Advertisement
ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರ ಬಿಟ್ಟು ಕೊಟ್ಟ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ರಾಜ್ಯ ಉಪಾಧ್ಯಕ್ಷನಾಗಿ ರಾಜ್ಯ ಪ್ರವಾಸ ಮಾಡುವುದು ನನ್ನ ಮೊದಲ ಕರ್ತವ್ಯ. ಹಿಂದಿನಿಂದಲೂ ಅದನ್ನು ಮಾಡಿದ್ದೇನೆ.ಮುಂದೆಯೂ ಮಾಡುತ್ತೇನೆ. ಶಿಕಾರಿಪುರದ ಮುಖಂಡರು, ಕಾರ್ಯಕರ್ತರು ತಂದೆಯ ಮೇಲೆ ಒತ್ತಡ ಹೇರಿದ್ದರು. ತಿಂಗಳ ಹಿಂದೆ ಬೆಂಗಳೂರಿಗೂ ಬಂದು ಒತ್ತಡ ಹಾಕಿದ್ದರು.ಅದರಂತೆ ತಂದೆಯವರು ಇಂದು ತೀರ್ಮಾನ ಪ್ರಕಟಿಸಿದ್ದಾರೆ. ಇದರ ಜತೆ ಪಕ್ಷ ಏನು ತೀರ್ಮಾನ ಮಾಡುತ್ತದೆ ಅದನ್ನು ಅಧರಿಸಿ ನಾನು ನಿರ್ಧಾರ ಮಾಡುತ್ತೇನೆ. ಈ ವಿಚಾರದಲ್ಲಿ ನಾನು ತಂದೆ ಮೇಲೆ ಒತ್ತಡ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
Related Articles
Advertisement
ಅರ್ಹತೆ ಇದೆಯೋ ಅವರಿಗೆ ಅವಕಾಶ
ವಿಧಾನಸೌಧದಲ್ಲಿ ಸಚಿವ ಮುರಗೇಶ್ ನಿರಾಣಿ ಪ್ರತಿಕ್ರಿಯಿಸಿ, ‘ಐದು ದಶಕಗಳಿಂದ ಯಡಿಯೂರಪ್ಪ ಪಕ್ಷ ಕಟ್ಟಿದ್ದಾರೆ.ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಸ್ಟ್ರಾಂಗ್ ಮಾಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ.ಯಡಿಯೂರಪ್ಪ ಮುಟ್ಟದ ಗ್ರಾಮವಿಲ್ಲ.ಅವರು ವಿಧಾನಸೌಧದಲ್ಲಿ ಮಾತಾಡುತ್ತಿದ್ದರೆ ಇಡೀ ವಿಧಾನಸೌಧ ಗಡ ಗಡ ನಡುಗುತ್ತದೆ.ಇದೀಗ ಶಿಕಾರಿಪುರ ಕ್ಷೇತ್ರ ವಿಜೇಯಂದ್ರಗೆ ಬಿಟ್ಟುಕೊಟ್ಟಿದ್ದಾರೆ.ಇದರಲ್ಲಿ ತಪ್ಪಿಲ್ಲ. 2023 ಚುನಾವಣೆ ಪ್ರಚಾರಕ್ಕೆ ಯಡಿಯೂರಪ್ಪ ಅವರು ಬರುತ್ತಾರೆ. ಸ್ಪರ್ಧೆ ಮಾಡುವುದಿಲ್ಲ ಅಂದಿದ್ದಾರೆ’ ಎಂದರು.
‘ರಾಜಕಾರಣಕ್ಕೆ ಬಿಜೆಪಿಯಲ್ಲಿ ಅವಕಾಶ ಇಲ್ಲ’ ಎಂದು ಪ್ರಧಾನಿ ಮೋದಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಯಡಿಯೂರಪ್ಪ ಅವರಷ್ಟೇ ಸಂಘಟನಾ ಚಾತುರ್ಯ ವಿಜೇಯಂದ್ರಗೆ ಇದೆ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ವಿಜೇಯಂದ್ರ ಬೆಳೆದಿದ್ದಾರೆ. ಯಾರಿಗೆ ಅರ್ಹತೆ ಇದೆಯೋ ಅವರಿಗೆ ಅವಕಾಶ ಕೊಡಲಾಗುತ್ತದೆ’ ಎಂದರು.