Advertisement

ಪ್ರಗತಿ ತೋರಿಸದ ಅಧಿಕಾರಿಗಳು ಬೇಕಿಲ್ಲ

04:34 PM Aug 24, 2021 | Team Udayavani |

ಮಾಗಡಿ: ಪ್ರಗತಿ ತೋರಿಸದ ಅಧಿಕಾರಿಗಳು ನಮಗೆ ಬೇಕಿಲ್ಲ. ವರ್ಗಾವಣೆ ಮಾಡಿಸಿಕೊಂಡು ಹೋಗಲಿ ಎಂದು ಶಾಸಕ ಎ.ಮಂಜುನಾಥ್‌ ಅವರು ಸಮಾಜ ಕಲ್ಯಾಣಾಧಿಕಾರಿ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಕೋಟಿಗಟ್ಟಲೆ ಅನುದಾನ ಮಂಜೂರಾತಿ ತಂದಿದ್ದೇವೆ. ಆದರೂ, ಸಮಾಜ ಕಲ್ಯಾಣಾಧಿಕಾರಿ ಯೋಜನೆಯನ್ನು ಅನುಷ್ಠಾನಗೊಳಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಕೇವಲ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳ ಸ್ಕಾಲರ್‌ ಶಿಪ್‌ ನೀಡುವ ಪೋಸ್ಟ್ ಮ್ಯಾನ್‌ ಕೆಲಸ ಮಾಡಿಕೊಂಡಿದ್ದಾರೆ. ತಾಲೂಕಿನ ಒಂದೇ ಒಂದು ಕಾಲೋನಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿಲ್ಲ, ಕನಿಷ್ಠ ಪಕ್ಷ ಜನಸಂಖ್ಯೆ ಎಷ್ಟಿದೆ ಎಂಬುದೇ ಮಾಹಿತಿ ಇಲ್ಲ ಎಂದು ಆರೋಪಿಸಿದರು.

ಜನರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಿಲ್ಲ: ಕಾಲೋನಿಯ ಜನರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಮಕ್ಕಳ ಯೋಜನೆ ಗಳನ್ನು ಸಹ ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಕನಿಷ್ಠ ಪಕ್ಷ ಅಲ್ಲಿನ ಜನರ ಶವ ಸಂಸ್ಕಾರಕ್ಕೆ ಸ್ಮಶಾನ ಗುರುತಿಸಿ ಸರ್ವೆ ಮಾಡಿಸಿ ಪಂಚಾಯ್ತಿಗೆ ಅಭಿವೃದ್ಧಿ ಪಟ್ಟಿ ನೀಡಿಲ್ಲ ಎಂದು ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಬನ್ನಿ: ಇನ್ನು 15 ದಿನದಲ್ಲಿ ತಾಲೂಕಿನಲ್ಲಿ ಎಸ್‌ಸಿ ಮತ್ತು ಎಸ್‌ಟಿಗೆ ಸಂಬಂಧಿಸಿದಂತೆ ಸಮಗ್ರವಾದ ಮಾಹಿತಿಯೊಂದಿಗೆ ಪಟ್ಟಿ ಮಾಡಿಕೊಂಡು ಸಭೆಗೆ ಬರಬೇಕು ಎಂದು ಅಧಿಕಾರಿಗೆ ತಾಕೀತು ಮಾಡಿದ ಅವರು, ಕೋವಿಡ್‌ ಮೂರನೇ ಅಲೆ ಹರಡುತ್ತಿದ್ದು, ಆರೋಗ್ಯ ಇಲಾಖೆ ಕಾರ್ಯೋನ್ಮಕರಾಗಬೇಕಿದೆ. ಇಲ್ಲದಿದ್ದರೆ ತಾಲೂಕು ಆಡಳಿತಕ್ಕೆಕೆಟ್ಟ ಹೆಸರು ಬರುತ್ತದೆ. ಜಾಗೃತರಾಗುವಂತೆ ಆರೋಗ್ಯಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಇದನ್ನೂ ಓದಿ:ಲಿಂಗಾಯತ ಧರ್ಮ ಹೋರಾಟದಿಂದ ಕಾಂಗ್ರೆಸ್ ಸೋತಿಲ್ಲ: ಎಂ.ಬಿ.ಪಾಟೀಲ್

Advertisement

ಅಧಿಕಾರಿಗಳ ಸಮಿತಿ ರಚನೆ: ಕೆಡಿಪಿ ಸದಸ್ಯ ಗುಡೇಮಾರನಹಳ್ಳಿ ನಾಗರಾಜು ಮಾತನಾಡಿ, ಎಸ್‌ಸಿ ಮತ್ತು ಎಸ್‌ಟಿ ಕಾಲೋನಿಗಳ ಜನರ ಸಮಸ್ಯೆ ಆಲಿಸಲು ಸದಸ್ಯರನ್ನು ಒಳಗೊಂಡ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಅಧಿಕಾರಿಗಳು ಪ್ರತಿ ತಿಂಗಳು ಒಂದೊಂದು ಕಾಲೋನಿಗೆ ತೆರಳಿ ಅಲ್ಲೇ ವಾಸ್ತವ್ಯ ಹೂಡಿ, ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಬೇಕು. ಅಲ್ಲಿನ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಎಂಬುದು ಸರ್ಕಾರ ನಿಯಮವಿದೆ. ಆದರೆ, ಒಬ್ಬ ಅಧಿಕಾರಿಗಳಾಗಲಿ ಇಲ್ಲಿಯವರೆವಿಗೂ ಕಾಲೋನಿಗೆ ಭೇಟಿ ನೀಡಿ ವಾಸ್ತವ್ಯ ಹೂಡಿಲ್ಲ. ಸಮಸ್ಯೆ ಬಗೆಹರಿಸುವಂತ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ನೂರಾರು ವರ್ಷಗಳ ಹಿಂದೆಯೇ ನೀರಗಂಟಿ, ತೋಟಿ ತಳವಾರಿಗೆ ಮಂಜೂರಾತಿ ನೀಡಿರುವ ಭೂಮಿಯನ್ನು ಅವರ ಹೆಸರಿಗೆ ಖಾತೆ ಮಾಡಿಸಿಕೊಟ್ಟಿಲ್ಲ ಎಂದು ದೂರಿದರು.

ಜನರನ್ನು ಜಾಗೃತಿಗೊಳಿಸಿಲ್ಲ: ಜನ ಜಾಗೃತಿಗೊಳಿಸಲು ಲಕ್ಷಾಂತರ ರೂ.ಗಳನ್ನು ಸರ್ಕಾರ ನೀಡಿದ್ದರೂ ಅಧಿಕಾರಿಗಳು ಸಭೆ,ಸಮಾರಂಭಗಳಿಗೆ ಖರ್ಚು ಮಾಡಿ, ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡಿಲ್ಲ. ಹೀಗಾದರೆ, ಎಸ್‌ಸಿ ಮತ್ತು ಎಸ್‌ಟಿ ಸಮಾಜದಲ್ಲಿ ಸಮಾನತೆಯಿಂದ ‌ಮುಂದೆ ಬರಲು ಹೇಗೆ ಸಾಧ್ಯ? ಎಂದು ವಿವಿಧ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಶಾಸಕರ ಮಾತಿಗೂ ಕಿಮ್ಮತ್ತು ನೀಡುತ್ತಿಲ್ಲ. ಅಸಹಜ ಸಾವಿಗೆ ಬಡವರು ಸತ್ತರೆಆಸ್ಪತ್ರೆಗಳಲ್ಲಿ ಆಯಾ ಹೋಬಳಿ ಪಿಎಸ್‌ಸಿಗಲ್ಲಿ ಶವ ಪರೀಕ್ಷೆಗೆ ಅವಕಾಶವಿದ್ದರೂ,ಅಗತ್ಯ ಸೌಕರ್ಯಗಳಿಲ್ಲ ಎಂದು ಆರೋಪಿಸಿದರು.

ಸಾಲ ಮಂಜೂರಾತಿಯಲ್ಲಿ ತಾರತಮ್ಯ: ಕೆಡಿಪಿ ಸದಸ್ಯ ಟಿ.ಜಿ.ವೆಂಕಟೇಶ್‌ ಮಾತನಾಡಿ, ಡಿಸಿಸಿ ಬ್ಯಾಂಕ್‌ ಅಧಿಕಾರಿಗಳು ಮತ್ತು ಸಿಬ್ಬಂದಿ
ಸರ್ವಾಧಿಕಾರಿಗಳಾಗಿದ್ದಾರೆ. ರೈತರಿಗೆ ಬೆಳೆ ಸಾಲ ಮಂಜೂರಾತಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಒಬ್ಬರಿಗೆ ಮಾತ್ರ ಮೂರು ಲಕ್ಷ ರೂ. ನೀಡಿ, ಉಳಿದವರಿಗೆ 2 ಲಕ್ಷ ರೂ.ವರೆಗೆ ಮಾತ್ರ ಸಾಲ ಕೊಟ್ಟಿದ್ದು,ಎಲ್ಲರಿಗೂಒಂದೇ ನಿಯಮಪಾಲಿಸಬೇಕು ಎಂದು ವ್ಯವಸ್ಥಾಪಕರಿಗೆ ಸಲಹೆ ನೀಡಿದ ಅವರು, ಕೆಲವರಿಗೆ ಹೊಂದಾಣಿಕೆ ಸಾಲ ಮಂಜೂರು ಮಾಡಿಕೊಡಲಾಗುತ್ತಿರುವುದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಕೆಡಿಪಿ ಸದಸ್ಯ ದಂಡಿಗೇಪುರದ ಅಶೋಕ್‌ ಧ್ವನಿಗೂಡಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಕುರಿತು ಶಾಸಕರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಚರ್ಚಿಸಿದರು. ತಹಶೀಲ್ದಾರ್‌ ಬಿ.ಜಿ.ಶ್ರೀನಿವಾಸ್‌ ಪ್ರಸಾದ್‌, ತಾಪಂ ಇಒಟಿ.ಪ್ರದೀಪ್‌,ಕೆಡಿಪಿಸದಸ್ಯರಾದ ಗೌರಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ, ನಜೀರ್‌ ಅಹಮದ್‌, ತಾಲೂಕು ವೈದ್ಯಾಧಿಕಾರಿ ಡಾ.ಸತೀಶ್‌, ಮುಖ್ಯ ಆರೋಗ್ಯಾಧಿಕಾರಿ ಡಾ.ರಾಜೇಶ್‌ ಮತ್ತು ಶಿಕ್ಷಣ, ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು

ಸರ್ಕಾರಿಆಸ್ಪತ್ರೆಗೆ ಸರ್ಕಾರದಿಂದ ಸಕಲ ಸೌಲಭ್ಯಗಳನ್ನುಕಲ್ಪಿಸಲಾಗುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಬೇಕು. ಇತರೆ ಇಲಾಖೆ ಅಧಿಕಾರಿಗಳು ಸಹ ಮಂಜೂರಾಗುವ ಎಲ್ಲಅನುದಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ,
ಪ್ರಗತಿಯತ್ತ ತಾಲೂಕನ್ನುಕೊಂಡೊಯ್ಯಬೇಕು. ನಿರ್ಲಕ್ಷ್ಯ ಮಾಡಬಾರದು.
– ಚಿಕ್ಕಬಸವಯ್ಯ, ಜಿಲ್ಲಾ ಯೋಜನಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next