Advertisement

ಬೆಂಗಳೂರಿನಲ್ಲಿ ಹಕ್ಕಿಜ್ವರ ಇದ್ದದ್ದು ದೃಢ

06:35 AM Jan 06, 2018 | Team Udayavani |

ನವದೆಹಲಿ/ಬೆಂಗಳೂರು: ಕಳೆದ ವಾರವಷ್ಟೇ ಸುದ್ದಿಯಾಗಿದ್ದ ಹಕ್ಕಿಜ್ವರ ಪ್ರಕರಣವನ್ನು ಕೇಂದ್ರ ಸರ್ಕಾರವೂ
ದೃಢಪಡಿಸಿದೆ. ಬೆಂಗಳೂರಿನ ಈಶಾನ್ಯ ಭಾಗದ ದಾಸರಹಳ್ಳಿ ಪ್ರದೇಶದಲ್ಲಿ ಹಕ್ಕಿಜ್ವರದ ಸೋಂಕು ಇರುವುದು ಸತ್ಯ
ಎಂದು ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಪ್ರಾಣಿಗಳ ರೋಗಗಳ ಕುರಿತ ಕೇಂದ್ರ ಹೇಳಿದೆ.

Advertisement

ಡಿಸೆಂಬರ್‌ ಅಂತ್ಯದಲ್ಲಿ ದಾಸರಹಳ್ಳಿ ಭಾಗದ ಕೆಲವು ಪ್ರದೇಶಗಳ ಪೌಲಿó ಫಾರಂಗಳಲ್ಲಿ ಕೋಳಿಗಳು ಸತ್ತಿದ್ದು,
ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದರ ಜತೆಯಲ್ಲೇ ಬಿಬಿಎಂಪಿ ಈ ಪ್ರದೇಶದಲ್ಲಿದ್ದ ಕೋಳಿಗಳನ್ನು
ಸಾಮೂಹಿಕವಾಗಿ ಹತ್ಯೆ ಮಾಡಲು ಆದೇಶಿಸಿತ್ತು.

ಇದರ ನಡುವೆಯೇ ಕೋಳಿಗಳ ಮಾಂಸದ ಮಾದರಿಯನ್ನು ಕರ್ನಾಟಕ ಸರ್ಕಾರ ಭೋಪಾಲ್‌ ನಲ್ಲಿರುವ ರಾಷ್ಟ್ರೀಯ ಪ್ರಾಣಿಗಳ ರೋಗಗಳ ಪತ್ತೆ ಕೇಂದ್ರಕ್ಕೆ ಕಳುಹಿಸಿತ್ತು. ಇದೀಗ ಅಲ್ಲಿಂದಲೂ ಸೋಂಕು ಇದ್ದದ್ದು ಸತ್ಯ ಎಂಬ ವರದಿ ಬಂದಿದೆ. ಈ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಸರ್ಕಾರ, ಸೋಂಕು ತಗುಲಿದ್ದು ದೃಢಪಟ್ಟಿದ್ದರೂ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹೀಗಾಗಿ ಯಾರೂ ಹೆದರಬೇಕಿಲ್ಲ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next