Advertisement

ಪಂಜಾಬ್‌ನ ಈ ಸೋಲಿಗೆ ಕ್ಷಮೆಯಿಲ್ಲ!

08:49 PM Oct 10, 2020 | mahesh |

ಅಬುಧಾಬಿ: ಗೆಲ್ಲುವ ಪಂದ್ಯವನ್ನು ಸೋಲುವುದು ಹೇಗೆ ಎಂಬ ಕಲೆಯನ್ನು ಕೆ.ಎಲ್‌.ರಾಹುಲ್‌ ನೇತೃತ್ವದ ಕಿಂಗ್ಸ್‌ ಇಲವೆನ್‌ ಪಂಜಾಬನ್ನು ನೋಡಿ ಕಲಿಯಬೇಕು. ಶನಿವಾರ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ಧ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೇವಲ ಎರಡು ರನ್‌ಗಳಿಂದ ಕಳೆದುಕೊಂಡಿತು. ಈ ಕೂಟದಲ್ಲಿ ಇದುವರೆಗೆ ಪಂಜಾಬ್‌ 7 ಪಂದ್ಯವಾಡಿದೆ. ಅದರಲ್ಲಿ ಗೆದ್ದಿದ್ದು ಒಂದನ್ನು ಮಾತ್ರ. ಸೋತ ಉಳಿದ ಆರೂ ಪಂದ್ಯಗಳನ್ನು ಪಂಜಾಬ್‌ ಗೆಲ್ಲಲು ಎಲ್ಲ ಅವಕಾಶಗಳಿದ್ದವು. ಅದರಲ್ಲೂ ಬಹುತೇಕ ಪಂದ್ಯಗಳನ್ನು ಪಂಜಾಬ್‌ ತಾನೇ ಬಿಟ್ಟುಕೊಟ್ಟಂತೆ ಸೋತಿದೆ. ಮೊದಲು ಬ್ಯಾಟ್‌ ಮಾಡಿದ ಕೋಲ್ಕತ ನೈಟ್‌ರೈಡರ್ಸ್‌ 20 ಓವರ್‌ಗಳಲ್ಲಿ, 6 ವಿಕೆಟ್‌ ಕಳೆದುಕೊಂಡು 164 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 162 ರನ್‌ ಗಳಿಸಿತು.

Advertisement

ರಾಹುಲ್‌, ಅಗರ್ವಾಲ್‌ ಪ್ರಯತ್ನ ವ್ಯರ್ಥ: ಆರಂಭಿಕ ಕೆ.ಎಲ್‌. ರಾಹುಲ್‌ ಮತ್ತು ಮಾಯಾಂಕ್‌ ಅಗರ್ವಾಲ್‌ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಕನ್ನಡಿಗರಾದ ಅವರಿಬ್ಬರು ಮೊದಲ ವಿಕೆಟಿಗೆ 14.2 ಓವರ್‌ಗಳಲ್ಲಿ 115 ರನ್‌ ಪೇರಿಸಿ ಸುಲಭ ಗೆಲುವಿನ ಸೂಚನೆಯಿತ್ತರು. ಆದರೆ 56 ರನ್‌ ಗಳಿಸಿದ ಅಗರ್ವಾಲ್‌ ಔಟಾಗುತ್ತಲೇ ತಂಡದ ರನ್‌ ವೇಗಕ್ಕೆ ಕಡಿವಾಣ ಬಿತ್ತು. ಅಗರ್ವಾಲ್‌ 39 ಎಸೆತಗಳಿಂದ 56 ರನ್‌ ಹೊಡೆದಿದ್ದರು. ನಿಕೋಲಸ್‌ ಪೂರನ್‌, ಸಿಮ್ರಾನ್‌ ಸಿಂಗ್‌ ಸಿಡಿಯಲು ವಿಫ‌ಲರಾದ ಕಾರಣ ರಾಹುಲ್‌ ಒತ್ತಡಕ್ಕೆ ಸಿಲುಕಿದರು. ಉತ್ತಮವಾಗಿ ಆಡುತ್ತಿದ್ದ ಅವರು 74 ರನ್‌ ಗಳಿಸಿ 19ನೇ ಓವರಿನ ಅಂತ್ಯದಲ್ಲಿ ಔಟಾದರು. ಇದರಿಂದ ತಂಡದ ಗೆಲುವಿನ ದಾರಿ ಕಠಿಣವಾಯಿತು. ಮುಂದೆ ಮ್ಯಾಕ್ಸ್‌ವೆಲ್‌ ಆಗಲೀ, ಮನ್‌ದೀಪ್‌ ಸಿಂಗ್‌ ಆಗಲಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಲು ಸಾಧ್ಯವಾಗದಿದ್ದರಿಂದ ಪಂಜಾಬ್‌ ಸೋತು ಹೋಯಿತು.

Advertisement

Udayavani is now on Telegram. Click here to join our channel and stay updated with the latest news.

Next