Advertisement
ಇದು ದಿಲ್ಲಿ ಜವಾಹರಲಾಲ್ ನೆಹರೂ ವಿ.ವಿ.ಯ ಕನ್ನಡ ಪೀಠದ ಪ್ರಾಧ್ಯಾಪಕ, ಜನಪದ ವಿದ್ವಾಂಸ ಡಾ| ಪುರುಷೋತ್ತಮ ಬಿಳಿಮಲೆಯವರ ಅಭಿಮತ.
ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಏರ್ಪಡಿ ಸಿದ ಸಮಾರಂಭದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನೀಡಿದ 40,000ರೂ. ಮೊತ್ತದ ತಲ್ಲೂರು ಕನಕಾ- ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ನಾನು ಯಕ್ಷಗಾನ ಕಲಾವಿದನಾಗಲು ಯಕ್ಷಗಾನವನ್ನು ಕಲಿತದ್ದಲ್ಲ. ಯಕ್ಷಗಾನದ ಕುರಿತು ಮಾತನಾಡಲು ತಿಳಿದಿರಬೇಕು ಎಂಬ ಕಾರಣಕ್ಕೆ, ಕನ್ನಡೇತರರಿಗೆ ಕಲೆ ಕುರಿತು ತಿಳಿವಳಿಕೆ ಮೂಡಿಸಲು ಕಲಿತೆ ಎಂದರು. 1915ರಲ್ಲಿ ಸುಪ್ತಂಕರ್ ಅವರು ಪುಣೆಯಲ್ಲಿ ವ್ಯಾಸರ ಮಹಾಭಾರತದ ವಿವಿಧ ಪ್ರದೇಶಗಳ 60 ಪಠ್ಯಗಳನ್ನು ಸಂಗ್ರಹಿಸಿ ಹೊರತಂದಾಗ “ಇದು 61ನೆಯದು’ ಎಂದು ಹೇಳಿದರು. ಬೇರೆಬೇರೆ ಪ್ರದೇಶಗಳಲ್ಲಿ ಮಹಾಭಾರತ, ರಾಮಾಯಣದ ಕಥೆಗಳು ವಿಭಿನ್ನವಾಗಿರುವುದಕ್ಕೆ ಆಯಾ ಸ್ಥಳೀಯ ಕಲೆಗಳ ಪಾತ್ರ ಮುಖ್ಯವಾದುದು. ಹೀಗೆ ನೂರಾರು ಪಠ್ಯಗಳನ್ನು ಕಟ್ಟಿರುವುದು ಸಮುದಾಯ. ಇಂತಹ ಕಥೆಯ ಪುನಃಸೃಷ್ಟಿಯಲ್ಲಿ ಯಕ್ಷಗಾನದ ಪಾತ್ರ ಮಹತ್ವದ್ದು ಎಂದು ಹೇಳಿದರು.
Related Articles
ಅಭಿನಂದನಾ ಭಾಷಣ ಮಾಡಿದ ವಿದ್ವಾಂಸ ಡಾ| ತಾಳ್ತಜೆ ವಸಂತ ಕುಮಾರ್ ಅವರು, ಬನಾರಸ್ ವಿ.ವಿ., ಕಾಶೀ ವಿದ್ಯಾಪೀಠ, ಗುಜರಾತ್‌ನ ಗಾಂಧಿ ವಿದ್ಯಾಪೀಠಗಳಲ್ಲಿ ಇದ್ದ ಕನ್ನಡ ಪೀಠ ಈಗ ಇಲ್ಲವಾಗಿದೆ. ಕೆಲವೇ ಕೆಲವು ಪ್ರತಿಷ್ಠಿತ ವಿ.ವಿ.ಗಳಲ್ಲಿ ಜವಾಹರಲಾಲ್ ನೆಹರೂ ವಿ.ವಿ. ಕೂಡ ಒಂದು. ಪುರುಷೋತ್ತಮ ಬಿಳಿಮಲೆಯವರಿಂದ ಇದು ಬೆಳಗಲಿ ಎಂದು ಹಾರೈಸಿದರು.
Advertisement
ಸಂಸ್ಕೃತಿ ಚಿಂತಕ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಶೆಟ್ಟಿ, ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ. ಭಟ್,ಮಟ್ಟಿ ಗಂಗಾಧರ ರಾವ್ ಉಪಸ್ಥಿತ ರಿದ್ದರು. ಕಲಾರಂಗದ ಅಧ್ಯಕ್ಷ ಗಣೇಶ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದರು.
ಹಿಂದಿ ಯಕ್ಷಗಾನ ಪುಸ್ತಕ ಈ ಪ್ರಶಸ್ತಿ ಮೊತ್ತವನ್ನು ಜವಾಧಿಹರಲಾಲ್ ವಿ.ವಿ. ಕನ್ನಡ ಪೀಠದಿಂದ ಹಿಂದಿಯಲ್ಲಿ ಯಕ್ಷಗಾನದ ಕುರಿತು ತಯಾರಿಸುವ ಗ್ರಂಥಕ್ಕೆ ವಿನಿಯೋಗಿಸುವೆ. ಇಂಗ್ಲಿಷ್‌ನಲ್ಲಿ ಹಿಂದೆ ಡಾ| ಶಿವರಾಮ ಕಾರಂತ, ಮಾರ್ತಾ ಆಸ್ಟನ್ ಪುಸ್ತಕ ರಚಿಸಿದ್ದರು. ಹಿಂದಿಯಲ್ಲಿಲ್ಲ. ಅಪರಿಚಿತ- ಅಲ್ಪಸಂಖ್ಯಾಕ- ಬಹುಸಂಖ್ಯಾಕ…
ಹುಟ್ಟೂರು ಪಂಜದಲ್ಲಿ ನಾನು ಅಪರಿಚಿತ. 8,000 ವಿದ್ಯಾರ್ಥಿಗಳ ವಿ.ವಿ.ಯಲ್ಲಿ 1,800 ಭಾಷಾ ಅಧ್ಯಯನ ವಿದ್ಯಾರ್ಥಿಗಳಲ್ಲಿ ನಾನೊಬ್ಬನೇ ಕನ್ನಡ ಮಾತನಾಡುವವ. ಹೀಗಾಗಿ ದಿಲ್ಲಿಯಿಂದ ವಿಮಾನವೇರುವಾಗ ನಾನು ಅಲ್ಪಸಂಖ್ಯಾಕ, ಮಂಗಳೂರಿನಲ್ಲಿ ಇಳಿಯುವಾಗ ಬಹುಸಂಖ್ಯಾಕ. ಸಾಹಿತ್ಯ, ಕಲೆ ಓದಿದ ನನಗೆ ತೇಲುವ ದ್ವೀಪದಲ್ಲಿರುವ ಅನುಭವವಾಗುತ್ತದೆ. ಬೇರೆ ಕ್ಷೇತ್ರದವರಿಗೆ ಹೀಗಾಗುವುದಿಲ್ಲ.
-ಡಾ| ಪುರುಷೋತ್ತಮ ಬಿಳಿಮಲೆ ಹೈಸ್ಕೂಲ್ ಮೇಸ್ಟ್ರಾಗಬಹುದಿತ್ತು!
ಮಂಗಳೂರು ವಿ.ವಿ.ಯಿಂದ ಹಂಪಿ ವಿ.ವಿ.ಗೆ ಹೋದಾಗ ಅಲ್ಲಿ ನೆರೆ ಬಂತು. ಇಂತಹ ಸಂದರ್ಭಗಳಲ್ಲಿ ಪುರುಷೋತ್ತಮ ಬಿಳಿಮಲೆಯವರು ಬಹಳ ಕಷ್ಟ ಪಟ್ಟರು. ಆದರೆ ಅನಂತರ ಮಾನವ ಸಹಜ ಸಮಸ್ಯೆ ಇದಿರಾಯಿತು. ಆಗೊಂದು ಬಾರಿ ನನಗೆ ಬರೆದ ಪತ್ರದಲ್ಲಿ “ಹೈಸ್ಕೂಲ್‌ನ ಮಾಸ್ತರಿಕೆ ಆದರೂ ಆದೀತು’ ಎಂದು ಬರೆದರು. ಈ ಮಾತು ಆಗಿನ ಕಹಿ ಅನುಭವವನ್ನು ಸಾರುತ್ತದೆ.
– ತಾಳ್ತಜೆ ವಸಂತಕುಮಾರ್, ಕನ್ನಡ ವಿದ್ವಾಂಸರು