Advertisement

ದೊಡ್ಮನೆ ಕ್ಯಾಲೆಂಡರ್‌ ಬಂತು

11:59 AM Jan 26, 2018 | |

ಕಳೆದ ಎಂಟು ವರ್ಷಗಳಿಂದ, ಪ್ರತಿ ವರ್ಷವೂ ಅಖೀಲ ಕರ್ನಾಟಕ ಡಾ ಶಿವರಾಜಕುಮಾರ್‌ ಸೇನಾ ಸಮಿತಿಯು ಕ್ಯಾಲೆಂಡರ್‌ ಹೊರತರುತ್ತಿದೆ. ಈ ವರ್ಷವೂ ಆ ಸಂಪ್ರದಾಯ ಮುಂದುವರೆದಿದ್ದು, ಇಂದು ಕ್ಯಾಲೆಂಡರ್‌ ಬಿಡುಗಡೆಯಾಗಲಿದೆ.

Advertisement

ಈ ವರ್ಷದ ಕ್ಯಾಲೆಂಡರ್‌ನಲ್ಲಿ ಡಾ. ರಾಜಕುಮಾರ್‌, ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌ ಮತ್ತು ಪುನೀತ್‌ ರಾಜಕುಮಾರ್‌ ಅವರ ಅಪರೂಪದ ಫೋಟೋಗಳಿವೆ. ಬರೀ ಸಿನಿಮಾದಷ್ಟೇ ಅಲ್ಲ, ರಿಯಲ್‌ ಲೈಫ್ನ ಹಲವು ಅಪರೂಪದ ಫೋಟೋಗಳೂ ಈ ಕ್ಯಾಲೆಂಡರ್‌ನಲ್ಲಿ ನೋಡಬಹುದು.

ಪ್ರಮುಖವಾಗಿ ಶಿವರಾಜಕುಮಾರ್‌ ಅವರ ಮದುವೆಯ ಫೋಟೋ ಜೊತೆಗೆ ಅಮಿತಾಭ್‌ ಬಚ್ಚನ್‌ ಅವರ ಜೊತೆಗೆ ಶಿವರಾಜಕುಮಾರ್‌ ಮತ್ತು ರಾಘವೇಂದ್ರ ರಾಜಕುಮಾರ್‌ ಅವರುಗಳು ಇರುವ ಫೋಟೋಗಳನ್ನು ಕ್ಯಾಲೆಂಡರ್‌ನಲ್ಲಿ ನೋಡಬಹುದು.

ಅಖೀಲ ಕರ್ನಾಟಕ ಡಾ ಶಿವರಾಜಕುಮಾರ್‌ ಸೇನಾ ಸಮಿತಿಯು ಸುಮಾರು ಎರಡು ಸಾವಿರ ಕ್ಯಾಲೆಂಡರ್‌ಗಳನ್ನು ಮುದ್ರಿಸಿದ್ದು, ಈ ಕ್ಯಾಲೆಂಡರ್‌ಗಳು ಮಾರಾಟಕ್ಕಿಲ್ಲ ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next