Advertisement

ಸರ್ಕಾರಿ ಶಾಲೆಯಲ್ಲಿ ಅರೇಬಿಕ್‌ ಬೋಧಿಸುವ ಪ್ರಸ್ತಾವನೆ ಇಲ್ಲ

08:30 AM Aug 02, 2017 | Harsha Rao |

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಅರೇಬಿಕ್‌ ಅನ್ನು ಒಂದು ಭಾಷೆಯಾಗಿ ಕಲಿಸುವ ಅಥವಾ ಬೋಧಿಸುವ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ. ರಾಜ್ಯ ಸರ್ಕಾರ ಅರೇಬಿಕ್‌ ಅನ್ನು ಒಂದು ಭಾಷೆಯಾಗಿ ಕಲಿಸಲು
ಮುಂದಾಗುತ್ತದೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ದಿನೇದಿನೆ ಹೆಚ್ಚಾಗುತ್ತಿದ್ದು, ಈ ಸಂಬಂಧ ಸಂದೇಶಗಳು
ಹರಿದಾಡುತ್ತಿದೆ. ಇದರಿಂದ ಎಚ್ಚೆತ್ತುಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟನೆ ಹೊರಡಿಸಿದೆ.

Advertisement

ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಿವೆ. ಅಲ್ಪಸಂಖ್ಯಾತ ಭಾಷೆಗಳಾದ ಉರ್ದು, ತಮಿಳು, ತೆಲುಗು ಹಾಗೂ ಮರಾಠಿಯ 5400 ಶಾಲೆಗಳಿವೆ. ಈ ಎಲ್ಲ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ
ದ್ವೀತಿಯ ಭಾಷೆಯಾಗಿಯೇ ಕಲಿಸಲಾಗುತ್ತಿದೆ. ಇಂಗ್ಲಿಷ್‌ ಭಾಷೆಯನ್ನು ಸಾಮಾನ್ಯವಾಗಿ ದ್ವಿತೀಯ ಭಾಷೆಯಾಗಿ ಕಲಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಆಯುಕ್ತೆ ಸೌಜನ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಭಾಷಾ ಶಾಲೆಯಲ್ಲಿ ಅದೇ ಭಾಷೆಯನ್ನು ಒಂದನೇ ತರಗತಿಯಿಂದ ಕಲಿಸಲಾಗುತ್ತಿದೆ. ಒಂದರಿಂದ 5ನೇ ತರಗತಿಯ ತನಕ ಪ್ರಥಮ ಮತ್ತು ದ್ವಿತೀಯ ಭಾಷೆ ಮಾತ್ರ ಇರುತ್ತದೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡವೇ ಪ್ರಥಮ ಭಾಷೆ ಹಾಗೂ ಇಂಗ್ಲಿಷ್‌ ಎರಡನೇ ಭಾಷೆಯಾಗಿರುತ್ತದೆ. 6ನೇ ತರಗತಿಯಿಂದ ತೃತೀಯ ಭಾಷೆಯ ಕಲಿಕೆ ಆರಂಭವಾಗುತ್ತದೆ. ಹಿಂದಿ, ಇಂಗ್ಲಿಷ್‌ ಹೀಗೆ ವಿವಿಧ ಭಾಷೆಯನ್ನು ಅಲ್ಲಿನ ಪ್ರಾದೇಶಿಕತೆಗೆ ತಕ್ಕಂತೆ ಕಲಿಸಲಾಗುತ್ತದೆ.
ರಾಜ್ಯದ ಸುಮಾರು 550 ವಿದ್ಯಾರ್ಥಿಗಳು ಅರೇಬಿಕ್‌ ಭಾಷೆಯನ್ನು ತೃತೀತ ಭಾಷೆಯಾಗಿ ಅಧ್ಯಯನ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಅರೇಬಿಕ್‌ ಬೋಧನೆಯ ವ್ಯಾಪ್ತಿಯನ್ನು ವಿಸ್ತರಿಸಲು ಶಿಕ್ಷಣ ಇಲಾಖೆಯಲ್ಲಿ ಯಾವುದೇ
ಪ್ರಸ್ತಾವನೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next