Advertisement
ದೈಹಿಕ ಶಿಕ್ಷಣ ಮಕ್ಕಳ ಕಲಿಕೆಗೆ ಆವಶ್ಯಕ. ಆದರೆ ಆಟದ ಮೈದಾನಗಳಿಲ್ಲದೆ ಸಾವಿರಾರು ಶಾಲೆಗಳ ಮಕ್ಕಳು ಇದರಿಂದ ವಂಚಿತರಾಗಿದ್ದಾರೆ. ಇದು ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಬಹುದೊಡ್ಡ ಅಡ್ಡಿ ಎಂದು ಶಿಕ್ಷಣ ತಜ್ಞರ ವಿಶ್ಲೇಷಣೆ. ಜಾಗವೇ ಇಲ್ಲದಿದ್ದರೆ ಆಟದ ಮೈದಾನ ಹೇಗೆ ನಿರ್ಮಿಸುವುದು ಅನ್ನುವುದು ಶಿಕ್ಷಣ ಇಲಾಖೆಯ ಅಸಹಾಯಕತೆ.
Related Articles
ಶಿಕ್ಷಣ ಸಮಗ್ರ ಆಗದು
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಅದಕ್ಕಿಂತ ಮುಖ್ಯವಾಗಿ “ಶಿಕ್ಷಣ ಹಕ್ಕು ಕಾಯ್ದೆ’ (ಆರ್‌ಟಿಇ) ಅಡಿ ಕ್ರೀಡೆ ಮತ್ತು ದೈಹಿಕ ಶಿಕ್ಷಣ ಕಡ್ಡಾಯವಾಗಿದೆ. ಆರ್‌ಟಿಇ ಕಾಯ್ದೆಯಡಿ ಶಾಲೆಗಳು ಕಡ್ಡಾಯವಾಗಿ ಒದಗಿಸಬೇಕಾದ 8 ಭೌತಿಕ ವ್ಯವಸ್ಥೆಗಳಲ್ಲಿ ಆಟದ ಮೈದಾನವೂ ಒಂದು. ಆದರೆ ಈ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ. ಶಿಕ್ಷಣ ಸಮಗ್ರವಾಗಬೇಕಾದರೆ ಮಕ್ಕಳ ಶಾರೀರಿಕ, ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಶಿಕ್ಷಣ ಬೇಕು. ಅದಕ್ಕೆ ದೈಹಿಕ ಶಿಕ್ಷಣ ಮತ್ತು ಕ್ರೀಡೆ ಮುಖ್ಯ. ಆದ್ದರಿಂದ ಆಟದ ಮೈದಾನಗಳನ್ನು ಒದಗಿಸಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ಆಟದ ಮೈದಾನಗಳನ್ನು ಕಡ್ಡಾಯವಾಗಿ ಶಾಲಾ ಮಕ್ಕಳ ಬಳಕೆಗೆ ಮೀಸಲಿಡಬೇಕು.
ಒತ್ತುವರಿಯಾಗಿರುವ ಶಾಲಾ ಆಟದ ಮೈದಾನಗಳನ್ನು ತೆರವುಗೊಳಿಸಬೇಕು ಎಂದು ಶಿಕ್ಷಣ ತಜ್ಞ ಡಾ| ವಿ.ಪಿ. ನಿರಂಜನಾರಾಧ್ಯ ಅಭಿಪ್ರಾಯಪಡುತ್ತಾರೆ.
Advertisement
ಒಳಾಂಗಣ ಕ್ರೀಡೆಗಳಿಗೆ ಆದ್ಯತೆಆಟದ ಮೈದಾನ ಇಲ್ಲದಿರುವ ಶಾಲೆಗಳಲ್ಲಿ ಒಳಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಹಂತದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹತ್ತಿರದ ತಾಲೂಕು, ಜಿಲ್ಲಾ ಕ್ರೀಡಾಂಗಣ, ನಗರಸಭೆ, ಪುರಸಭೆ ಹಾಗೂ ಪಾಲಿಕೆಗಳ ಆಟದ ಮೈದಾನಗಳನ್ನು ಬಳಸಿಕೊಳ್ಳುತ್ತಾರೆ. ಕೆಲವು ಶಾಲೆಗಳಿಗೆ ದಾನಿಗಳ ಮೂಲಕ ಜಾಗ ಪಡೆಯಲಾಗಿದೆ. ಬಹಳ ಹಿಂದೆ ಕಟ್ಟಿದ ಶಾಲೆಗಳಲ್ಲಿ ಸಮಸ್ಯೆ ಇದೆ. ಹೊಸ ಶಾಲೆಗಳ ವಿಚಾರದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಜಾಗ ಒದಗಿಸಲು ಇತರ ಇಲಾಖೆಗಳನ್ನೂ ಕೋರಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ಜಾಗ ಇದ್ದು ಆಟದ ಮೈದಾನ ಇಲ್ಲದ ನಿದರ್ಶನ ಇಲ್ಲ. ಜಾಗವೇ ಇಲ್ಲದಿರುವಾಗ ಆಟದ ಮೈದಾನ ಕೊಡುವುದು ಹೇಗೆ? ಬಹಳ ಹಿಂದೆ ಕಟ್ಟಿರುವ ಶಾಲೆಗಳಲ್ಲಿ ಅನೇಕ ಕಡೆ ಈ ಸಮಸ್ಯೆ ಇದೆ. ಅದನ್ನು ಸರಿ ದೂಗಿ ಸಲು ಪಕ್ಕದ ಶಾಲೆಗಳ ಆಟದ ಮೈದಾನ, ನಗರ ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾ.ಪಂ. ಮೈದಾನ ಗಳನ್ನು ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಬಳಸಿಕೊಳ್ಳ ಲಾಗುತ್ತಿದೆ.
– ಡಾ| ಆರ್. ವಿಶಾಲ್,
ಶಿಕ್ಷಣ ಇಲಾಖೆ ಆಯುಕ್ತರು - ರಫೀಕ್ ಅಹ್ಮದ್