Advertisement

Sirsi; ಆಡಿದ ಮಾತಿಗೆ ತಪ್ಪುವದಿಲ್ಲ,ಕಾಂಗ್ರೆಸ್ ನುಡಿದಂತೇ ನಡೆಯುತ್ತದೆ: ಭೀಮಣ್ಣ

04:37 PM Apr 21, 2023 | Team Udayavani |

ಶಿರಸಿ: ಕಾಂಗ್ರೆಸ್ ಎಂದರೆ ಕೇವಲ ಪಕ್ಷವಲ್ಲ. ಅದು‌ ನುಡಿದಂತೆ ನಡೆಯುವ ಸರಕಾರ. ಹಿಂದೆ‌ ಅಧಿಕಾರಕ್ಕೆ ಬಂದಾಗಲೂ ನೀಡದ ಪ್ರಣಾಳಿಕೆಯ ಎಲ್ಲ ಆಶ್ವಾಸನೆ ಈಡೇರಿಸಿದ್ದೆವು ಎಂದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಹೇಳಿದರು.

Advertisement

ಶುಕ್ರವಾರ ಅವರು ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರದ ಹಲವಡೆ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಮನೆ ಮನೆಗೆ ತೆರಳಿ ಮತದಾನಕ್ಕೆ ಮನವಿ‌ ಮಾಡಿ ಮಾತನಾಡಿದರು.

ಒಂದೊಂದು ಮತಕ್ಕೂ‌ ಮಹತ್ವ ಇದೆ. ಪ್ರತೀ ಮತಗಳಿಗೂ ನೀಡುವ ವಿಶ್ವಾಸವನ್ನು ಕಾಂಗ್ರೆಸ್ ಮೂಲಕ ಉಳಿಸಿಕೊಳ್ಳುತ್ತೇವೆ ಎಂದ ಅವರು, ಊರುಗಳಿಗೆ ಸರ್ವಋತು ರಸ್ತೆ, ಹಳ್ಳ ದಾಟಲು ಸೇತುವೆ, ಬಾಂದಾರ, ಫುಟ್ ಬ್ರಿಜ್ ಸಹಿತ ಅಗತ್ಯ ಇರುವ ಸೌಲಭ್ಯ ಒದಗಿಸುತ್ತೇವೆ ಎಂದರು.

ಅಗತ್ಯ ಇರುವವರಿಗೆ, ನೈಜ ಫಲಾನುಭವಿಗಳಿಗೆ ಸರಕಾರದ ಯೋಜನೆ ತಲುಪಿಸಿ ನೆರವಾಗುತ್ತೇವೆ. ಅರಣ್ಯ ಅತಿಕ್ರಮಣ ಸಮಸ್ಯೆ ನಿವಾರಣೆ, ಫಾರಂ ನಂ 3, ಇ ಸ್ವತ್ತಿನ ತಾಂತ್ರಿಕ ಸಮಸ್ಯೆ ಶೀಘ್ರ ಈಡೇರಿಸಿ, ಆಶ್ರಯ ಮನೆಯನ್ನು ಅಗತ್ಯ ಉಳ್ಳ ಎಲ್ಲರಿಗೂ ಒದಗಿಸಿತ್ತೇವೆ ಎಂದರು.

ಪಕ್ಷದ ವರಿಷ್ಠರು ಸಹಿ ಹಾಕಿದ ಗ್ಯಾರೆಂಟಿ ಕಾರ್ಡನ ಎಲ್ಲ ಆಶ್ವಾಸನೆ ಈಡೇರಿಸುತ್ತೇವೆ. ಬೆಲೆ ಏರಿಕೆಯಿಂದ ನೊಂದ ಕಾರಣದಿಂದ ಮನೆ ಮಹಿಳೆಗೆ 2 ಸಾವಿರ ನೀಡುತ್ತೇವೆ. ಕಾಂಗ್ರೆಸ್ ಅಂದರೆ ಬೀದಿ ದೀಪ ಉರಿಸಿ ಸಾಧನೆ ತೋರಿಸುವದಿಲ್ಲ. ಪ್ರತಿ‌ ಮನೆಗೂ ವಿದ್ಯುತ್ ಸಿಗಬೇಕು ಎಂಬುದಾಗಿದೆ. ಗೃಹ ಲಕ್ಷ್ಮೀ 200 ಯುನಿಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದರು.

Advertisement

ಬೀದಿಯಲ್ಲಿ ದೀಪ ಉರಿಸಿ ಸಾಧನೆ ಅಲ್ಲ.ಎಲ್ಲ ಮನೆಗೂ ನಿರಂತರ ವಿದ್ಯುತ್ ಕೊಡಬೇಕಾಗಿದೆ. ಕಾಂಗ್ರೆಸ್ 200 ಯುನಿಟ್ ಉಚಿತ ವಿದ್ಯುತ್ ಪೂರೈಕೆಯಂಥ ಕನಸಿನ ವಾಗ್ದಾನ ಮಾಡಿದೆ. ಕಾಂಗ್ರೆಸ್ ಹಾಗೂ ಭೀಮಣ್ಣ ಆಡಿದ ಮಾತಿಗೆ ತಪ್ಪುವವರಲ್ಲ ಎಂದರು.

10 ಕೆಜಿ ಅಕ್ಕಿ ಒಬ್ಬರಿಗೆ ಉಚಿತವಾಗಿ ಕೊಡುತ್ತೇವೆ, ನಿರುದ್ಯೋಗಿ ಡಿಪ್ಲೋಮಾ ಆದವರಿಗೆ 1500, ಪದವೀಧರರಿಗೆ ಮಾಸಿಕ 3000 ರೂ. ನೀಡಲಾಗುತ್ತದೆ. ಮತದಾರರು ಮನಸ್ಸು ಮಾಡಿದರೆ ಕಾಂಗ್ರೆಸ್ ಬರಲಿದೆ. ಈ ಎಲ್ಲ ಕನಸು ಈಡೇರಿಕೆಗೆ ಕಾಂಗ್ರೆಸ್ ಪರವಾಗಿ‌ ಮತದಾನ ಮಾಡಬೇಕಾಗಿದೆ. ಕಾಂಗ್ರೆಸ್ ಬರುವಾಗ‌ ಪ್ರಗತಿಯ ಜೊತೆ ಬರಲಿದೆ ಎಂದರು.

ಮನುಷ್ಯ ಜಾತಿಯೊಂದೇ ಧರ್ಮ ಎಂದು ನಂಬಿದವನು ನಾನು. ಅಧಿಕಾರ ಇಲ್ಲದಾಗಲೂ ನಾನು ಸಮಾಜಕ್ಕಾಗಿ ಕೈಲಾದಷ್ಟು ಸೇವೆ ಸಲ್ಲಿಸಿದವನು. ಇನ್ನೂ ಸೇವೆ ಸಲ್ಲಿಸಬೇಕಾದ ಅಗತ್ಯ ಇದೆ. ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮತದಾನ ಮಾಡಿ ಆಯ್ಕೆ ಮಾಡಬೇಕು ಎಂದು‌ ಮನವಿ ಮಾಡಿಕೊಳ್ಳುತ್ತೇನೆ. ಸರಕಾರದ ಯೋಜನೆ ಜನರಿಗೆ ತಲುಪಿಸಲು ಎಲ್ಲರೂ ಜತೆಯಾಗಬೇಕು ಎಂದೂ ವಿನಂತಿಸಿದರು.
ಈ ವೇಳೆ ಪ್ರಮುಖರಾದ ವಸಂತ ನಾಯ್ಕ, ವಿ.ಎನ್.ನಾಯ್ಕ, ಆರ್.ಎಂ.ಹೆಗಡೆ ಬಾಳೇಸರ, ಸೀಮಾ ಹೆಗಡೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next