Advertisement

ಅಭ್ಯರ್ಥಿ ಆಯ್ಕೆಯಲ್ಲಿ ಭಿನ್ನಾಭಿಪ್ರಾಯ ಸಲ್ಲದು: ಹರೀಶ್‌ ಕುಮಾರ್‌

10:45 AM Apr 12, 2018 | Karthik A |

ಮಂಗಳೂರು: ವಿಧಾನಸಭಾ ಚುನಾವಣೆಗೆ ದ.ಕ. ಜಿಲ್ಲೆಯಿಂದ ಕಾಂಗ್ರೆಸ್‌ನ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಸಲ್ಲದು. ಹೈಕಮಾಂಡ್‌ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸುವುದಷ್ಟೇ ನಮ್ಮ ಆದ್ಯತೆ ಆಗಬೇಕು ಎಂದು ಕಾಂಗ್ರೆಸ್‌ನ ದ.ಕ. ಜಿಲ್ಲಾಧ್ಯಕ್ಷ ಕೆ. ಹರೀಶ್‌ ಕುಮಾರ್‌ ಹೇಳಿದರು. ಮಂಗಳೂರಿನ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಜಿಲ್ಲಾ ಕಾಂಗ್ರೆಸ್‌ ಬ್ಲಾಕ್‌ ಸಮಿತಿ ಉಸ್ತುವಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಬೂತ್‌ ನಮ್ಮ ಹೊಣೆ ಎಂಬ ಹೆಸರಿನೊಂದಿಗೆ ಕಾಂಗ್ರೆಸ್‌ ಪಕ್ಷವನ್ನು ಬೂತ್‌ ಮಟ್ಟದಲ್ಲಿ ಬಲವರ್ದನೆಗೂಳ್ಳಲು ಪಕ್ಷದ ಹೈಕಮಾಂಡ್‌ನ‌ ಸೂಚನೆಯೊಂದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಆಯಾಯಾ ಬ್ಲಾಕ್‌ ಸಮಿತಿಯ ಉಸ್ತುವಾರಿಗಳ ಕರೆದು ಮಾಹಿತಿ ನೀಡಿದರು.

Advertisement

ಪಕ್ಷದಲ್ಲಿ ನೇಮಕ ಮಾಡಿದ ಉಸ್ತುವಾರಿಗಳು ಮೊದಲು ತಮ್ಮ ಕ್ಷೇತ್ರದ ಬೂತ್‌ ಮಟ್ಟದಲ್ಲಿ ಕೆಲಸಗಳನ್ನು ವಹಿಸಿ ಪಕ್ಷದ ಬಲವರ್ಧನೆಗೆ ಕೆಲಸ ಮಾಡಬೇಕು. ಈ ಮೂಲಕ  ಕಾಂಗ್ರೆಸ್‌ ಪಕ್ಷದ ಗೆಲುವಿಗೆ  ಶ್ರಮಿಸಬೇಕು. ಪಕ್ಷದ ಕಾರ್ಯಕರ್ತರು ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿ ಕೊಡದೆ ಕಾಂಗ್ರೆಸ್‌ ಸರಕಾರ ಹಾಗೂ ನಮ್ಮ ಶಾಸಕರು ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಬೂತ್‌ ಮಟ್ಟದಲ್ಲಿ ಮನೆಮನೆಗೆ ತಲುಪಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ಅವರನ್ನು ಶಾಸಕರನಾಗಿ ಆಯ್ಕೆಗೊಳಿಸುವ ಜವಾಬ್ದಾರಿ ಬ್ಲಾಕ್‌ ಮಟ್ಟದ ಉಸ್ತುವಾರಿಗಳದ್ದಾಗಿದೆ ಎಂದರು. ಕೆಪಿಸಿಸಿ ಸದಸ್ಯರಾದ ಆರ್‌.ಕೆ. ಪೃಥ್ವೀರಾಜ್‌, ವಿಶ್ವಾಸ್‌ ಕುಮಾರ್‌ ದಾಸ್‌, ಸದಾಶಿವ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next