Advertisement

ಯಾವ ದುರುದ್ದೇಶವೂ ಇಲ್ಲ: ಗೋಪಾಲ್‌ ಜಿ. 

10:58 AM Nov 28, 2017 | Team Udayavani |

ಉಡುಪಿ: ಗೋರಕ್ಷಣೆಗಾಗಿ ನಾವು ಶಿವಾಜಿಯ ಆಶಯದಂತೆ ನಡೆದುಕೊಳ್ಳುತ್ತೇವೆ ಎನ್ನುವ ಚಿಂತನೆ ನಡೆಸಿದ್ದೇವೆ. ಗೋಹತ್ಯೆ ಸಂಪೂರ್ಣ ನಿಲ್ಲಬೇಕು. ಗೋ ರಕ್ಷಕರ ಮೇಲೆಯೇ ಅನೇಕ ಬಾರಿ ಹಲ್ಲೆಯಾಗಿದೆ. ರಕ್ಷಣೆ ಮಾಡುವವರ ಮೇಲೆಯೇ ದಾಳಿಯಾದಾಗ ನಾವೇನು ಮಾಡಬೇಕು? ಹೀಗಾಗಿ ನಾವು ಶಿವಾಜಿ ಮಹಾರಾಜರ ಆಶಯ ಪಾಲನೆ ಮಾಡಬೇಕಾಗುತ್ತದೆ. ಆದರೆ ಅದರಲ್ಲಿ ಬೇರೆ ಯಾವ ದುರುದ್ದೇಶವೂ ಇಲ್ಲ ಎಂದು ವಿಶ್ವ ಹಿಂದೂ ಪರಿಷದ್‌ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಗೋಪಾಲ್‌ ಜಿ. ತಿಳಿಸಿದ್ದಾರೆ.

Advertisement

ರವಿವಾರ ಹಿಂದೂ ಸಮಾಜೋತ್ಸವದಲ್ಲಿ ಗೋಪಾಲ್‌ ಅವರ ಭಾಷಣಕ್ಕೆ ಸಂಬಂಧಿಸಿದಂತೆ ಸೋಮವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಯೊಂದು ಧರ್ಮದವರಿಗೂ ತಮ್ಮ ಧಾರ್ಮಿಕ ವಿಚಾರಗಳನ್ನು ಪ್ರತಿಪಾದಿಸುವ ಸ್ವಾತಂತ್ರ್ಯವಿದೆ. ಅದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಹೊರತು ಬೇರೆ ಉದ್ದೇಶವಲ್ಲ. ಜನಾಕರ್ಷಣೆಗಾಗಿ ನಾವು ಹೇಳಿಕೆ ನೀಡುವುದಿಲ್ಲ ಎಂದರು.

ರಾಜ್ಯದ ಜನತೆಗೆ ಗೋಹತ್ಯೆ ನಿಷೇಧ ಆಗಬೇಕು ಎಂಬ ಆಸೆಯಿದೆ. ಗೋವುಗಳನ್ನು ಮಾರಾಟ ಮಾಡುವುದಾದರೆ ಕೃಷಿಕರಿಗೆ ಮಾರಾಟ ಮಾಡಿ, ಕಸಾಯಿ ಖಾನೆಗೆ ಕೊಡಬೇಡಿ ಎನ್ನುತ್ತಿದ್ದೇವೆ. ನಿಷೇಧಕ್ಕೆ ಸಂಬಂಧಿಸಿದಂತೆ ಸರಕಾರ ಕಾನೂನು ಪಾಲನೆ ಮಾಡುವಲ್ಲಿ ವಿಫ‌ಲವಾಗಿದೆ. ಇದರಿಂದಾಗಿ ಗೋಹತ್ಯೆ, ದಾಳಿ ನಡೆಯುತ್ತಿದೆ. ಸರಕಾರವೇ ಕಟ್ಟುನಿಟ್ಟಿನ ಕಾನೂನು ರೂಪಿಸಿದರೆ ಸಮಸ್ಯೆಯಿಲ್ಲ ಎಂದರು.

ಜಾತೀಯತೆ, ಅಸ್ಪೃಶ್ಯತೆಗೆ ಸಂಬಂಧಿಸಿದ ಬದಲಾವಣೆ ಆಗುತ್ತಿದೆ. ಏಕಾಏಕಿ ಬದಲಾವಣೆ ಸಾಧ್ಯವಿಲ್ಲ. ದೇವಸ್ಥಾನಗಳಿಗೆ ಎಲ್ಲರಿಗೂ ಮುಕ್ತ ಅವಕಾಶ ನೀಡುವಂತೆ ಎಲ್ಲರಿಗೂ ತಿಳಿಸಿದ್ದೇವೆ. ಬದಲಾವಣೆ ಖಂಡಿತ ಆಗುತ್ತದೆ. ಜನಸಂಖ್ಯೆ ಶಾಪವಲ್ಲ, ಶಕ್ತಿ. ಯುವಸಮು
ದಾಯ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತದೆ. ಹಿಂದೆ ಜನಸಂಖ್ಯೆ ಜಾಸ್ತಿಯಾಗುವುದು ಶಾಪವಾಗಿತ್ತು. ಈಗ ಶಕ್ತಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next