Advertisement
ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪ ನ್ಯಾಸಕರನ್ನು ಸೇವೆಯಲ್ಲಿ ವಿಲೀನಗೊಳಿಸುವ ಸಂಬಂಧ ಕರ್ನಾಟಕ ನಾಗರಿಕ ಸೇವೆ ನಿಯಮದ ಅನ್ವಯ ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನ ಗೊಳಿಸುವುದು ಮತ್ತು ನಿಯಮ ಬಾಹಿರ 2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ತಡೆ ಹಿಡಿದು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಸೇವಾ ವಿಲೀನ ಸಂಬಂಧ ಈ ಪ್ರತಿಭಟನೆ ನಡೆಯುತ್ತಿದೆ.
ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುವವರಿಗೆ ಒಂದು ತರಗತಿಗೆ 1,500 ರೂ. ನೀಡಬೇಕೆಂದು ಯುಜಿಸಿ ಮಾನದಂಡವಿದೆ. ಆದರೆ ಅದು ಪಾಲನೆಯಾಗುತ್ತಿಲ್ಲ. ಸೇವೆಯನ್ನು ವಿಲೀನಗೊಳಿಸಿ ಖಾಯಮಾತಿ ಮಾಡುವ ಬಗ್ಗೆಯೂ ಸರಕಾರ ಚಿಂತಿಸುತ್ತಿಲ್ಲ. ಇದನ್ನೂ ಓದಿ:ಹಿಂದೂ ಮಹಿಳೆಯರ ಟಾರ್ಗೆಟ್ ಮಾಡುತ್ತಿದ್ದ ಜಾಲ ಬಯಲಿಗೆ
Related Articles
10 ವರ್ಷಗಳಿಗೂ ಅಧಿಕ ಅನುಭವವಿರುವ ಶಿಕ್ಷಕರಿಗೆ ಗರಿಷ್ಠ ಎಂದರೆ 11ರಿಂದ 13 ಸಾವಿರ ರೂ. ಮಾತ್ರ ವೇತನ ಸಿಗುತ್ತಿದೆ. ಪಿಎಚ್‌ಡಿ, ಎಂಎ, ಎಂಫಿಲ್ ಮಾಡಿದವರೂ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ ಹಾಗೂ ಲಾಕ್‌ಡೌನ್ ಅವಧಿಯಲ್ಲಿ ಸೂಕ್ತ ವೇತನವಿಲ್ಲದೆ ರಾಜ್ಯದಲ್ಲಿ 84 ಅತಿಥಿ ಉಪನ್ಯಾಸಕರು ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ಅತಿಥಿ ಶಿಕ್ಷಕರೊಬ್ಬರು ಸೂಕ್ತ ವೇತನ ಹಾಗೂ ಕೆಲಸವಿಲ್ಲದ ಕಾರಣ ಮಾನಸಿಕ ಖಿನ್ನತೆಯಿಂದ ಬಳಲಿ ಸಾವನ್ನಪ್ಪಿದ್ದರು.
Advertisement
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಸತøಜೆಗಳನ್ನಾಗಿ ರೂಪಿಸುವ ನಮಗೇ ಭವಿಷ್ಯವಿಲ್ಲದಂತಾಗಿದೆ. ಈ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟ ಮಾಡಿದರೂ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇತರ ರಾಜ್ಯಗಳಲ್ಲಿ ಮಾಡಿದಂತೆ ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನಗೊಳಿಸಿ ಖಾಯಮಾತಿ ಮಾಡಿದರೆ ಹಲವರಿಗೆ ಅನುಕೂಲವಾಗಲಿದೆ.– ಡಾ| ಶಾಹಿದಾ ಜಹಾನ್,
ಅಧ್ಯಕ್ಷರು, ಉಡುಪಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟ