಂಬಂಧಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
Related Articles
Advertisement
ಅಕ್ರಮ ತಡೆಗೆ ಮುಂದಾಗದ ಸಮಿತಿ: ಅಕ್ರಮವಾಗಿ ಮರುಳು ಸಾಗಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು 18 ಇಲಾಖೆ ಅಧಿಕಾರಿಗಳು ಒಳಗೊಂಡಂತಹ ಒಂದು ಸಮಿತಿ ರಚಿಸಲಾಗಿದೆ. ಆದರೆ ಅಕ್ರಮ ಮರುಳು ಸಾಗಾಣಿಕೆಯನ್ನು ತಡೆಗಟ್ಟಬೇಕಾದ ಸಮಿತಿಯ ಸದಸ್ಯರ ಸಮನ್ವಯ ಕೊರತೆಯಿಂದ ನಿರಾತಂಕವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಒಟ್ಟಾರೆ ಅಧಿಕಾರಿಗಳ ನಿರ್ಲಕ್ಷ ್ಯದಿಂದ ಸರ್ಕಾರ ಬೊಕ್ಕಸಕ್ಕೆ ಸೇರಬೇಕಾದ ಲಕ್ಷಾಂತರ ರೂ. ದಂಧೆಕೋರರ ಪಾಲಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.
ಅಕ್ರಮ ಮರುಳು ತಡೆಯಲು ಸಮಿತಿ ರಚಿಸಲಾಗಿದೆ. ಪ್ರತಿದಿನವೂ ನಿಗಾವಹಿಸಿ ಅಕ್ರಮ ಮರುಳು ಸಾಗಾಟ ತಡೆಯುವಂತೆ ಸೂಚಿಸಲಾಗಿದೆ.
•ರವಿ ಅಂಗಡಿ, ತಹಶೀಲ್ದಾರ್
ಅಕ್ರಮ ಮರುಳು ಸಾಗಾಟ ಮಾಡುವ ವಾಹನಗಳು ರಾತ್ರಿ ವೇಳೆ ಅವ್ಯಾಹತವಾಗಿ ಸಂಚರಿಸುತ್ತಿದ್ದು, ರಸ್ತೆ ಪಕ್ಕದ ಮನೆಯಲ್ಲಿ ವಾಸಿಸುವವರಿಗೆ ನಿದ್ದೆ ಬರುತ್ತಿಲ್ಲ. ಈ ಕುರಿತು ಅಧಿಕಾರಿಗಳಿಗೆ ಹಲವಾರು ಭಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
•ದೊಡ್ಡ ಬಸವ, ಹಿರೆಖೇಡ ಗ್ರಾಮಸ್ಥ
ಶರಣಪ್ಪ ಗೋಡಿನಾಳ