Advertisement

ರಾಜ್ಯದಲ್ಲಿ ಹೊಸ ನಿಗಮಗಳ ಸ್ಥಾಪನೆ ಇಲ್ಲ: ಸರಕಾರ

01:21 PM Feb 16, 2022 | Team Udayavani |

ಬೆಂಗಳೂರು : ಸರಕಾರದ ಮುಂದೆ ಹೊಸ ನಿಗಮ- ಮಂಡಳಿ ರಚನೆ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ವಿಧಾನಸಭೆಗೆ ತಿಳಿಸಿದ್ದಾರೆ.

Advertisement

ಗಾಣಿಗ ಸಮುದಾಯದ ಅಭಿವೃದ್ಧಿಗೆ ನಿಗಮ- ಮಂಡಳಿ ರಚಿಸುವಂತೆ ಶಾಸಕರಾದ ದಿನಕರ ಶೆಟ್ಟಿ, ಆನಂದ ನ್ಯಾಮಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಒಟ್ಟು ೧೨ ನಿಗಮಗಳಿವೆ. ಎಲ್ಲ ಹಿಂದುಳಿದ ವರ್ಗದ ಸಮಸ್ಯೆಗಳನ್ನು ಇವುಗಳ ಮೂಲಕ ನಿಭಾಯಿಸಲಾಗುತ್ತಿದೆ. ಇತ್ತೀಚೆಗೆ ಸರಕಾರ ಆರ್ಯ ವೈಶ್ಯ ನಿಗಮ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

ನಿಗಮಗಳನ್ನು ರಚನೆ ಮಾಡುವುದು ಸರಕಾರಕ್ಕೆ ಆರ್ಥಿಕವಾಗಿ ಹೊರೆಯಾಗುತ್ತದೆ. ಈಗಿರುವ ನಿಗಮದ ಶೇ. ೪೦ ರಷ್ಟು ಅನುದಾನ ಸಿಬ್ಬಂದಿಯ ಖರ್ಚು ವೆಚ್ಚಕ್ಕೆ ವಿನಿಯೋಗವಾಗುತ್ತಿದೆ. ಹೀಗಾಗಿ ಹೊಸ ನಿಗಮ‌ ರಚನೆ ಸಾಧ್ಯವಿಲ್ಲ. ಗಾಣಿಗ ಸಮುದಾಯದ ಅಭಿವೃದ್ಧಿಗೆ ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕವೇ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next