Advertisement

ಕಡುಬೇಸಗೆಯಲ್ಲೂ ವಾರದಏಳೂ ದಿನ ನೀರು ಸರಬರಾಜು

10:51 PM May 02, 2020 | Sriram |

ಉಡುಪಿ: ನಗರದ 10 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕಡು ಬೇಸಗೆಯಲ್ಲೂ ಯಾವುದೇ ರೇಷನಿಂಗ್‌ ಇಲ್ಲದೆ ವಾರದ 7 ದಿನವೂ ನಗರಕ್ಕೆ ನೀರು ಪೂರೈಕೆ ಮಾಡುವಲ್ಲಿ ನಗರಸಭೆ ಯಶಸ್ವಿಯಾಗಿದೆ.

Advertisement

ಲಾಕ್‌ಡೌನ್‌ ಕೂಡ ನೀರು ಉಳಿತಾಯಕ್ಕೆ ಗಣನೀಯ ಕೊಡುಗೆ ನೀಡಿದ್ದು, ನಗರಕ್ಕೆ ಹೊರಗಿನಿಂದ ಬರುವವರ ಸಂಖ್ಯೆ ಸಂಪೂರ್ಣ ಸ್ಥಗಿತಗೊಂಡಿದೆ. ಹೊಟೇಲ್‌, ಅಂಗಡಿ ಮುಂಗಟ್ಟು, ಶಾಲಾ ಕಾಲೇಜುಗಳು, ಕೈಗಾರಿಕೆ ಗಳು, ಶ್ರದ್ಧಾ ಕೇಂದ್ರಗಳು, ಕಚೇರಿಗಳು, ಕಾರ್ಯ ಕ್ರಮಗಳು ಸ್ಥಗಿತಗೊಂಡಿರುವುದರಿಂದ ನೀರು ಉಳಿಕೆಯಾಗಿದೆ.

ಎರಡು ತಿಂಗಳ ಹಿಂದೆ ಮುನ್ನೆಚ್ಚರಿಕೆಯಾಗಿ 35 ವಾರ್ಡ್‌ಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಿ ದಿನಕ್ಕೆ 6 ಗಂಟೆ ಗಳ ಕಾಲ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಸುಮಾರು 1.5 ಎಂಎಲ್‌ಡಿ ನೀರು ಉಳಿಕೆಯಾಗಿದೆ. ಡ್ಯಾಂ ಸಮೀಪದ ಹೊಂಡ ಗಳಲ್ಲಿ ತುಂಬಿರುವ ನೀರನ್ನು ಅವಧಿಗೂ ಮುನ್ನವೇ ಡ್ರೆಜ್ಜಿಂಗ್‌ ಹಾಗೂ ಪಂಪ್‌ ಮಾಡಿ ಬಜೆ ಡ್ಯಾಂಗೆ ಹರಿಸಿ ನೀರು ನೀಡಲಾಗುತ್ತಿದೆ. ಮುನ್ನೆಚ್ಚರಿಕೆಯಿಂದಾಗಿ ನಗರಸಭೆ ಟ್ಯಾಂಕರ್‌ಗೆ ವ್ಯಯಿಸುತ್ತಿದ್ದ 50 ಲ.ರೂ. ಹಾಗೂ ಜನರ ಹಣ ಉಳಿತಾಯವಾಗಿದೆ.

ನೀರಿನ ಸಮಸ್ಯೆ ಇಲ್ಲ
ಉಡುಪಿ ನಗರಸಭೆ ನೀರು ಪೂರೈಸುವ ಬಜೆ ಡ್ಯಾಂನಲ್ಲಿ ಪ್ರಸ್ತುತ 3.4 ಮೀಟರ್‌ ನೀರಿನ ಸಂಗ್ರಹ ಇದ್ದು, ಕಳೆದ ವರ್ಷ ಮೇ 2ರಂದು ನೀರಿನ ಪ್ರಮಾಣ 1.6 ಮೀಟರ್‌ ಆಗಿತ್ತು. ಈ ಬಗ್ಗೆ ಹೋಲಿಕೆ ಮಾಡಿದರೆ ಕಳೆದ ವರ್ಷಗಿಂತ ಈ ವರ್ಷ ಜಾಸ್ತಿ ನೀರು ಸಂಗ್ರಹವಿದೆ. ಇದು 23 ದಿನಗಳವರೆಗೆ ಸಾಕಾಗುತ್ತದೆ. ಪ್ರಸ್ತುತ ಡ್ಯಾಂ ಸುತ್ತಮುತ್ತಲಿನ ಹೊಂಡಗಳ ನೀರು ಪಂಪಿಂಗ್‌ ಮಾಡಲಾಗುತ್ತಿದೆ. ಈ ನೀರು ಸುಮಾರು 10 ದಿನಗಳವರೆಗೆ ಸಾಕಾಗುತ್ತದೆ. ಜೂನ್‌ನಲ್ಲಿ ಮುಂಗಾರು ಪೂರ್ವ ಮಳೆ ನಿಗದಿತ ಸಮಯದೊಳಗೆ ಬಂದರೆ ಉಡುಪಿನಲ್ಲಿ ನೀರಿನ ಸಮಸ್ಯೆಯಾಗದು.

2.2 ಕೋ.ಲೀ. ನೀರು!
ನಗರದಲ್ಲಿ ಸುಮಾರು 10,500 ಮನೆಗಳು, ಮಣಿಪಾಲ ಕೈಗಾರಿಕಾ ವಲಯದಲ್ಲಿ 70ರಿಂದ 80 ಕೈಗಾರಿಕಾ ಘಟಕ, 570 ಫ್ಲ್ಯಾಟ್‌ಗಳಿವೆ. ಸುಮಾರು 1,000 ವಾಣಿಜ್ಯ ಸಂಸ್ಥೆಗಳು ಇವೆ. ಸುಮಾರು 600 ಹೊಟೇಲ್‌, 40 ಲಾಡ್ಜ್ ಗಳಿವೆ. ಸರಕಾರದ ಪ್ರಕಾರ ಪ್ರತಿ ಪ್ರಜೆಗೆ ದಿನಕ್ಕೆ 135 ಲೀ. ನೀರು ಒದಗಿಸಬೇಕು. ನಗರದ ಜನಸಂಖ್ಯೆ 1.6 ಲಕ್ಷ. ಪ್ರಸ್ತುತ 1.6 ಲಕ್ಷ ಜನತೆಗೆ ಪ್ರತಿದಿನ 2.2 ಕೋಟಿ ಲೀ. ನೀರು ಪೂರೈಸಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಲಾಕ್‌ಡೌನ್‌ನಿಂದಾಗಿ ನೀರು ಉಳಿಕೆಯಾದರೂ ಬಳಕೆ ಪ್ರಮಾಣ ಕಡಿಮೆಯಾಗಿಲ್ಲ. 1.5 ಕೋಟಿ ಲೀ. ನೀರು ಸಾಕಾಗುವುದಾದರೂ 2.2 ಕೋಟಿ ಲೀ. ಖರ್ಚಾಗುತ್ತಿದೆ.

Advertisement

ನೀರಿನ ಸಮಸ್ಯೆ ಇಲ್ಲ
ಉಡುಪಿ ನಗರಸಭೆ ನೀರು ಪೂರೈಸುವ ಬಜೆ ಡ್ಯಾಂನಲ್ಲಿ ಪ್ರಸ್ತುತ 3.4 ಮೀಟರ್‌ ನೀರಿನ ಸಂಗ್ರಹ ಇದ್ದು, ಕಳೆದ ವರ್ಷ ಮೇ 2ರಂದು ನೀರಿನ ಪ್ರಮಾಣ 1.6 ಮೀಟರ್‌ ಇತ್ತು. ಈ ಬಗ್ಗೆ ಹೋಲಿಕೆ ಮಾಡಿದರೆ ಕಳೆದ ವರ್ಷಕ್ಕಿಂತ ಈ ವರ್ಷ ಜಾಸ್ತಿ ನೀರು ಸಂಗ್ರಹವಿದೆ. ಇದು 23 ದಿನಗಳವರೆಗೆ ಸಾಕಾಗುತ್ತದೆ. ಪ್ರಸ್ತುತ ಡ್ಯಾಂ ಸುತ್ತಮುತ್ತಲಿನ ಹೊಂಡಗಳ ನೀರು ಪಂಪಿಂಗ್‌ ಮಾಡಲಾಗುತ್ತಿದೆ. ಈ ನೀರು ಸುಮಾರು 10 ದಿನಗಳವರೆಗೆ ಸಾಕಾಗುತ್ತದೆ. ಜೂನ್‌ನಲ್ಲಿ ಮುಂಗಾರು ಪೂರ್ವ ಮಳೆ ನಿಗದಿತ ಸಮಯದೊಳಗೆ ಬಂದರೆ ಉಡುಪಿನಲ್ಲಿ ನೀರಿನ ಸಮಸ್ಯೆಯಾಗದು.

53 ದಿನಗಳಿಗೆ
ಸಾಕಾಗುವಷ್ಟು ನೀರು
ಬಜೆಯಲ್ಲಿ ನೀರಿನ ಸಂಗ್ರಹವು ಮುಂದಿನ 23 ದಿನ ಹಾಗೂ ಪಂಪ್‌ ಮಾಡಲಾದ ನೀರು 30 ದಿನಗಳು ಸೇರಿದಂತೆ ಒಟ್ಟಾರೆ ನಗರಕ್ಕೆ ಮುಂದಿನ 53ದಿನಗಳವರೆಗೆ ನೀರಿನ ಸಮಸ್ಯೆ ಇರುವುದಿಲ್ಲ. ಮುಳುಗು ತಜ್ಞರನ್ನು ಕರೆಸಿಕೊಂಡು ಡ್ಯಾಂನಲ್ಲಿ ನೀರು ಸೋರಿಕೆ ತಪ್ಪಿಸಲಾಗಿದೆ. ಜನವರಿಯಲ್ಲಿ ನೀರಿನ ಸಂರಕ್ಷಣೆಗೆ ಸಿದ್ಧ ಸೂತ್ರ ಅಳವಡಿಸಿರುವುದರಿಂದ ನೀರಿನ ಸಮಸ್ಯೆ ಈ ಬಾರಿ ಎದುರಾಗಿಲ್ಲ.
-ಮೋಹನ್‌ರಾಜ್‌,
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಉಡುಪಿ ನಗರಸಭೆ.

Advertisement

Udayavani is now on Telegram. Click here to join our channel and stay updated with the latest news.

Next